ಪಿತೃಪ್ರಧಾನ ಪಿಜ್ಜಬಲ್ಲಾ: ಶಾಂತಿಯ ನಿರೂಪಣೆಗೆ ಹೊಸ ಭಾಷೆ ಮತ್ತು ಹೊಸ ಸಾಕ್ಷಿ

ಇಸ್ರಯೇಲ್ ಮತ್ತು ಹಮಾಸ್ ನಡುವೆ ನಡೆದ ಒಪ್ಪಂದದ ನಂತರದ ಪವಿತ್ರ ನಾಡಿನಲ್ಲಿನ ಐತಿಹಾಸಿಕ ಕ್ಷಣವನ್ನು ಜೆರುಸಲೇಮ್‌ನ ಲತೀನ್ ಪಿತಾಮಹರು ಚಿಂತಿಸುತ್ತಾರೆ ಮತ್ತು ದೃಢೀಕರಿಸುತ್ತಾರೆ. ನಮ್ಮ ಸಮುದಾಯಗಳ ಕಡೆಗೆ ನಾವು ಕರ್ತವ್ಯವನ್ನು ಹೊಂದಿದ್ದೇವೆ - ಅವರು ವಿಭಿನ್ನ ಭವಿಷ್ಯದ ಕಡೆಗೆ ಸಕಾರಾತ್ಮಕವಾಗಿ ಮತ್ತು ಶಾಂತವಾಗಿ ನೋಡಬೇಕಾಗುವುದು.

ಆಂಡ್ರಿಯಾ ಟೋರ್ನಿಯೆಲ್ಲಿ ಮತ್ತು ಬೀಟ್ರಿಸ್ ಗೌರೆರಾ

ಪವಿತ್ರ ನಾಡಿನಲ್ಲಿ ಶಾಶ್ವತವಾದ ಶಾಂತಿಯನ್ನು ನಿರ್ಮಿಸುವ ಆಶಯಗಳು, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿನ ತೊಂದರೆಗಳು ಮತ್ತು ಮಾನವ ಘನತೆಯ ಹೆಸರಿನಲ್ಲಿ ಜನರನ್ನು ಒಟ್ಟುಗೂಡಿಸಿದ ಸಾರ್ವಜನಿಕ ಪ್ರದರ್ಶನಗಳಲ್ಲಿ ವ್ಯಕ್ತವಾಗುವ ಸಮುದಾಯದ ಪ್ರಜ್ಞೆಯು ಅಕ್ಟೋಬರ್ 15ರ ಬುಧವಾರ ವ್ಯಾಟಿಕನ್ ರೇಡಿಯೊದ ಸ್ಟುಡಿಯೋಗಳಲ್ಲಿ ಅತಿಥಿಯಾಗಿದ್ದ ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರು ಸ್ಪರ್ಶಿಸಿದ ವಿಷಯಗಳು ಸೇರಿವೆ. ಕಾರ್ಡಿನಲ್ ದುರ್ಬಲವಾದ ಕದನ ವಿರಾಮದ ಬಗ್ಗೆ ಮಾತನಾಡಿದರು, ಆದರೆ ಇದು ಕೇವಲ ವಿರಾಮವಲ್ಲ, ಬದಲಿಗೆ ಯುದ್ಧ ಮತ್ತು ಹಿಂಸಾಚಾರವಲ್ಲದ ಹೊಸ ದೃಷ್ಟಿಕೋನದೊಂದಿಗೆ ಜೀವನ ಪುನರಾರಂಭಿಸಬಹುದು ಎಂಬ ಇಸ್ರಯೇಲ್‌ರು ಮತ್ತು ಪ್ಯಾಲಸ್ತೀನರಲ್ಲಿ ಹಂಚಿಕೆಯ ಭರವಸೆಯ ಬಗ್ಗೆಯೂ ಮಾತನಾಡಿದರು.

ಈ ಪೀಳಿಗೆಯ, ನೀವು ಪ್ರತಿದಿನ ಜೆರುಸಲೇಮ್ ಅಥವಾ ಬೇರೆಡೆ ಭೇಟಿಯಾಗುವ ಜನರ ದೃಢವಾದ ಭರವಸೆಗಳೇನು?

ಈ ಕ್ಷಣದಲ್ಲಿ, ನಾವು ಹೊಸ ಮತ್ತು ಇನ್ನೂ ದುರ್ಬಲ ಹಂತದಲ್ಲಿದ್ದೇವೆ. ನಾವು ಎರಡು ಭಯಾನಕ ವರ್ಷಗಳಿಂದ ಹೊರಬರುತ್ತಿದ್ದೇವೆ. ಆ ವರ್ಷಗಳ ಅಂತ್ಯವನ್ನು ನಾವು ತಲುಪಿದ್ದೇವೆ ಎಂಬುದು ನಮ್ಮ ಆಶಯವಾಗಿದೆ - ಕೇವಲ ತಾತ್ಕಾಲಿಕವಾದ ವಿರಾಮವಾಗಿ ಅಲ್ಲ. ಈ ಭರವಸೆಯನ್ನು ಇಸ್ರಯೇಲ್‌ರು ಮತ್ತು ಪ್ಯಾಲಸ್ತೀನರು, ಬಲ ಅಥವಾ ಎಡ ಎಂಬ ಎಲ್ಲಾ ಹಿನ್ನೆಲೆಯಿಂದ ಬಂದ ಎಲ್ಲ ಜನರೂ ಈ ಭರವಸೆಯನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರೂ ನಿಜವಾಗಿಯೂ ಹೊಸ ಹಾದಿಯನ್ನು ಹಿಡಿಯಲು ಬಯಸುತ್ತಾರೆ. ಅದು ಮೊದಲನೆಯದು. ಖಂಡಿತವಾಗಿ, ರಾಜಕೀಯ ಮತ್ತು ಧಾರ್ಮಿಕ ಎರಡೂ ವಿಭಿನ್ನ ಅಭಿಪ್ರಾಯಗಳಿವೆ ಮತ್ತು ವಿಭಿನ್ನ ದೃಷ್ಟಿಕೋನಗಳಿವೆ. ಆದರೆ ಸಾಮಾನ್ಯ ಜನರಲ್ಲಿ ಮತ್ತೆ ಬದುಕಬೇಕೆಂಬ ಬಲವಾದ ಬಯಕೆಯೂ ಇದೆ, ಅದು ಸಹಜ ಸ್ಥಿತಿಗೆ ಮರಳುವ ಅಗತ್ಯವಾಗಿ ಅಲ್ಲ, ಬದಲಾಗಿ ಯುದ್ಧ ಮತ್ತು ಹಿಂಸಾಚಾರವಲ್ಲದ ಹೊಸ ಜೀವನದ ದೃಷ್ಟಿಕೋನದೊಂದಿಗೆ ನೂತನ ಜೀವನ ಪ್ರಾರಂಭಿಸುವ ಭರವಸೆಯನ್ನು ಹೊಂದಿದ್ದಾರೆ.

ಪವಿತ್ರ ನಾಡಿನೆಡೆಗೆ ಮತ್ತೊಮ್ಮೆ ಯಾತ್ರಿಕರು ಹಿಂತಿರುಗುತ್ತಾರೆಂದು ನೀವು ನಿರೀಕ್ಷಿಸುತ್ತೀರಾ?

ನಾವು ಆಶಿಸುವುದೇನೆಂದರೆ. ನಾನು ಪವಿತ್ರ ನಾಡಿನ ಕಸ್ಟೋಗಳೊಂದಿಗೆ ಒಟ್ಟಾಗಿ ಏನನ್ನಾದರೂ ಮಾತನಾಡಲು ಬಯಸುವುದನ್ನು, ಬಹುಶಃ ಅದನ್ನು ಕೆಲವು ಹೇಳಿಕೆಗಳಲ್ಲಿ ನೀಡಬಹುದು. ವಿಷಯಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ನೋಡಲು ನಾವು ಎರಡು ಅಥವಾ ಮೂರು ವಾರಗಳವರೆಗೆ ಕಾಯುತ್ತೇವೆ. ವಿಶೇಷವಾಗಿ ಕಳೆದ ಎರಡು ವರ್ಷಗಳಿಂದ ಪವಿತ್ರ ನಾಡಿಗೆ ಬಹಳ ಹತ್ತಿರದಲ್ಲಿರುವ ದೇವಾಲಯಗಳಲ್ಲಿ, ಈಗ ಪ್ರಾರ್ಥನೆಯ ಮೂಲಕ ಮಾತ್ರವಲ್ಲದೆ ಸಹಾಯದ ಮೂಲಕವೂ ಒಗ್ಗಟ್ಟನ್ನು ತೋರ್ಪಡಿಸುವ ಸಮಯ ಬಂದಿದೆ ಎಂದು ಹೇಳ ಬಯಸುತ್ತೇನೆ, ಅದು ಅತ್ಯಗತ್ಯ.

ಈ ಸಂದರ್ಭದಲ್ಲಿ ನೀವು ವಿಶ್ವಗುರುಗಳ ಸಾಮೀಪ್ಯವನ್ನು ಅನುಭವಿಸಿದ್ದೀರಾ?

ನಾವು ವಿಶ್ವಗುರು ಲಿಯೋರವರ ಸಾಮೀಪ್ಯವನ್ನು ನಮ್ಮ ಜೀವನದಲ್ಲಿ  ಅನುಭವಿಸಿದ್ದೇವೆ. ನಾವು ಈಗಾಗಲೇ ವಿಶ್ವಗುರು ಫ್ರಾನ್ಸಿಸ್ ರವರ ನಿಕಟತೆಯನ್ನು ಅನುಭವಿಸಿದ್ದೇವೆ ಮತ್ತು ನಂತರ ವಿಶ್ವಗುರು ಲಿಯೋರವರ ನಿಕಟತೆಯನ್ನೂ ಸಹ ಅನುಭವಿಸಿದ್ದೇವೆ. ಅವರಿಬ್ಬರ ವ್ಯಕ್ತಿತ್ವಗಳು ಬೇರೆ ಬೇರೆ, ಆದರೆ ಇಬ್ಬರೂ ತಮ್ಮ ನಿಕಟತೆಯನ್ನು ಬಹಳ ನಿರ್ದಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದರು - ಫೋನ್ ಕರೆಗಳ ಮೂಲಕ, ಗಾಜಾದ ಧರ್ಮಕೇಂದ್ರದ ಧರ್ಮಗುರುಗಳೊಂದಿಗೆ ಆಗಾಗ್ಗೆ ಸಂಪರ್ಕ ಸಾಧಿಸುವ ಮೂಲಕ - ಈ ವಿಷಯಗಳು ಸುದ್ದಿಯಾಗದಿದ್ದರೂ ಸಹ ಬಹಳ ನಿರ್ದಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದರು. ಅದು ಮುಖ್ಯ, ಏಕೆಂದರೆ ನೀವು ಒಳ್ಳೆಯ ಕಾರ್ಯವನ್ನು ನಿಮ್ಮ ಸ್ವಂತ ಹಿತದೃಷ್ಟಿಯಿಂದ ಮಾಡಬೇಕು, ಪ್ರಚಾರಕ್ಕಾಗಿ ಅಲ್ಲ. ಈ ನಿಕಟತೆಯನ್ನು ದೃಢವಾದ ನೆರವಿನ ಮೂಲಕ ಬಹಳ ಸ್ಪಷ್ಟವಾದ ರೀತಿಯಲ್ಲಿ ವ್ಯಕ್ತಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ನಮಗೆ ಸಿಕ್ಕ ಇತ್ತೀಚಿನ ಸೂಚನೆಯೆಂದರೆ, ಗಾಜಾ ಗಡಿಗೆ ಸಾವಿರಾರು ಪ್ರತಿಜೀವಕಗಳನ್ನು ಕಳುಹಿಸುವ ವಿಶ್ವಗುರುಗಳ ಬಯಕೆ ವ್ಯಕ್ತಪಡಿಸಲಾಗಿದೆ.

17 ಅಕ್ಟೋಬರ್ 2025, 16:54