STORIES OF HOPE - Site of cheese production in Jordan's little village of Adir STORIES OF HOPE - Site of cheese production in Jordan's little village of Adir 

'ಚೀಸ್ ತಯಾರಿಸುವ ಕಲೆ' - ಜೋರ್ಡಾನ್‌ನಲ್ಲಿ, ಧರ್ಮಸಭೆಯ ಯೋಜನೆಯ

ಜೋರ್ಡಾನ್‌ನಲ್ಲಿರುವ ಇರಾಕ್‌ ನ ನಿರಾಶ್ರಿತರು ಮತ್ತು ಸ್ಥಳೀಯ ಮಹಿಳೆಯರಿಗೆ ಧರ್ಮಸಭೆಯು ನಡೆಸುವ ಪ್ರಸಿದ್ಧ ಜೋರ್ಡಾನ್ ಉಪಹಾರ ಗೃಹಕ್ಕಾಗಿ(ರೆಸ್ಟೋರೆಂಟ್‌) ಚೀಸ್ ಉತ್ಪಾದಿಸುವ ಮೂಲಕ ಘನತೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿರುವ ಸ್ಥಳಗಳಿಗೆ ವ್ಯಾಟಿಕನ್ ಸುದ್ಧಿ ಭೇಟಿ ನೀಡಿದೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್ - ಆದಿರ್ ಮತ್ತು ಅಮ್ಮಾನ್, ಜೋರ್ಡಾನ್

ಕಳೆದ ಶತಮಾನದಲ್ಲಿ, ಜೋರ್ಡಾನ್ ನೆರೆಯ ದೇಶಗಳಿಂದ ಅಪಾರ ಪ್ರಮಾಣದ ನಿರಾಶ್ರಿತರನ್ನು ಸ್ವೀಕರಿಸಿದೆ - ಬಿಕ್ಕಟ್ಟಿನಿಂದ ಬಳಲುತ್ತಿರುವ ಇರಾಕ್ ಸೇರಿದಂತೆ ಬಹುತೇಕ ನಿರಾಶ್ರಿತರನ್ನು ಸ್ವೀಕರಿಸಿದೆ.

ಜೋರ್ಡಾನಿನ ರಾಜಧಾನಿ ಅಮ್ಮಾನ್‌ನಲ್ಲಿರುವ ಧರ್ಮಸಭೆಯು ನಡೆಸುವ ಉಪಹಾರ ಗೃಹ(ರೆಸ್ಟೋರೆಂಟ್‌)ದಲ್ಲಿ, ಅನೇಕರು ಚೀಸ್ ಉತ್ಪಾದಿಸುವ ಕೆಲಸದಲ್ಲಿ ಶ್ರಮಿಸುತ್ತಿದ್ದಾರೆ.

ದುರ್ಬಲ ಮಹಿಳೆಯರಿಗೆ ಸಹಾಯ ಮಾಡುವುದು
ಇಟಾಲಿಯದ ಧರ್ಮಗುರುವಾದ ಮಾರಿಯೋ ಕಾರ್ನಿಯೋಲಿರವರು ಸ್ಥಾಪಿಸಿದ ಹಬೀಬಿ ಅಸೋಸಿಯೇಷನ್ ನಿರಾಶ್ರಿತರಿಗೆ ತರಬೇತಿ ನೀಡುತ್ತಿದೆ.

ಇರಾಕ್ ನ ನಿರಾಶ್ರಿತರೊಂದಿಗಿನ ಆ ಉದ್ಯಮದ ಜೊತೆಗೆ, ಹಬೀಬಿ ಅಸೋಸಿಯೇಷನ್ ದಕ್ಷಿಣ ಜೋರ್ಡಾನ್‌ನಲ್ಲಿ ಗಂಭೀರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಸಹಾಯ ಮಾಡಲು, ಚೀಸ್ ತಯಾರಿಸುವ ಯೋಜನೆಯನ್ನು ಆದಿರ್ ಗ್ರಾಮದಲ್ಲಿ ನಡೆಸುತ್ತಿದೆ.

ಅಮ್ಮಾನ್‌ನಿಂದ ಪುಟ್ಟ ಹಳ್ಳಿಗೆ ಎರಡು ಗಂಟೆಗಳ ಪ್ರಯಾಣದ ನಂತರ ವ್ಯಾಟಿಕನ್ ಸುದ್ಧಿ, ಅವರ ಮುಂಜಾನೆ ಉತ್ಪಾದನಾ ಕಾರ್ಯದ ಪ್ರಾರಂಭದ ನಂತರ ತನ್ನ ಕಣ್ಣುಗಳಿಂದ ಈ ಯೋಜನೆಯನ್ನು ನೋಡುವ ಸವಲತ್ತನ್ನು ಹೊಂದಿತ್ತು.

ಚೀಸ್ ತಯಾರಿಸುವ ಕಲೆ
30 ರಿಂದ ಸುಮಾರು 60 ವರ್ಷ ವಯಸ್ಸಿನ ಆರು ಮಹಿಳೆಯರು ಈ ಉಪಕ್ರಮದ ಪ್ರಮುಖ ಪಾತ್ರಧಾರಿಗಳು. ಮೇಲ್ವಿಚಾರಕಿ ಇಕ್ಲಾಸ್ ಬಕ್ವೈನ್ ರವರು ಇದರ ಮೇಲ್ವಿಚಾರಕಿ.

ಅವರು ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ತಾವು ಪೌಷ್ಟಿಕಾಂಶ ವಿಷಯದ ಅಧ್ಯಯನ ಮಾಡಿರುವುದಾಗಿ ಮತ್ತು ಇಟಾಲಿಯನ್ ರಿಕೊಟ್ಟಾ ಮತ್ತು ಪೆಕೊರಿನೊ ಚೀಸ್‌ಗಳನ್ನು ಉತ್ಪಾದಿಸುವ ಈ ಕೆಲಸವು ತಮ್ಮ ರಚನೆ ಮತ್ತು ಉತ್ಸಾಹವನ್ನು ಈ ಕೆಲಸದೊಂದಿಗೆ ಸಮನ್ವಯಗೊಳಿಸಲು ಅರ್ಥಪೂರ್ಣ ಮಾರ್ಗವಾಗಿದೆ ಎಂದು ಹೇಳಿದರು.

ರಿಕೊಟ್ಟಾ ಮತ್ತು ಪೆಕೊರಿನಿ
ಹಬೀಬಿಯ ಕಾರ್ಯಾಚರಣಾ ಅಧಿಕಾರಿ ಶಫಿಕ್ ಶಾಹಿನ್ ರವರು, ರಿಕೊಟ್ಟಾ ಮತ್ತು ಪೆಕೊರಿನೊ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಕ್ಷಿಸಲು ವ್ಯಾಟಿಕನ್ ಸುದ್ಧಿಯವರಿಗೆ ಅನುವು ಮಾಡಿಕೊಟ್ಟರು. ದಕ್ಷಿಣ ಜೋರ್ಡಾನ್‌ನಲ್ಲಿ ಕುರಿ ಹಾಲಿನ ಉತ್ತಮ ಲಭ್ಯತೆಯಿಂದಾಗಿ ಚೀಸ್ ತಯಾರಿಕೆಗೆ ಈ ಸ್ಥಳವು ಸೂಕ್ತವಾಗಿದೆ ಎಂದು ಅವರು ವಿವರಿಸಿದರು.

ಧರ್ಮಸಭೆಯ ಯೋಜನೆ
ಈ ಯೋಜನೆಗಳು ಮಹಿಳೆಯರು ಮತ್ತು ನಿರಾಶ್ರಿತರಿಬ್ಬರಿಗೂ ಸಹಯೋಗದ ಯೋಜನೆಯ ಮೂಲಕ ಕೆಲಸ ಮಾಡಲು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತವೆ.
ವೇತನಗಳು ಹೆಚ್ಚಿಲ್ಲದಿದ್ದರೂ, ಅವು ಸ್ವಲ್ಪ ಆದಾಯವನ್ನು ಒದಗಿಸುವ ಮೂಲಕ ಜೀವನದಲ್ಲಿ ವ್ಯತ್ಯಾಸವನ್ನುಂಟುಮಾಡಲು ಸಹಾಯ ಮಾಡುತ್ತವೆ.

ಮತ್ತೊಂದೆಡೆ, ನಿರಾಶ್ರಿತರು: ಕೆಲವರು ಜೋರ್ಡಾನ್‌ನಲ್ಲಿ ನೆಲೆಸಲು ಬಯಸಿದರೆ, ಇನ್ನು ಕೆಲವರು ಆಸ್ಟ್ರೇಲಿಯಾ ಅಥವಾ ಕೆನಡಾದಂತಹ ಇತರ ದೇಶಗಳಿಗೆ ಹೋಗಲು ಬಯಸುತ್ತಾರೆ. ವಾಸ್ತವವಾಗಿ, ವೃತ್ತಿಪರ ರಚನೆ ಮತ್ತು ತರಬೇತಿಯಿಂದಾಗಿ ಆ ದೇಶಗಳಿಗೆ ತೆರಳಲು ಸಾಧ್ಯವಾದ ಮತ್ತು ಅರ್ಥಪೂರ್ಣ ಕೆಲಸವನ್ನು ಪಡೆಯಲು ಸಾಧ್ಯವಾದವರ ಅನೇಕ ಯಶಸ್ಸಿನ ಕಥೆಗಳಿವೆ ಎಂದು ನಾವು ಕೇಳಿದ್ದೇವೆ.

ಇದು ಹಬೀಬಿ ನೇತೃತ್ವದ ಮತ್ತೊಂದು ಯೋಜನೆಯಿಂದಾಗಿ, ಇಟಾಲಿಯದ ವಿನ್ಯಾಸಕರ ಸಹಾಯದಿಂದ ಇರಾಕ್ ನಿರಾಶ್ರಿತ ಮಹಿಳೆಯರಿಗೆ ಹೊಲಿಯಲು ತರಬೇತಿ ನೀಡಿದೆ.

09 ಜನವರಿ 2025, 12:45