BO-Card.-Charles-Maun BO-Card.-Charles-Maun 

ಮ್ಯಾನ್ಮಾರ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳು

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ವಿಶ್ವಗುರು ಲಿಯೋರವರ ರಾಷ್ಟ್ರದ ಮನವಿಯ ಹಿನ್ನೆಲೆಯಲ್ಲಿ, ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳು "ಮ್ಯಾನ್ಮಾರ್‌ನ ಬಹುಬಿಕ್ಕಟ್ಟಿಗೆ ಕರುಣೆ ಮತ್ತು ಭರವಸೆಯ ಸಂದೇಶವನ್ನು ನೀಡುತ್ತಾರೆ, ರಾಷ್ಟ್ರದಲ್ಲಿನ ತುರ್ತು ಪರಿಸ್ಥಿತಿಯು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ಹಾಗೂ ಹೊಸ ಪೀಳಿಗೆಯ ಒಳಿತಿಗಾಗಿ ಶಾಂತಿಯನ್ನು ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳುತ್ತಾರೆ.

ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ನಮ್ಮ ಪ್ರೀತಿಯ ಧರೆಯಾದ್ಯಂತ, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ನಮ್ಮ ಜನರು ಇತ್ತೀಚಿನ ಇತಿಹಾಸದಲ್ಲಿ ನಾವು ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಮ್ಯಾನ್ಮಾರ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (CBCM) ಅಕ್ಟೋಬರ್ 29 ರಂದು ತಮ್ಮ 'ಮ್ಯಾನ್ಮಾರ್‌ನ ಪಾಲಿಕ್ರೈಸಿಸ್‌ಗೆ ಕರುಣೆ ಮತ್ತು ಭರವಸೆಯ ಸಂದೇಶದಲ್ಲಿ ಈ ಭಯಾನಕ ಜ್ಞಾಪನೆಯನ್ನು ನೀಡಿತು. ಇದರಲ್ಲಿ ದೇಶದ ಧರ್ಮಾಧ್ಯಕ್ಷರುಗಳು ಮ್ಯಾನ್ಮಾರ್ ಮತ್ತು ಅದರಾಚೆಗೆ ಅಪಾರ ನೋವು, ಅನಿಶ್ಚಿತತೆ ಮತ್ತು ಗೊಂದಲದ ಸಮಯವನ್ನು ಅನುಭವಿಸುತ್ತಿದ್ದಾರೆ ಎಂದು ಒಪ್ಪಿಕೊಳ್ಳುತ್ತಾರೆ. ಇದು ಒಂದೇ ಒಂದು ದುರಂತವಲ್ಲ ಎಂದು ಧರ್ಮಾಧ್ಯಕ್ಷರುಗಳು ಸ್ಪಷ್ಟಪಡಿಸುತ್ತಾರೆ, ಆದರೆ ತಜ್ಞರು ಇದನ್ನು ಪಾಲಿಕ್ರಿಸಿಸ್ ಎಂದು ಕರೆಯುತ್ತಾರೆ. ಅಲ್ಲಿ ಬಹು ತುರ್ತು ಪರಿಸ್ಥಿತಿಗಳು ಒಟ್ಟಿಗೆ ಬರುತ್ತವೆ, ಪ್ರತಿಯೊಂದೂ ಇನ್ನೊಂದನ್ನು ಇನ್ನಷ್ಟು ಹದಗೆಡಿಸುತ್ತವೆ."

ಮಹಿಳೆಯರು ಮತ್ತು ಮಕ್ಕಳ ಮೌನ ಯಾತನೆ
ಯುದ್ಧ ಮತ್ತು ವಿಪತ್ತುಗಳಲ್ಲಿ ಯಾವಾಗಲೂ ಹಾಗೆ ಮಹಿಳೆಯರು ಮತ್ತು ಮಕ್ಕಳು ಹೇಗೆ ಹೆಚ್ಚಿನ ಹೊರೆಗಳನ್ನು ಹೊರುತ್ತಾರೆ ಮತ್ತು ಎಷ್ಟೋ ಮಕ್ಕಳು ವರ್ಷಗಳಿಂದ ಶಾಲೆಯಿಂದ ಹೊರಗುಳಿದಿದ್ದಾರೆ, ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ, ತರಗತಿ ಕೊಠಡಿಗಳು ಅವಶೇಷಗಳಾಗಿ ಮಾರ್ಪಟ್ಟಿವೆ ಮತ್ತು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಧರ್ಮಾಧ್ಯಕ್ಷರುಗಳು ವಿಷಾದಿಸುತ್ತಾರೆ. ಅನಿಶ್ಚಿತತೆಯಲ್ಲಿ ತಮ್ಮ ಭವಿಷ್ಯವು ಸ್ಥಗಿತಗೊಂಡಿದೆ ಎಂದು ಧರ್ಮಾಧ್ಯಕ್ಷರುಗಳು ಹೇಳುತ್ತಾರೆ.

ದೈನಂದಿನ ಕಷ್ಟಗಳ ನಡುವೆ ಜೀವಿಸುವುದು
ಸಾಮಾನ್ಯ ನಾಗರಿಕರ ದೈನಂದಿನ ಜೀವನವು, ಧರ್ಮಾಧ್ಯಕ್ಷರುಗಳು ಮುಂದುವರಿಸುತ್ತಾ, ಬದುಕುಳಿಯುವ ದೈನಂದಿನ ಪರೀಕ್ಷೆಯಾಗಿದೆ. ದೇಶದ ಹಲವು ಭಾಗಗಳಲ್ಲಿ ಆಹಾರದ ಬೆಲೆಗಳು ಗಗನಕ್ಕೇರಿವೆ ಎಂದು ಧರ್ಮಸಭೆಯ ನಾಯಕರು ಗಮನಿಸುತ್ತಾರೆ. ಉದ್ಯೋಗಗಳು ಮಾಯವಾಗಿವೆ. ಇಂಧನ ಮತ್ತು ಔಷಧಗಳ ಕೊರತೆಯಿದೆ. ವಿದ್ಯುತ್ ಆಗ್ಗಾಗ್ಗೆ ಬರುತ್ತದೆ ಹೋಗುತ್ತದೆ. ಆತಂಕವು ಪ್ರತಿಯೊಂದು ಮನೆಯಲ್ಲೂ ಮೂಕ ಸಂಗಾತಿಯಾಗಿದೆ.

ಭಯದ ವಾತಾವರಣದ ಹೊರತಾಗಿಯೂ, ಮುಕ್ತ ಹೃದಯ ಹೊಂದಿರುವ ಜನರು, "ಆಗಾಗ್ಗೆ ಖಾಲಿ ಕೈಗಳಿಂದ" ಸಹ, ಪರಸ್ಪರ ಸಹಾಯ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಪೀಠಾಧಿಪತಿಗಳು ಗಮನಿಸುತ್ತಾರೆ.

ಶಾಂತಿ ಸಾಧ್ಯ
ಹೀಗಾಗಿ, ಅವರು ಭಕ್ತವಿಶ್ವಾಸಿಗಳಿಗೆ ಭರವಸೆಯನ್ನು ಕಾಪಾಡಿಕೊಳ್ಳಲು ಕರೆ ನೀಡುತ್ತಾರೆ, ಇದು ಬಿಟ್ಟುಕೊಡುವ ಸಮಯವಲ್ಲ. ಇದು ಆಳವಾಗಿ ಅರಿತುಕೊಳ್ಳುವ ಸಮಯ ಮತ್ತು ಭರವಸೆಯನ್ನು ಕಂಡುಕೊಳ್ಳಲು ಒತ್ತಿ ಹೇಳುತ್ತಾರೆ. ಶಾಂತಿಯೇ ಏಕೈಕ ಮಾರ್ಗ, ಶಾಂತಿ ಸಾಧ್ಯ ಎಂದು ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳು ಪ್ರೋತ್ಸಾಹಿಸುತ್ತಾರೆ.

ನಮ್ಮ ರಾಷ್ಟ್ರವು, ಗಾಯಗೊಂಡು ಜರ್ಜರಿತವಾಗಿದೆ, ಆದ್ದರಿಂದ ಶಾಂತಿಯ ಹಾದಿಯನ್ನು ಹಿಡಿದು, ಆ ಕಷ್ಟಗಳಿಂದ ಹೊರಬರಲು, ದೃಢನಿಶ್ಚಯದಿಂದ ಹೊಸ ಹೃದಯಗಳೊಂದಿಗೆ ಮತ್ತೆ ಮೇಲೇರಿ ಬರಲಿ ಎಂದು ಅವರು ಹೇಳುತ್ತಾರೆ. ಕೊನೆಗೆ ಅವರು, ನಮ್ಮ ಮಕ್ಕಳು ಒಂದು ದಿನ 'ಅವರು ಶಾಂತಿಯನ್ನು ಬಿಟ್ಟುಕೊಡಲಿಲ್ಲ' ಎಂದು ಹೇಳಲಿ. ಆದ್ದರಿಂದ ನಾವು ಮನೆಗೆ ಹೋಗುವ ದಾರಿಯನ್ನು ಕಂಡುಕೊಂಡೆವು ಎಂದು ಹೇಳುತ್ತಾರೆ.
 

31 ಅಕ್ಟೋಬರ್ 2025, 06:45