2025.01.02 thailand bishop Arpondratana jubilee opening chiang mai 2025.01.02 thailand bishop Arpondratana jubilee opening chiang mai  (Diocese of Chiang Mai)

ಥಾಯ್ ಧರ್ಮಾಧ್ಯಕ್ಷರಿಂದ ಜೂಬಿಲಿ‌ ವರ್ಷದ ಉದ್ಘಾಟನೆಯ ಆಚರಣೆ, ಅಪಾಯದಲ್ಲಿರುವ ಮಕ್ಕಳಿಗೆ ಭರವಸೆ

ಥಾಯ್ಲೆಂಡ್‌ನಲ್ಲಿರುವ, ಚಿಯಾಂಗ್ ಮಾಯ್‌ನ ಉತ್ತರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕ್ಸೇವಿಯರ್ ವಿರಾ ಅರ್ಪೋಂಡ್ರಾಟಾನಾರವರು ಕಥೋಲಿಕರನ್ನು ಕುರಿತು, 2025ರ ಜೂಬಿಲಿ ವರ್ಷದ ಭರವಸೆಯ ಆರಂಭದಲ್ಲಿ, ಯೇಸುಕ್ರಿಸ್ತರಿಗೆ ನಮ್ಮ ಹೃದಯವನ್ನು ತೆರೆಯುವಂತೆ ಒತ್ತಾಯಿಸಿದ್ದಾರೆ.

ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ - ಥೈಲ್ಯಾಂಡ್, ಲಿಕಾಸ್‌ ಸುದ್ಧಿ

ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕ್ಸೇವಿಯರ್ ವೀರಾ ಅರ್ಪೋಂಡ್ರಾತನರವರು 2025ರ ಭರವಸೆಯ ಜೂಬಿಲಿ ವರ್ಷದ ಉದ್ಘಾಟನೆಯನ್ನು ಗುರುತಿಸಲು ದಿವ್ಯಬಲಿಪೂಜೆಯನ್ನು ಆಚರಿಸಿದರು.

ಡಿಸೆಂಬರ್ 28ರಂದು ಯೇಸುವಿನ ಪವಿತ್ರ ಹೃದಯದ ದೇವಾಲಯದಲ್ಲಿ (ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕ್ಯಾಥೆಡ್ರಲ್‌) ನಡೆದ ಸಮಾರಂಭವು 'ಭರವಸೆಯ ಯಾತ್ರಿಕರು' ಎಂಬ ಜಾಗತಿಕ ಶೀರ್ಷಿಕೆಯೊಂದಿಗೆ ವಿಶ್ವಾಸದ ಪರಿವರ್ತಕ ಪ್ರಯಾಣಕ್ಕೆ ನಾಂದಿ ಹಾಡಿತು.

ಈ ಕಾರ್ಯಕ್ರಮವು ವಿಶ್ವಾಸ, ತಪಸ್ಸು ಮತ್ತು ದೇವರೊಂದಿಗಿನ ಸಂಬಂಧಗಳನ್ನು ಮರುಸ್ಥಾಪಿಸುವ ಪ್ರತಿಬಿಂಬದ ಅವಧಿಯಾಗಿ ಮಾತ್ರವಲ್ಲದೆ ಅಗತ್ಯವಿರುವವರಿಗೆ ಸಹಾಯ ಮಾಡುವುದು ಸೇರಿದಂತೆ ಇತರ ಕ್ರಮ ತೆಗೆದುಕೊಳ್ಳಲು ಸ್ಫೂರ್ತಿಯಾಗಿದೆ.

"ನಾವು ಯಾವುದೇ ರಾಷ್ಟ್ರೀಯತೆಯಲ್ಲಿ ಹುಟ್ಟಿದ್ದರೂ, ನಾವು ಯಾವುದೇ ಬುಡಕಟ್ಟಿಗೆ ಸೇರಿದವರಾಗಿದ್ದರೂ ಅಥವಾ ನಾವು ಸಮಾಜದಲ್ಲಿ ಯಾವುದೇ ಸ್ಥಾನಮಾನವನ್ನು ಹೊಂದಿದ್ದರೂ, ಆತನನ್ನು ವಿಶ್ವಾಸಿಸಲು ನಾವು ನಮ್ಮ ಹೃದಯವನ್ನು ತೆರೆಯೋಣ" ಎಂದು ಪ್ರಸ್ತುತ ಬ್ಯಾಂಕಾಕ್ ಮಹಾಧರ್ಮಕ್ಷೇತ್ರದ ಪ್ರೇಷಿತ ಆಡಳಿತಗಾರರಾಗಿರುವ ಧರ್ಮಾಧ್ಯಕ್ಷರಾದ ಅರ್ಪೋಂಡ್ರಾಟಾನಾರವರು ಹೇಳಿದರು.

ಭರವಸೆಯ ಜೂಬಿಲಿ ಕರೆಯಿಂದ ಪ್ರೇರಿತರಾದವರಲ್ಲಿ ಈಶಾನ್ಯ ಥಾರೆ ಮಹಾಧರ್ಮಕ್ಷೇತ್ರದಲ್ಲಿ ನೆಲೆಗೊಂಡಿರುವ ಪವಿತ್ರ ಶಿಲುಬೆ ಸಭೆಯ ಅಭಿಮಾನಿಗಳಾದ ಇಬ್ಬರು ಸಹೋದರಿಯರು ಸೇರಿದ್ದಾರೆ.

ಭರವಸೆಯು "ನಿಷ್ಕ್ರಿಯ ಸದ್ಗುಣವಲ್ಲ, "ಇದು ಅತ್ಯಂತ ಸಕ್ರಿಯ ಸದ್ಗುಣವಾಗಿದೆ.
ಕಳೆದ ಹಲವಾರು ವರ್ಷಗಳಿಂದ ವಿಶೇಷ-ಚೈತನ್ಯತೆಯ ಮಕ್ಕಳ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸಿಸ್ಟರ್.ಥಾನೊಮ್ಶ್ರೀ ರಾಚಪನ್ಯಾ ಮತ್ತು ಸಿಸ್ಟರ್.ಮಿಂಗ್ಕ್ವಾನ್ ಥಸೀಪು, ಚಿಯಾಂಗ್ ಮಾಯ್ ನಗರದ ಹೊರವಲಯದಲ್ಲಿರುವ, ಬಾನ್ ಫೋನ್ಸಾವನ್ (ಅನುಗ್ರಹ ನಿಲಯ/ಹೌಸ್ ಆಫ್ ಗ್ರೇಸ್) ಮಕ್ಕಳ ನಿವಾಸದಲ್ಲಿ, ತಮ್ಮ ಆರೈಕೆಯಲ್ಲಿರುವ ಮಕ್ಕಳಿಗೆ "ಭರವಸೆಯ ಯಾತ್ರಿಗಳು" ಆಗಲು ನಿರ್ಧರಿಸಿದ್ದಾರೆ.

02 ಜನವರಿ 2025, 11:33