2025.01.11 Sunday Gospel Reflection 2025.01.11 Sunday Gospel Reflection 

ಪ್ರಭುವಿನ ದಿನದ ಚಿಂತನೆ: ‘ಪ್ರಭುವಿನ ದೀಕ್ಷಾಸ್ನಾನ’

ಧರ್ಮಸಭೆಯು ಇಂದು ‘ಪ್ರಭುವಿನ ದೀಕ್ಷಾಸ್ನಾನದ’ ಹಬ್ಬವನ್ನು ಆಚರಿಸುತ್ತಿರುವಾಗ, ಧರ್ಮಗುರು ಎಡ್ಮಂಡ್ ಪವರ್ ರವರು, OSB, ಈ ದಿನದ ದೈವಾರಾಧನಾ ವಿಧಿಯ ವಾಚನಗಳ ಕುರಿತು ತಮ್ಮ ಚಿಂತನೆಗಳನ್ನು ನೀಡುತ್ತಾರೆ.

ಧರ್ಮಗುರು.ಎಡ್ಮಂಡ್ ಪವರ್, OSB

ನಿಮ್ಮಲ್ಲಿ ಎಷ್ಟು ಜನರಿಗೆ ನಿಮ್ಮ ದೀಕ್ಷಾಸ್ನಾನದ ದಿನಾಂಕ ತಿಳಿದಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ? ಇಂದಿನ ಹಬ್ಬ ಕಳೆದು ಆರು ದಿನಗಳ ನಂತರ ನನ್ನ ದೀಕ್ಷಾಸ್ನಾನದ ದಿನ ಜನವರಿ 18ರಂದು (ನಾನು ವರ್ಷವನ್ನು ಹೇಳುವುದಿಲ್ಲ!) ಬರುತ್ತದೆ ಎಂಬುದು ಇತ್ತೀಚೆಗೆ ನಾನು ಕಂಡುಕೊಂಡೆ. ‘ಪ್ರಭುವಿನ ದೀಕ್ಷಾಸ್ನಾನʼದೊಂದಿಗೆ ನಾವು ಕ್ರಿಸ್‌ಮಸ್ ಕಾಲವನ್ನು ಮುಕ್ತಾಯಗೊಳಿಸುತ್ತೇವೆ, ಇದು ನಿಜವಾಗಿಯೂ "ದೈವದರ್ಶನದ" ಕಾಲವಾಗಿದೆ: ನಮ್ಮ ಮಾನವ ಜಗತ್ತಿನಲ್ಲಿ ಪ್ರಭುವಿನ ಉಪಸ್ಥಿತಿಯ ಅಭಿವ್ಯಕ್ತಿಗಳ ಸರಣಿ, ಅವರ ಜನನದಿಂದ ಪ್ರಾರಂಭವಾಗಿ ಇಂದು ಅವರ ಸಾರ್ವಜನಿಕ ಜೀವನದ ಉದ್ಘಾಟನೆಯೊಂದಿಗೆ ಕೊನೆಗೊಳ್ಳುತ್ತದೆ.

ನಮ್ಮ ದೀಕ್ಷಾಸ್ನಾನದ ಬಗ್ಗೆ ನಾನು ಕೇಳಿದೆ: (ಸಾಂಕೇತಿಕವಾಗಿ) ನೀರಿನಲ್ಲಿ ಧುಮುಕುವುದು, ಕ್ರಿಸ್ತರೊಂದಿಗೆ ಪವಿತ್ರ ಹೊಸ ಜೀವನಕ್ಕೆ ಕಾಲಿಡಲು ನಾವು ಸಾಯುತ್ತೇವೆ. ಅವರ ಈಸ್ಟರ್ ರಹಸ್ಯದಲ್ಲಿ ಅವರೊಂದಿಗೆ ಗುರುತಿಸಲ್ಪಟ್ಟ ನಾವು, ಅವರ ದೈವಿಕ ಸ್ವಭಾದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ (2 ಪೇತ್ರ 1:4).

ಪ್ರಾಚೀನ ಚಿಂತನೆಯಲ್ಲಿ ಇಡೀ ಜಗತ್ತನ್ನು ಪ್ರತಿನಿಧಿಸುವ ನಾಲ್ಕು ಅಂಶಗಳಿವೆ ಎಂದು ನಂಬಲಾಗಿತ್ತು: ಗಾಳಿ, ಭೂಮಿ, ಬೆಂಕಿ ಮತ್ತು ನೀರು. ಜೋರ್ಡಾನ್ ನದಿಯಲ್ಲಿ ನಡೆಯುವ ದೃಶ್ಯವನ್ನು ಇಂದು ಶುಭಸಂದೇಶದ ವಾಕ್ಯಗಳ ಮೂಲಕ ನಾವು ನೋಡುತ್ತೇವೆ. ನನ್ನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ, ಅವರು ನಿಮಗೆ ಪವಿತ್ರಾತ್ಮರಿಂದಲೂ ಮತ್ತು ಬೆಂಕಿಯಿಂದಲೂ ದೀಕ್ಷಾಸ್ನಾನ ಕೊಡುವರು, ಎಂದು ಸಂತ ಸ್ನಾನಿಕ ಯೋವಾನ್ನರು ಘೋಷಿಸುತ್ತಾರೆ ಮತ್ತು ಗ್ರೀಕ್ ಭಾಷೆಯಲ್ಲಿ "ಆತ್ಮ" ಎಂಬ ಪದಕ್ಕೆ ಉಸಿರಾಟ ಅಥವಾ ಗಾಳಿ ಎಂಬ ಅರ್ಥವೂ ಇದೆ ಮತ್ತು ನಮ್ಮ ಶ್ವಾಸಕೋಶದಲ್ಲಿ ಗಾಳಿಯ ಚಲನೆಯು ನಮಗೆ ಜೀವಿಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ. ದೇವರ ಪ್ರೀತಿಯ ಬೆಂಕಿಯು ಕೆಲವೊಮ್ಮೆ ದುಃಖದ ಮೂಲಕ ನಮ್ಮನ್ನು ಶುದ್ಧೀಕರಿಸುತ್ತದೆ. ನಾವು ನಮ್ಮ ದೇಹಗಳನ್ನು ತರುತ್ತೇವೆ, ... ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು (ಆದಿ 2:7). ವಾಸ್ತವವಾಗಿ, ಹೀಬ್ರೂ ಹೆಸರು ಆದಾಮ ಎಂಬುದು ನೆಲ ಅಥವಾ ಭೂಮಿ ಎಂಬ ಪದಕ್ಕೆ ಸಂಬಂಧಿಸಿದೆ. ಯೇಸು ನದಿಯನ್ನು ಪ್ರವೇಶಿಸಿದಾಗ, ಅದು ಪಾಪವನ್ನು ತೊಳೆಯುವುದಕ್ಕಾಗಿ ಅಲ್ಲ, ಆದರೆ, ಧರ್ಮಸಭೆಯ ಪಿತೃಗಳ ಚಿಂತನೆಯಲ್ಲಿ, ದೀಕ್ಷಾಸ್ನಾನ ನೀರನ್ನು ಎಲ್ಲಾ ಸಮಯದಲ್ಲೂ ಪವಿತ್ರಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಪ್ರಭುವಿನ ದೈವದರ್ಶನವು, ಪ್ರಾಚೀನ ಸ್ತುತಿಸ್ತೋತ್ರದ ಗೀತೆಯಲ್ಲಿ: "ದೇವರ ಕುರಿಮರಿಯು ಜೋರ್ಡಾನ್‌ನ ನೀರಿನ ಆಶೀರ್ವಾದದಲ್ಲಿ ಮತ್ತೆ ಪ್ರಕಟಪಡಿಸುತ್ತದೆ, ಪಾಪವನ್ನು ಎಂದಿಗೂ ಅರಿಯದವನು ನಮ್ಮ ಪಾಪಗಳನ್ನು ತೊಳೆಯುವ ಮೂಲಕ ನಮ್ಮ ಪಾಪಗಳನ್ನು ನಿವಾರಿಸಿದ್ದಾನೆ".

ಇಂದಿನ ಒಂದು ವಿವರವನ್ನು, ಸಂತ ಲೂಕರ ಶುಭಸಂದೇಶದಲ್ಲಿ ಮಾತ್ರ ಉಲ್ಲೇಖಿಸಲಾಗಿದೆ: ಯೇಸುವು ತಮ್ಮ ದೀಕ್ಷಾಸ್ನಾನದ ಮರು ಕ್ಷಣವೇ ಪ್ರಾರ್ಥನೆ ಮಾಡತ್ತಿದ್ದರು, ಆ ಕ್ಷಣದಲ್ಲಿಯೇ, ಪಿತನ ಧ್ವನಿ ಸ್ವರ್ಗದಿಂದ ಬಂದಿತು. ಪ್ರಭುವಿನೊಂದಿಗೆ ನಮ್ಮ ದೀಕ್ಷಾಸ್ನಾನದ ಗುರುತನ್ನು ಗಮನಿಸಿದರೆ, ಪಿತ ದೇವರ ಮಾತುಗಳು ನಮಗೂ ಸಂಬೋಧಿಸಲ್ಪಟ್ಟಿವೆ: ನೀನು ನನ್ನ ಪ್ರೀತಿಯ (ಮಗ ಅಥವಾ ಮಗಳು); ನನಗೆ ಪರಮ ಪ್ರಿಯನು, ನನ್ನ ಮೆಚ್ಚುಗೆಗೆ ಪಾತ್ರನು. ಕ್ರಿಸ್‌ಮಸ್ ಕಾಲದ ಕೊನೆಯ ದಿನದ ಶುಭಸಂದೇಶವು ನಮ್ಮಲ್ಲಿ ಪ್ರತಿಯೊಬ್ಬರಿಗೂ ದೇವರ ಪ್ರೀತಿಯ ಘೋಷಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಭಾನುವಾರ 2025ರ ಜೂಬಿಲಿ ವರ್ಷದಲ್ಲಿ ಸಾಧಾರಣ ಕಾಲದ ಮೊದಲ ಭಾನುವಾರವೂ ಆಗಿದೆ. ದೇವರಿಂದ ಪ್ರೀತಿಸಲ್ಪಡುವುದು ವರ್ಷದ ಸಂದೇಶವನ್ನು ಸ್ವೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ: ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ, ಏಕೆಂದರೆ ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ (ರೋಮ 5:5).

10 ಜನವರಿ 2025, 10:49