ಹಿರೋಷಿಮಾ ಮತ್ತು ನಾಗಸಾಕಿಗೆ ಶಾಂತಿಗಾಗಿ ತೀರ್ಥಯಾತ್ರೆ ಮಾಡುತ್ತಿರುವ ಅಮೇರಿಕ ಧರ್ಮಸಭೆ
ಲೂಯಿಸ್ ಮಿಗುಯೆಲ್ ಮೊಡಿನೊ
1945 ರ ಆಗಸ್ಟ್ 6 ರಂದು ಹಿರೋಷಿಮಾ ಮತ್ತು ಆಗಸ್ಟ್ 9 ರಂದು ನಾಗಾಸಾಕಿಯ ಮೇಲೆ ಪರಮಾಣು ಬಾಂಬ್‌ಗಳನ್ನು ಬೀಳಿಸಿ 2025 ಎಂಬತ್ತು ವರ್ಷಗಳನ್ನು ಪೂರೈಸುತ್ತದೆ. ಈ ಘಟನೆಗಳ ಸ್ಮರಣೆಯನ್ನು ಆಚರಿಸುತ್ತಾ, ಅಮೇರಿಕದ ಕಥೋಲಿಕ ಧರ್ಮಸಭೆ ಆಗಸ್ಟ್ 4 ರಿಂದ 11 ರವರೆಗೆ ಈ ಎರಡು ನಗರಗಳಿಗೆ ಭೇಟಿ ನೀಡಿ ತೀರ್ಥಯಾತ್ರೆ ನಡೆಸುತ್ತಿದೆ.
ಅಮೆರಿಕದ ಕಥೋಲಿಕ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ, ಚಿಕಾಗೋದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಕ್ಯುಪಿಚ್; ವಾಷಿಂಗ್ಟನ್ ಡಿಸಿ, ಕಾರ್ಡಿನಲ್ ಮೆಕ್‌ಎಲ್ರಾಯ್; ಸಿಯಾಟಲ್, ಧರ್ಮಾಧ್ಯಕ್ಚರಾದ ಎಟಿಯೆನ್ನೆ; ಮತ್ತು ಸಾಂತಾ ಫೆ, ಮಹಾಧರ್ಮಾಧ್ಯಕ್ಷರಾದ ವೆಸ್ಟರ್ ರವರೊಂದಿಗೆ. ಲತೀನ್ ಅಮೆರಿಕದ ವಿಶ್ವಗುರುಗಳ ಆಯೋಗದ ಕಾರ್ಯದರ್ಶಿ ಎಮಿಲ್ಸ್ ಕುಡಾ ಕೂಡ ತೀರ್ಥಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಾರ್ಥನೆ, ಸಮನ್ವಯಕ್ಕಾಗಿ ಸಂವಾದಗಳು
ಈ ತೀರ್ಥಯಾತ್ರೆಯು ಭರವಸೆಯ ಜೂಬಿಲಿಯ ವರ್ಷದಲ್ಲಿ ನಡೆಯುತ್ತದೆ ಮತ್ತುವಿಶ್ವಗುರು ಫ್ರಾನ್ಸಿಸ್ ರವರ "ನೆನಪಿಡಿ, ಒಟ್ಟಿಗೆ ನಡೆಯಿರಿ ಮತ್ತು ರಕ್ಷಿಸಿ" ಎಂಬ ಕರೆಯನ್ನು ನೆನಪಿಸುತ್ತದೆ. ಪೆಸಿಫಿಕ್ ಪ್ರದೇಶದಾದ್ಯಂತ ಸಮನ್ವಯ, ಒಗ್ಗಟ್ಟು ಮತ್ತು ಶಾಂತಿಗಾಗಿ ಪ್ರಾರ್ಥನಾ ಸಂವಾದಗಳನ್ನು ಸ್ಥಾಪಿಸುವುದು, ಸ್ಥಳೀಯ ಅಸ್ಥಿರತೆ, ವ್ಯಾಪಕ ವಿಭಜನೆಗಳು ಮತ್ತು ತೀವ್ರಗೊಳ್ಳುತ್ತಿರುವ ಪರಮಾಣು ಬೆದರಿಕೆಗಳ ನಡುವೆ ಧರ್ಮಗಳು ಮತ್ತು ಪೀಳಿಗೆಗಳನ್ನು ಸೇತುವೆ ಮಾಡುವುದು ಇದರ ಗುರಿಯಾಗಿದೆ.
ಆಯೋಜಕರು ಮತ್ತು ಕಾರ್ಯಕ್ರಮ
ಈ ಯಾತ್ರೆಯನ್ನು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ಜಗತ್ತಿಗೆ ಪಾಲುದಾರಿಕೆ (PWNW) ಸಂಘಟಿಸುತ್ತದೆ, ಇದನ್ನು ಆಗಸ್ಟ್ 2023 ರಲ್ಲಿ ಅಮೇರಿಕ ಮತ್ತು ಜಪಾನಿನ ನಾಲ್ಕು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರುಗಳು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಿಂದ ಪ್ರಭಾವಿತರಾಗಿದ್ದಾರೆ (ಸಾಂತಾ ಫೆ, ಸಿಯಾಟಲ್, ಹಿರೋಷಿಮಾ ಮತ್ತು ನಾಗಾಸಾಕಿ). ಇದನ್ನು ಜಾರ್ಜ್‌ಟೌನ್ ವಿಶ್ವವಿದ್ಯಾಲಯ, ಲೊಯೊಲಾ ವಿಶ್ವವಿದ್ಯಾಲಯ ಚಿಕಾಗೋ, ಮಾರ್ಕ್ವೆಟ್ ವಿಶ್ವವಿದ್ಯಾಲಯ, ನೊಟ್ರೆ ಡೇಮ್ ವಿಶ್ವವಿದ್ಯಾಲಯ, ನಾಗಸಾಕಿಯ ಜುನ್‌ಶಿನ್ ಕಥೋಲಿಕ ವಿಶ್ವವಿದ್ಯಾಲಯ ಮತ್ತು ಟೋಕಿಯೊದ ಸೋಫಿಯಾ ವಿಶ್ವವಿದ್ಯಾಲಯದಂತಹ ಭಾಗವಹಿಸುವ ಕಥೋಲಿಕ ವಿಶ್ವವಿದ್ಯಾಲಯಗಳು ಪ್ರಾಯೋಜಿಸುತ್ತಿವೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಗರ ಸಭಾಂಗಣಗಳು, ಜೆಸ್ವಿಟ್ ನವಶಿಷ್ಯರು, ಬಾಂಬ್ ದಾಳಿಗೊಳಗಾದ ಮತ್ತು ಪುನರ್ನಿರ್ಮಿಸಿದ ಕಥೋಲಿಕ ದೇವಾಲಯಗಳು, ಪರಮಾಣು ಬಾಂಬ್‌ಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯಗಳು, ಶಾಂತಿ ಕಾರ್ಯಕ್ರಮಗಳು, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಮತ್ತು ಪರಮಾಣು ಬಾಂಬ್ ಬದುಕುಳಿದವರ ಸಂದೇಶಗಳು ಹಾಗೂ ಅಮೇರಿಕದ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಧರ್ಮಾಧ್ಯಕ್ಷರುಗಳನ್ನು ಭೇಟಿ ನೀಡಲಾಗುತ್ತದೆ. ಇದಲ್ಲದೆ, ಶಾಂತಿಗಾಗಿ ದಿವ್ಯಬಲಿಪೂಜೆಗಳು, ಶೈಕ್ಷಣಿಕ ವಿಚಾರ ಸಂಕಿರಣ, ಅಂತರ ಧಾರ್ಮಿಕ ಆಚರಣೆಗಳು, ಶಾಂತಿ ಯಾತ್ರೆ ಮತ್ತು ಪರಮಾಣು ಬಾಂಬ್ ದಾಳಿಯ ಸಂತ್ರಸ್ತರುಗಳನ್ನು ಗೌರವಿಸುವ ಸ್ಮರಣಾರ್ಥ ಸಮಾರಂಭಗಳು ನಡೆಯಲಿವೆ.