ನಾಗಸಾಕಿ ವಾರ್ಷಿಕೋತ್ಸವದಂದು ಕಾರ್ಡಿನಲ್ ಕ್ಯುಪಿಚ್ ರವರು: ಶಾಂತಿಯು ಭಯಂಕರವಾದ ಒಪ್ಪಂದಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ
ಲಿಂಡಾ ಬೋರ್ಡೋನಿ
ಆಗಸ್ಟ್ 9, 1945 ರಂದು ಜಪಾನಿನ ನಗರವಾದ ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಅವರು ಮಾಡಿದ ಪ್ರಬೋಧನೆಯಲ್ಲಿ, ಕಾರ್ಡಿನಲ್ ಬ್ಲೇಸ್ ರವರು ಧರ್ಮಸಭೆಯ ನಾಯಕರ ದೃಷ್ಟಿಕೋನದಿಂದ ಮತ್ತು ಎರಡನೇ ಮಹಾಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಅಮೆರಿಕದ ನಿರ್ಧಾರವನ್ನು ನಿರ್ಣಯಿಸುವ ಅಮೇರಿಕದ ನಾಗರಿಕರ ದೃಷ್ಟಿಕೋನದಿಂದ ಚಿಂತನೆಯನ್ನು ನೀಡಿದರು.
ಅಂತರರಾಷ್ಟ್ರೀಯ ಕಾನೂನು ಮತ್ತು ಕಥೋಲಿಕ ನೈತಿಕ ಬೋಧನೆಗಳಲ್ಲಿನ ಮೂಲ ತತ್ವಗಳನ್ನು, ವಿಶೇಷವಾಗಿ ಹೋರಾಟಗಾರರು ಮತ್ತು ನಾಗರಿಕರ ನಡುವಿನ ವ್ಯತ್ಯಾಸವನ್ನು ಕೈಬಿಟ್ಟಿದ್ದರಿಂದಾಗಿ ಚಿಕಾಗೋದ ಮಾಧರ್ಮಾಧ್ಯಕ್ಷರಾದ ಬಾಂಬ್ ದಾಳಿಗಳನ್ನು "ಆಳವಾಗಿ ದೋಷಪೂರಿತ" ಎಂದು ಕರೆದರು.
ಎರಡನೇ ಮಹಾಯುದ್ಧದ ಕ್ರೌರ್ಯದ ಸಮಯದಲ್ಲಿ ಯುದ್ಧೇತರ ವಿನಾಯಿತಿಯ ಮೇಲಿನ ಸಾಂಪ್ರದಾಯಿಕ ಒತ್ತಾಯವು ಕುಸಿಯಿತು ಎಂದು ಕಾರ್ಡಿನಲ್ ರವರು ಹೇಳಿದರು.
ಪರಮಾಣು ದಾಳಿಗೆ ಮುನ್ನ ಜಪಾನಿನ ನಗರಗಳ ಮೇಲೆ ನಡೆದ ಬಾಂಬ್ ದಾಳಿಯನ್ನು ಅವರು ಉಲ್ಲೇಖಿಸಿದರು ಮತ್ತು ಸಂಪೂರ್ಣ ಯುದ್ಧದ ತರ್ಕದ ಅಡಿಯಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಳ್ಳುವುದನ್ನು ಸಾಮಾನ್ಯೀಕರಿಸುವುದನ್ನು ಟೀಕಿಸಿದರು. ಹಿರೋಷಿಮಾ ಮತ್ತು ನಾಗಸಾಕಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಇತರ ನಗರಗಳು ಈಗಾಗಲೇ ನಾಶವಾಗಿವೆ. ಇದು ಹೊಸ ಅಸ್ತ್ರದ ಮಾನಸಿಕ ಪರಿಣಾಮವನ್ನು ಕಡಿಮೆ ಮಾಡುತ್ತಿತ್ತು ಎಂದು ಅವರು ಗಮನಿಸಿದರು.
ಕಾರ್ಡಿನಲ್ ಕ್ಯುಪಿಚ್ ರವರು, 1944ರ ಆರಂಭದಲ್ಲಿಯೇ ಬಾಂಬ್ ದಾಳಿಯನ್ನು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದ ಅಮೇರಿಕದ ಜೆಸ್ವಿಟ್ ಜಾನ್ ಫೋರ್ಡ್ ರವರ ಬರಹಗಳನ್ನು ಎತ್ತಿ ತೋರಿಸಿದರು. ಪರಮಾಣು ತಡೆಗಟ್ಟುವಿಕೆಯ ಸುತ್ತಲಿನ ನೈತಿಕ ಪ್ರಶ್ನೆಗಳು ಬಗೆಹರಿಯದೆ ಉಳಿದಿರುವಾಗ ಫೋರ್ಡ್ ರವರ ಎಚ್ಚರಿಕೆ ಇಂದು ಪ್ರತಿಧ್ವನಿಸುತ್ತದೆ ಎಂದು ಕಾರ್ಡಿನಲ್ ರವರು ಹೇಳಿದರು.
ಪರಮಾಣು ತಡೆಗಟ್ಟುವಿಕೆಯ ಭ್ರಮೆ
ಪರಮಾಣು ತಡೆಗಟ್ಟುವಿಕೆಯ ಟೀಕೆಯಲ್ಲಿ, ಕಾರ್ಡಿನಲ್ ಕ್ಯುಪಿಚ್ ರವರು ಹೀಗೆ ಹೇಳಿದರು: ಬೆದರಿಕೆಗಳ ಬಳಕೆಯು ಒಗ್ಗಟ್ಟು, ನಿಜವಾದ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳಿಂದ ಪ್ರೇರಿತವಾದ ನೀತಿಶಾಸ್ತ್ರವು ಉತ್ಪಾದಿಸಬಹುದಾದ ರಾಷ್ಟ್ರಗಳ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಎಂದಿಗೂ ತರಲು ಸಾಧ್ಯವಿಲ್ಲ.
ಪರಸ್ಪರ ಬಿಕ್ಕಟ್ಟುಗಳಿಂದ ಸೃಷ್ಟಿಯಾಗುವ ಶಾಂತಿಯ ಭ್ರಮೆಯ ವಿರುದ್ಧ ಅವರು ಎಚ್ಚರಿಸಿದರು ಮತ್ತು ಇರಾನ್ ಹಾಗೂ ಉತ್ತರ ಕೊರಿಯಾವನ್ನು ಒಳಗೊಂಡ ಇತ್ತೀಚಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಉಂಟಾಗುವ ನಿರಂತರ ಅಪಾಯಕ್ಕೆ ಸಾಕ್ಷಿಯಾಗಿ ಉಲ್ಲೇಖಿಸಿದರು.
ಅಮೇರಿಕದ ಜವಾಬ್ದಾರಿ
ರಷ್ಯಾ ಜೊತೆಗೆ, ಅಮೇರಿಕವವು ವಿಶ್ವದ ಎರಡು ಪರಮಾಣು ಮಹಾಶಕ್ತಿಗಳಲ್ಲಿ ಒಂದಾಗಿ ಉಳಿದಿರುವುದರಿಂದ, ಅಮೇರಿಕನ್ ಕಾರ್ಡಿನಲ್ ರವರು ತಮ್ಮ ದೇಶವು ವಿಶೇಷ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು.
ಅಮೆರಿಕವು ಪರಮಾಣು-ಅಲ್ಲದ ಅಡಿಪಾಯದ ಮೇಲೆ ಆಧಾರಿತವಾದ ಅಂತರರಾಷ್ಟ್ರೀಯ ಕ್ರಮವನ್ನು ನಿರ್ಮಿಸಲು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು, ನವೀಕರಿಸಿದ ಶಸ್ತ್ರಾಸ್ತ್ರ ಕಡಿತ ಪ್ರಯತ್ನಗಳಿಗೆ ಮತ್ತು ನವ-ಪ್ರತ್ಯೇಕತೆಯನ್ನು ತಿರಸ್ಕರಿಸಲು ಕರೆ ನೀಡಿದರು.
ಕ್ಯುಪಿಚ್ ರವರು, ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದ ಹಿಬಾಕುಶಾರವರನ್ನು ದಶಕಗಳ ಕಾಲ ಶಾಂತಿಗಾಗಿ ಪ್ರತಿಪಾದಿಸಿದ್ದಕ್ಕಾಗಿ ಗೌರವಿಸುವ ಮೂಲಕ ಮುಕ್ತಾಯಗೊಳಿಸಿದರು. ಅವರ ಧ್ವನಿಗಳು ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಕೊನೆಗೊಳಿಸುವ ಪ್ರಯತ್ನಗಳಿಗೆ ಸ್ಫೂರ್ತಿ ನೀಡುತ್ತಲೇ ಇರಬೇಕು ಎಂದು ಅವರು ಹೇಳಿದರು.