Zambia: Fr Cletus Mwiila, Missionary of Synodality in Masuku teaches Synodality Zambia: Fr Cletus Mwiila, Missionary of Synodality in Masuku teaches Synodality 

ಜಾಂಬಿಯಾ ಮತ್ತು ಸಿನೊಡಾಲಿಟಿ: ಧರ್ಮಸಭೆಯಲ್ಲಿ ಪ್ರತಿಯೊಬ್ಬರ ಪಾತ್ರ

ಜಾಂಬಿಯಾದ ಸಿನೊಡಾಲಿಟಿಯ ಧರ್ಮಪ್ರಚಾರಕರಾದ ಧರ್ಮಗುರು ಕ್ಲೀಟಸ್ ಮ್ವಿಲಾರವರು ಜಾಂಬಿಯಾದಲ್ಲಿ ಸಿನೊಡಾಲಿಟಿಯ ಸಂದೇಶದ ಸ್ವೀಕಾರದಿಂದ ಸಂತೋಷಪಟ್ಟಿದ್ದಾರೆ ಮತ್ತು ಕ್ರೈಸ್ತ ಭಕ್ತವಿಶ್ವಾಸಿಗಳು ಸಮುದಾಯದ ನಿಜವಾದ ನಿಶ್ಚಯತೆಗೆ ಶ್ರಮಿಸಬೇಕೆಂದು ಒತ್ತಾಯಿಸುತ್ತಾರೆ.

ಮಾರ್ಥಾ ಮ್ವುಲಾ - ಲುಸಾಕಾ

ಮೇ 2024ರಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ಧರ್ಮಕೇಂದ್ರದ ಧರ್ಮಗುರುಗಳ ಸಿನೊಡಾಲಿಟಿ (ಪ್ಯಾರಿಷ್ ಪಾದ್ರಿಗಳು ಫಾರ್ ಸಿನೊಡಾಲಿಟಿ) ಸಭೆಯಲ್ಲಿ ಭಾಗವಹಿಸಿದ , ಧರ್ಮಗುರುವಾದ ಕ್ಲೀಟಸ್ ಮ್ವಿಲಾರವರೂ ಸಹ ಒಬ್ಬರು.

ರೋಮ್ ಸಭೆಯ ಸಮಯದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಅಂತರರಾಷ್ಟ್ರೀಯ ಸಭೆಯಲ್ಲಿ ಒಟ್ಟುಗೂಡಿದ ಧರ್ಮಕೇಂದ್ರದ ಧರ್ಮಗುರುಗಳನ್ನು ಉದ್ದೇಶಿಸಿ, ಧರ್ಮಗುರುಗಳು ಸಿನೊಡಾಲಿಟಿಯ ಧರ್ಮಪ್ರಸಾರಕರಾಗಬೇಕೆಂದು ಆದೇಶಿಸಿದರು: "ನೀವು ಮನೆಗೆ ಹಿಂದಿರುಗಿದ ನಂತರ ನಿಮ್ಮ ಸೋದರ ಧರ್ಮಕೇಂದ್ರದ ಧರ್ಮಗುರುಗಳೊಂದಿಗೆ ಸಿನೊಡಾಲಿಟಿಯ ಧರ್ಮಪ್ರಸಾರಕರಾಗಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ" ಎಂದು ವಿಶ್ವಗುರುಗಳು ಹೇಳಿದರು.

ಧರ್ಮಗುರು ಕ್ಲೀಟಸ್ ರವರು ಹೃದಯಕ್ಕೆ ತೆಗೆದುಕೊಂಡ ಕಾಯಕದ ವಿಷಯವಿದು.

ಸಿನೊಡಲಿಟಿಯ ಕೇಂದ್ರಬಿಂದು ಕ್ರಿಸ್ತರು
ಮಾನ್ಜೆ ಧರ್ಮಕ್ಷೇತ್ರದ ಸಂತ ಮೇರಿ ಚೋಮಾ ಧರ್ಮಕೇಂದ್ರದಿಂದ ಬಂದ ಗುರುಗಳಾದ ಮ್ವಿಲಾರವರು, ಜಾಂಬಿಯಾದಾದ್ಯಂತ ಸಿನೊಡ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದ್ದಾರೆ.

ದೇಶದಲ್ಲಿ ಸಿನೊಡ್ ಸಂದೇಶವನ್ನು ಹೇಗೆ ಸ್ವೀಕರಿಸಲಾಗಿದೆ ಎಂಬುದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ಅವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. ಜನರು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಸಂತೋಷಪಡುತ್ತಾರೆ ಮತ್ತು ಧರ್ಮಸಭೆಯ ಜೀವನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಕರೆಯಲ್ಪಟ್ಟಿದ್ದಾರೆಂದು ಭಾವಿಸುತ್ತಾರೆ.

"ಸಿನೊಡಲಿಟಿಗೆ ದೈವಶಾಸ್ತ್ರದ ಸಿದ್ಧಾಂತಗಳು ಅಥವಾ ಸಮಸ್ಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಅವರು ಹೇಳಿದರು. "ಇದು ದೈವಶಾಸ್ತ್ರದ ಅಡಿಪಾಯವನ್ನು ಹೊಂದಿರಬಹುದು, ಆದರೆ ಅದು ಖಂಡಿತವಾಗಿಯೂ ದೈವಶಾಸ್ತ್ರವನ್ನು ಮಾಡುವ ಅಥವಾ 'ತಪ್ಪು ವಿಷಯಗಳನ್ನು' ಸ್ವೀಕರಿಸುವ ಬಗ್ಗೆ ಅಲ್ಲ. ಸಿನೊಡಲಿಟಿ ಎಂದರೆ ಪ್ರತಿಯೊಬ್ಬರೂ, ಅವರ ಸ್ಥಾನಮಾನವನ್ನು ಲೆಕ್ಕಿಸದೆ, ಧರ್ಮಸಭೆಯ ಜೀವನದಲ್ಲಿ ತಮ್ಮನ್ನೇ ತಾವು ಸಂಪೂರ್ಣವಾಗಿ ಭಾಗವಹಿಸಲು ಅವಕಾಶ ನೀಡುವುದು."

ಧರ್ಮಸಭೆಯಾಗಿ ಹೊಸ ನಿರೂಪಣೆ
ತಮ್ಮ ಧ್ಯೇಯದ ಭಾಗವಾಗಿ, ಧರ್ಮಗುರುವಾದ ಮ್ವಿಲಾರವರು ಜಾಂಬಿಯಾ ಸಮಾಜದ ವಿವಿಧ ಸಮುದಾಯಗಳು ಮತ್ತು ವಲಯಗಳನ್ನು ಸಿನೊಡಲಿಟಿ ಸಂದೇಶದ ಕುರಿತು ಸಿನೊಡ್‌ನೊಂದಿಗೆ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಿನೊಡ್‌ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾ, ಧರ್ಮಗುರುವಾದ ಮ್ವಿಲಾರವರು ಇದು ಧರ್ಮಸಭೆಯ ಹೊಸ ನಿರೂಪಣೆಯಾಗಿದ್ದು, ಸಕ್ರಿಯವಾಗಿ ಭಾಗವಹಿಸಲು ಎಲ್ಲರನ್ನೂ ಆಹ್ವಾನಿಸುತ್ತದೆ ಎಂದು ಹೇಳಿದರು.

“ನಾವು ಐಕ್ಯತೆಯಲ್ಲಿರುವ ಸಮುದಾಯ. ಪ್ರತಿಯೊಬ್ಬರೂ ಧರ್ಮಸಭೆಯ ಜೀವನದಲ್ಲಿ ಪ್ರಮುಖ ಪಾಲುದಾರರಾಗಿ ಭಾಗವಹಿಸಬೇಕು” ಎಂದು ಅವರು ಒತ್ತಿ ಹೇಳಿದರು.

ಆಲಿಸು
ಎಲ್ಲಕ್ಕಿಂತ ಹೆಚ್ಚಾಗಿ, ಸಿನೊಡಲಿಟಿಯ ಕುರಿತು ಸಿನೊಡ್ ಆಲಿಸುವುದು, ಅದರ ಎಲ್ಲಾ ಚಟುವಟಿಕೆಗಳ ಕಾರ್ಯದಲ್ಲಿ ಒಟ್ಟಿಗೆ ನಡೆಯುವುದು ಮತ್ತು ಎಲ್ಲರನ್ನೂ ಸಕ್ರಿಯವಾಗಿ ಭಾಗವಹಿಸಲು ಆಹ್ವಾನಿಸುವುದರ ಬಗ್ಗೆ ಫಾದರ್ ಮ್ವಿಲಾರವರು ಮತ್ತಷ್ಟು ಒತ್ತಿ ಹೇಳಿದರು.

"ಎಲ್ಲರೂ ಭಾಗವಹಿಸಬೇಕೆಂಬ ಕರೆಯು, ಕಥೋಲಿಕ ಧರ್ಮಸಭೆಯ ಎರಡನೇ ವ್ಯಾಟಿಕನ್ ಸಮ್ಮೇಳನದ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತಿರುವ ಒಂದು ಮಾರ್ಗವಾಗಿದೆ."

ಯೇಸು ಮಾಡಿದಂತೆ ಜನರು ತಮ್ಮ ಜೀವನದ ಕಥೆಗಳನ್ನು ಹಂಚಿಕೊಳ್ಳಬೇಕು ಮತ್ತು ಜನರು ನಿರ್ಣಯಿಸಲ್ಪಟ್ಟ ಭಾವನೆಯಿಲ್ಲದೆ ಅದನ್ನು ಕೇಳಬೇಕು ಎಂದು ಅವರು ಹೇಳಿದರು.

ಸಿನೊಡಲಿಟಿಯ ಸಂದೇಶವು ಕಥೋಲಿಕರಿಗೆ ಮಾತ್ರವಲ್ಲ. ಇದು ಎಲ್ಲರಿಗೂ ವಿಮೋಚನೆಯ ಸಂದೇಶವಾಗಿದೆ ಎಂದು ಧರ್ಮಗುರು ಮ್ವಿಲಾರವರು ಹೇಳಿದರು.

ಈ ಕಾರಣಕ್ಕಾಗಿಯೇ "ನಾವು ಜಾಂಬಿಯಾ ರಾಷ್ಟ್ರೀಯ ಪ್ರಸಾರ ನಿಗಮ ದೂರದರ್ಶನ, ರಾಷ್ಟ್ರೀಯ, ಖಾಸಗಿ ಮತ್ತು ಸಮುದಾಯ ರೇಡಿಯೋ ಕೇಂದ್ರಗಳಂತಹ ಮಾಧ್ಯಮಗಳೊಂದಿಗೆ ಸಿನೊಡಲಿಟಿಯ ಸಂದೇಶವನ್ನು ಹಂಚಿಕೊಂಡಿದ್ದೇವೆ, ಅಲ್ಲಿ ಕಥೋಲಿಕದಲ್ಲದವರೂ ಸಹ ಈ ಸಂದೇಶಕ್ಕೆ ಮೆಚ್ಚುಗೆಯನ್ನು ತೋರಿಸಿದ್ದಾರೆ" ಎಂದು ಅವರು ಹೇಳಿದರು.

ಏಕತೆಗೆ ಕರೆ
ಜಗತ್ತಿನಲ್ಲಿ ಮತ್ತು ಜಾಂಬಿಯಾ ಸಮಾಜದಲ್ಲಿಯೂ ಸಹ ಇರುವ ಅನೈಕ್ಯತೆಯ ಕ್ಷೇತ್ರಗಳ ಬಗ್ಗೆ ತಿಳಿದಿರುವ ಧರ್ಮಗುರು ಮ್ವಿಲಾರವರು, ಜಾಂಬಿಯನ್ನರ ಜನಾಂಗವನ್ನು, ರಾಜಕೀಯ ಅಥವಾ ಧರ್ಮದಿಂದ ವಿಭಜಿಸಬಾರದು, ಬದಲಿಗೆ ಒಬ್ಬರಿಗೊಬ್ಬರು "ಪರಸ್ಪರ ರಕ್ಷಕರಾಗಿ" ಇರಬೇಕೆಂದು ಬೇಡಿಕೊಂಡಿದ್ದಾರೆ. ಪ್ರಭುವಾದ ಯೇಸುಕ್ರಿಸ್ತರು ಎಂದಿಗೂ ಯಾರ ವಿರುದ್ಧವೂ ತಾರತಮ್ಯ ಮಾಡಲಿಲ್ಲ ಎಂದು ಅವರು ಹೇಳಿದರು.

ಎಲ್ಲರನ್ನೂ ತಮ್ಮ ಬಳಿಗೆ ಆಹ್ವಾನಿಸುವ ಸಂಕೇತವಾಗಿ, "ಯೇಸು ನಮ್ರತೆ, ಸೇವೆಯನ್ನು ವ್ಯಕ್ತಪಡಿಸಲು, ಪಾದಗಳನ್ನು ತೊಳೆಯುವ ಮೂಲಕ ಪಾಪಿಗಳಿಗೆ ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ, ನಾವೆಲ್ಲರೂ ಸಹೋದರ ಸಹೋದರಿಯರು" ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

09 ಜನವರಿ 2025, 12:21