ರೋಮ್‌ನಲ್ಲಿ ಒಟ್ಟುಗೂಡಿದ ಧಾರ್ಮಿಕ ಮುಖಂಡರು
ಫ್ರಾನ್ಸೆಸ್ಕಾ ಸಬಟಿನೆಲ್ಲಿ
ಹಿಂಸಾಚಾರದ ವಿರುದ್ಧದ ಹೋರಾಟದ ಆಧುನಿಕ ಸಂಕೇತವಾಗಿ ಮತ್ತು ಶಾಂತಿಗಾಗಿ ಪ್ರಾರ್ಥನಾ ಸ್ಥಳವಾಗಿ ಮಾರ್ಪಟ್ಟಿರುವ ರೋಮ್‌ನ ಕೊಲೊಸಿಯಮ್‌ನಲ್ಲಿ ಸಂತ ಎಜಿದಿಯೊ ಸಮುದಾಯದ ವಾರ್ಷಿಕ ಶಾಂತಿ ಸಭೆಯಲ್ಲಿ ಹಾಜರಿದ್ದ ಧಾರ್ಮಿಕ ನಾಯಕರು ಪಕ್ಕಪಕ್ಕದಲ್ಲಿ ಕುಳಿತುಕೊಂಡರು. ಇವರು ಶಾಂತಿಯನ್ನು ಮತ್ತು ಸೃಷ್ಟಿಯೆಡೆಗಿನ ಅಸಮಾನತೆ ಹಾಗೂ ಭವಿಷ್ಯದ ಪೀಳಿಗೆಗಳ ಜೀವನದ ಬಗೆಗಿನ ಉದಾಸೀನತೆಯನ್ನು ಖಂಡಿಸುವುದಕ್ಕೆ ಮೀಸಲಾದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಒಟ್ಟುಗೂಡಿದರು.
ವಿಶ್ವಗುರು XIVನೇ ಲಿಯೋರವರ ಪೂರ್ಣ ಪ್ರವಚನ
ಮೂವತ್ತೊಂದು ವರ್ಷದ ವೈದ್ಯ ಒಮರ್ ಮಲ್ಲಾ ಅಲಿರವರು, ಸಾವು ಮತ್ತು ಅಂಜಿಕೆಯು ತನ್ನ ದೇಶವನ್ನು ಆಕ್ರಮಿಸಿದಾಗ ಮತ್ತು ಎರಡೂವರೆ ವರ್ಷಗಳ ಕಾಲ ನಡೆದ ಸಂಘರ್ಷಕ್ಕೆ ಕಾರಣವಾದ ವಿಷಯಗಳ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.
ಆತನು ತನ್ನ ಜೀವನದಲ್ಲಿ ಶಾಂತಿಯನ್ನು ಅನುಸರಿಸಿದರು ಮತ್ತು ಇಥಿಯೋಪಿಯಾದಲ್ಲಿ ಓಮರ್ ರವರು ನಿರಾಶ್ರಿತರಾದರು. ತದನಂತರ ಇಟಲಿಯಲ್ಲಿ ಸ್ವಾಗತಿಸಲ್ಪಟ್ಟರು, ಸಂತ ಎಜಿದಿಯೊ ಸಮುದಾಯದ ಮಾನವೀಯ ನೆರವಿನ ಮೂಲಕ ರೋಮ್‌ಗೆ ಬಂದರು.
ಸುಡಾನ್‌ನಲ್ಲಿ ಯುದ್ಧವು ಇನ್ನೂ ಮುಂದುವರೆಯುತ್ತಿರುವ ಪ್ರತಿಯೊಂದು ಸ್ಥಳದಲ್ಲಿ ಶಾಂತಿಗಾಗಿ ಪ್ರಾರ್ಥಿಸುವಂತೆ ಎಲ್ಲಾ ಭಕ್ತವಿಶ್ವಾಸಿಗಳನ್ನು ಮನವಿ ಮಾಡಿದರು, ಏಕೆಂದರೆ "ಶಾಂತಿ ಎಂದರೆ ಯುದ್ಧದ ಅನುಪಸ್ಥಿತಿ ಮಾತ್ರವಲ್ಲ, ಶಾಂತಿಯೆಂದರೆ ಪ್ರೀತಿ, ಘನತೆ ಮತ್ತು ಮಾನವೀಯತೆಯ ಉಪಸ್ಥಿತಿ.
ಶಾಂತಿಯ ಹಾದಿ
ಯುದ್ಧದ ಪರಿಣಾಮಗಳನ್ನು ಅನುಭವಿಸುವ ಲಕ್ಷಾಂತರ ಮಕ್ಕಳು, ವೃದ್ಧರು, ಮಹಿಳೆಯರು ಮತ್ತು ಪುರುಷರ ಮುಂದೆ ಯಾವುದೇ ವ್ಯಕ್ತಿಯು ಆ ಕಷ್ಟಕರ ಅನುಭವವನ್ನು ಅನುಭವಿಸಲು ಸಾಧ್ಯವಿಲ್ಲವಾದ್ದರಿಂದ, ಶಾಂತಿಯನ್ನು ಅನುಸರಿಸುವ ಮೂಲಕ ಧೈರ್ಯವನ್ನು ತೋರಿಸಲು ಈ ಸಮಯವು ಸೂಕ್ತವೆಂದು ಅವರು ಒತ್ತಿ ಹೇಳಿದರು. ಇನ್ನು ಮುಂದೆ ಕಾಯುವ ಸಮಯವಲ್ಲ ಎಂದು ಧಾರ್ಮಿಕ ಮುಖಂಡರು ತಮ್ಮ ಜಂಟಿ ಮನವಿಯಲ್ಲಿ ಒತ್ತಾಯಿಸಿದರು.