A Pro-Yoon protester stands next to U.S. and South Korean flags as she takes part in a rally to support impeached South Korean President Yoon Suk Yeol near his official residence in Seoul A Pro-Yoon protester stands next to U.S. and South Korean flags as she takes part in a rally to support impeached South Korean President Yoon Suk Yeol near his official residence in Seoul 

ಬಿಕ್ಕಟ್ಟಿನ ನಡುವೆಯೂ ಸಾಮಾನ್ಯ ಒಳಿತಿನತ್ತ ಗಮನ

ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿಯ ಪ್ರಾರ್ಥನಾ ಮಂದಿರದಲ್ಲಿ ನಡೆಯುತ್ತಿದ್ದ ದಿವ್ಯಬಲಿಪೂಜೆಯಲ್ಲಿ, ಮಹಾಧರ್ಮಾಧ್ಯಕ್ಷರಾದ ಪೀಟರ್ ಚುಂಗ್ ಸೂನ್-ಟೈಕ್ ರವರು, ದೇಶದ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಹಿತಾಸಕ್ತಿಗಳನ್ನು ಮೀರಿ ಕಾರ್ಯನಿರ್ವಹಿಸುವಂತೆ ಕಥೋಲಿಕ ಸಂಸದರಿಗೆ ಕರೆ ನೀಡಿದರು.

ಲಿಸಾ ಝೆಂಗಾರಿನಿ

ದೇಶದ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಸವಾಲುಗಳ ನಡುವೆ ಸಾಮಾನ್ಯ ಹಿತದೃಷ್ಟಿಗೆ ಆದ್ಯತೆ ನೀಡಬೇಕೆಂದು ಸಿಯೋಲ್‌ನ ಮಹಾಧರ್ಮಾಧ್ಯಕ್ಷರಾದ ಪೀಟರ್ ಚುಂಗ್ ಸೂನ್-ಟೈಕ್ ರವರು ದಕ್ಷಿಣ ಕೊರಿಯಾದ ಕಥೊಲಿಕ ಸಂಸತ್ ಸದಸ್ಯರನ್ನು ಒತ್ತಾಯಿಸಿದ್ದಾರೆ.

ಡಿಸೆಂಬರ್ 3, 2024 ರಂದು ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ರವರ ಅಲ್ಪಾವಧಿಯ ಸಮರ ಕಾನೂನು ಘೋಷಣೆಯ ನಂತರ ಬಿಕ್ಕಟ್ಟು ಪ್ರಾರಂಭವಾಯಿತು, ಇದು ವ್ಯಾಪಕ ಪ್ರತಿಭಟನೆಗಳಿಗೆ ಮತ್ತು ಅಂತಿಮವಾಗಿ ಅವರ ದೋಷಾರೋಪಣೆಗೆ ಕಾರಣವಾಯಿತು. ಈ ಪರಿಸ್ಥಿತಿಯು ಆರ್ಥಿಕ ಅಸ್ಥಿರತೆಯನ್ನು ಉಲ್ಬಣಗೊಳಿಸಿದೆ, ವಿಶೇಷವಾಗಿ ಪುಟ್ಟ ವ್ಯವಹಾರಗಳು ಮತ್ತು ಜೀವನ ಸಾಗಿಸಲು ಹೆಣಗಾಡುತ್ತಿರುವ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ.

ಪ್ರಜಾಪ್ರಭುತ್ವ ಕಾರ್ಯವಿಧಾನಗಳ ಮೂಲಕ ನಾವು ರಾಜಕೀಯ ಸ್ಥಿರತೆಯನ್ನು ಪುನಃಸ್ಥಾಪಿಸಬೇಕು
ರಾಷ್ಟ್ರೀಯ ಅಸೆಂಬ್ಲಿಯ ಪ್ರಾರ್ಥನಾ ಮಂದಿರದಲ್ಲಿ ಮಹಾಧರ್ಮಾಧ್ಯಕ್ಷರಾದ ಚುಂಗ್ ರವರ ವಿಶೇಷ ದಿವ್ಯಬಲಿಪೂಜೆಯಲ್ಲಿ ಮಾತನಾಡಿದ ಇವರು, ಪಕ್ಷದ ಹಿತಾಸಕ್ತಿಗಳನ್ನು ಮೀರಿ ರಾಷ್ಟ್ರಕ್ಕೆ ಒಟ್ಟಾರೆಯಾಗಿ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿರುವ ದೀರ್ಘಕಾಲೀನ ನೀತಿಗಳ ಮೇಲೆ ಕೇಂದ್ರೀಕರಿಸುವ ಬಿಕ್ಕಟ್ಟನ್ನು ನಿವಾರಿಸಲು ಸಹಕರಿಸುವ ಅಗತ್ಯವನ್ನು ಒತ್ತಿ ಹೇಳಿದರು.

"ಯಾವ ಪಕ್ಷವು ಸರ್ಕಾರದಲ್ಲಿದ್ದರೂ(ಅಧಿಕಾರದಲ್ಲಿದ್ದರೂ) ಅಥವಾ ವಿರೋಧದಲ್ಲಿದ್ದರೂ, ನಾವು ಪ್ರಜಾಪ್ರಭುತ್ವ ಕಾರ್ಯವಿಧಾನಗಳ ಮೂಲಕ ರಾಜಕೀಯ ಸ್ಥಿರತೆಯನ್ನು ತ್ವರಿತವಾಗಿ ಪುನಃಸ್ಥಾಪಿಸಬೇಕು" ಎಂದು ಅವರು ತಮ್ಮ ಪ್ರಬೋಧನೆಯಲ್ಲಿ ಹೇಳಿದರು.

ಬಿಕ್ಕಟ್ಟನ್ನು ನಿವಾರಿಸಲು ನಂಬಿಕೆ, ಪರಸ್ಪರ ಗೌರವ ಮತ್ತು ಸಹಕಾರದ ಮಹತ್ವ.
ಮಹಾಧರ್ಮಾಧ್ಯಕ್ಷರ ಪ್ರಬೋಧನೆಯು ರಾಜಕೀಯ ನಾಯಕರಿಗೆ ಮಾರ್ಗದರ್ಶನ ನೀಡುವಲ್ಲಿ ವಿಶ್ವಾಸದ ಪಾತ್ರವನ್ನು ಎತ್ತಿ ತೋರಿಸಿತು, ವಿಭಜನೆಯ ಬದಲು ಸಾಮರಸ್ಯ ಮತ್ತು ಸಹಬಾಳ್ವೆಗಾಗಿ ಪ್ರತಿಪಾದಿಸುವಂತೆ ಅವರನ್ನು ಒತ್ತಾಯಿಸಿತು.

ನಂತರ ಅವರು ಅಧ್ಯಕ್ಷೀಯ ಕಚೇರಿಯಲ್ಲಿ ರಾಷ್ಟ್ರೀಯ ಅಸೆಂಬ್ಲಿ ವಕ್ತಾರರಾದ ವೂ ವಾನ್-ಶಿಕ್ ರವರನ್ನು ಭೇಟಿಯಾಗಿ ದಕ್ಷಿಣ ಕೊರಿಯಾವನ್ನು ಆವರಿಸಿದ್ದ ಬಿಕ್ಕಟ್ಟುಗಳಾದ ಮಾರ್ಷಲ್ ಲಾ ವಿವಾದ, ದೋಷಾರೋಪಣೆ ಪ್ರಕ್ರಿಯೆಗಳು ಮತ್ತು ಹಿಂದಿನ ವರ್ಷದ ಕೊನೆಯಲ್ಲಿ ನಡೆದ ವಾಯು ವಿಕೋಪದ ಬಗ್ಗೆ ಚರ್ಚಿಸಿದರು.

ಪರಸ್ಪರ ಗೌರವ ಮತ್ತು ಮಾನವೀಯ ನಾಯಕತ್ವಕ್ಕಾಗಿ ಮಹಾಧರ್ಮಾಧ್ಯಕ್ಷರು ನೀಡಿದ ಕರೆಗೆ ರಾಷ್ಟ್ರದ ಚೇತರಿಕೆಗೆ ಅದರ ಪ್ರಸ್ತುತತೆಯನ್ನು ಗಮನಿಸಿ, ವೂರವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಧರ್ಮಾಧ್ಯಕ್ಷರು ಮತ್ತು ವಕ್ತಾರರಾದ ವೂರವರು 2027ರಲ್ಲಿ ಸಿಯೋಲ್‌ನಲ್ಲಿ ನಡೆಯಲಿರುವ ವಿಶ್ವ ಯುವ ದಿನದ ಬಗ್ಗೆ ಚರ್ಚಿಸಿದರು. ದಕ್ಷಿಣ ಕೊರಿಯಾದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಚೈತನ್ಯವನ್ನು ಪ್ರದರ್ಶಿಸಲು ಇದು ಒಂದು ಅವಕಾಶ ಎಂದು ಭಾವಿಸಿ, ವೂರವರು ಈ ಕಾರ್ಯಕ್ರಮದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಸೆಂಬ್ಲಿ ಈ ಉಪಕ್ರಮಕ್ಕೆ ತನ್ನ ಬೆಂಬಲವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.

08 ಜನವರಿ 2025, 15:41