TOPSHOT-MEXICO-US-POLITICS-MIGRATION TOPSHOT-MEXICO-US-POLITICS-MIGRATION  (AFP or licensors)

USCCBಯ ನೂತನ ಅಧ್ಯಕ್ಷರು: ಅಮೆರಿಕದ ಧರ್ಮಾಧ್ಯಕ್ಷರುಗಳಿಗೆ ವಲಸೆ ಆದ್ಯತೆಯಾಗಿ ಉಳಿದಿದೆ

ಒಕ್ಲಹೋಮ ನಗರಕ್ಕೆ ಆಯ್ಕೆಯಾದ ನೂತನ USCCB ಅಧ್ಯಕ್ಷ ಧರ್ಮಾಧ್ಯಕ್ಷರಾದ ಪೌಲ್‌ ಕೋಕ್ಲಿರವರು, ವಲಸಿಗರ ಬಗ್ಗೆ ಅಮೆರಿಕದ ಧರ್ಮಾಧ್ಯಕ್ಷರುಗಳ ಕಾಳಜಿ, ಸಿನೊಡಾಲಿಟಿ ಮತ್ತು ಐಕ್ಯತೆಯ ಸಾಧನಗಳಾಗುವ ಮೂಲಕ ಧ್ರುವೀಕರಣವನ್ನು ನಿವಾರಿಸುವ ಪ್ರಯತ್ನಗಳನ್ನು ಎತ್ತಿ ತೋರಿಸುತ್ತಾರೆ.

ಕ್ರಿಸ್ಟೋಫರ್ ವೆಲ್ಸ್

ವಲಸೆಯ ಪ್ರಶ್ನೆಯು ಅಮೆರಿಕದ ಧರ್ಮಾಧ್ಯಕ್ಷರುಗಳಿಗೆ "ಜ್ವಲಂತ ಸಮಸ್ಯೆಯಾಗಿದೆ" ಎಂದು ಆ ಧರ್ಮಾಧ್ಯಕ್ಷರಾದ ಪೌಲ್‌ ಕೋಕ್ಲಿರವರು, ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (USCCB) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ವಲಸೆ ಅನುಭವದ ಮೇಲೆ ನಿರ್ಮಿಸಲಾದ ರಾಷ್ಟ್ರವು ವಲಸಿಗರ ರಾಷ್ಟ್ರವಾಗಿ ಅಮೆರಿಕವನ್ನು, ದೇಶಾದ್ಯಂತ ವಲಸೆ ಸಮುದಾಯಗಳೊಂದಿಗೆ ಧರ್ಮಾಧ್ಯಕ್ಷರುಗಳು ತಮ್ಮ ಭಯವನ್ನು ನಿವಾರಿಸಲು ಮತ್ತು ಅವರಿಗೆ ಅಗತ್ಯವಿರುವ ನೆರವನ್ನು ಒದಗಿಸಲು ಸಹಾಯ ಮಾಡುವ ಮೂಲಕ ಅವರೊಂದಿಗೆ ಹಾಗೂ ಬೆಂಬಲಿಸುವ ಅಗತ್ಯವನ್ನು ಹೆಚ್ಚಿಸುತ್ತದೆ ಎಂದು ಧರ್ಮಾಧ್ಯಕ್ಷರು ಹೇಳಿದರು.

ನಿರ್ದಿಷ್ಟವಾಗಿ ಹೇಳುವುದಾದರೆ, ಅಮೆರಿಕದ ಧರ್ಮಾಧ್ಯಕ್ಷರುಗಳು ನಮ್ಮ ವಲಸಿಗ ಸಹೋದರ ಸಹೋದರಿಯರ ಅಗತ್ಯಗಳಿಗೆ ಗಮನ ಕೊಡಲು, ವಲಸೆಯ ಸುತ್ತಲಿನ ವಾಕ್ಚಾತುರ್ಯವನ್ನು ಕಡಿಮೆ ಮಾಡಲು ಮತ್ತು ಅಭದ್ರತೆಯಲ್ಲಿ ವಾಸಿಸುವ ಅನೇಕರ ಭಯವನ್ನು ಶಾಂತಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಕೋಕ್ಲಿರವರು ಹೇಳಿದರು. ದೇಶವು ತನ್ನ ಗಡಿಗಳನ್ನು ರಕ್ಷಿಸಿಕೊಳ್ಳುವ ಮತ್ತು ವಲಸೆಯನ್ನು ಕ್ರಮಬದ್ಧ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು.

ಆ ಕಳವಳಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಭಯ ಮತ್ತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ ವಲಸಿಗರು ಹಾಗೂ ನಾಗರಿಕರಿಗೆ ಧೈರ್ಯ ತುಂಬಲು ಧರ್ಮಾಧ್ಯಕ್ಷರುಗಳು ಬಯಸುತ್ತಾರೆ ಎಂದು ಧರ್ಮಾಧ್ಯಕ್ಷರಾದ ಕೋಕ್ಲಿರವರು ಹೇಳಿದರು. ನಮ್ಮ ಗುರಿ ನಮ್ಮ ವಲಸಿಗ ಸಹೋದರ ಸಹೋದರಿಯರೊಂದಿಗೆ ಹೋಗುವುದು, ಆದರೆ ವಲಸೆಯನ್ನು ನಿಯಂತ್ರಿಸುವ ನ್ಯಾಯಯುತ ಕಾನೂನುಗಳನ್ನು ಜಾರಿಗೆ ತರಲು ಮತ್ತು ದೇಶದಲ್ಲಿ ಇರಬೇಕಾದವರು ತಮ್ಮ ಕುಟುಂಬಗಳೊಂದಿಗೆ ಉಳಿಯಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ಎಂದು ಅವರು ಹೇಳಿದರು.

ಸಿನೊಡಲ್ ಹಾದಿ
ಸಿನೊಡಲಿಟಿಗೆ ಸಂಬಂಧಿಸಿದಂತೆ, ಅಮೇರಿಕದ ಧರ್ಮಾಧ್ಯಕ್ಷರುಗಳು ಭಾಗವಹಿಸುವಿಕೆಗೆ ಬದ್ಧರಾಗಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಕೋಕ್ಲಿರವರು ಹೇಳಿದರು, ಅಮೆರಿಕದಲ್ಲಿರುವ ಧರ್ಮಸಭೆಯು ಈಗಾಗಲೇ ಹಲವಾರು ರಚನೆಗಳನ್ನು ಹೊಂದಿದ್ದು ಅದು ವಿವಿಧ ಹಂತಗಳಲ್ಲಿ ಸಮಾಲೋಚನೆಯನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಗಮನಿಸಿದರು. ಆದಾಗ್ಯೂ, ನೆರೆಹೊರೆಯವರ ಕಷ್ಟವನ್ನು ಆಲಿಸುವಿಕೆ ಮತ್ತು ಸಂಭಾಷಣೆಯ ಆಳಕ್ಕೆ ಪ್ರವೇಶಿಸಲು ಧರ್ಮಸಭೆಯನ್ನು ಆಹ್ವಾನಿಸಲಾಗುತ್ತಿದೆ ಎಂದು ಅವರು ಒಪ್ಪಿಕೊಂಡರು, ವಿಶ್ವಗುರು ಫ್ರಾನ್ಸಿಸ್ ರವರ ನೆಚ್ಚಿನ ಪದವನ್ನು ಬಳಸಿಕೊಂಡು ನಾವು ಪರಸ್ಪರ ಸಂಭಾಷಣೆ ನಡೆಸುತ್ತೇವೆ.

ಸಿನೊಡಲಿಟಿಯ ಅರ್ಥ
ಅಮೆರಿಕದಲ್ಲಿನ ಧರ್ಮಸಭೆಯ ಸಿನೊಡಲಿಟಿಯಲ್ಲಿ ಬೆಳೆಯುತ್ತಿದೆ ಮತ್ತು "ಈ ಹೊಸ ಹಾದಿಯಲ್ಲಿ" ಪ್ರಗತಿ ಸಾಧಿಸಲು ಬದ್ಧವಾಗಿದೆ ಎಂದು ಧರ್ಮಾಧ್ಯಕ್ಷರಾದ ಕೋಕ್ಲಿರವರು ಹೇಳಿದರು, ಸಿನೊಡಲ್ ಚರ್ಚ್ ಎಂದರೇನು ಎಂಬುದರ ಬಗ್ಗೆ ಸ್ಪಷ್ಟತೆಯ ಕೊರತೆಯನ್ನು ಸಹ ಗುರುತಿಸಿದ್ದಾರೆ. ಸಿನೊಡಾಲಿಟಿಯ ಸರಳ ವಿವರಣೆಯನ್ನು ಕೇಳಿದಾಗ, ಸರಳವಾದ ಮಾರ್ಗವೆಂದರೆ, ವಿಶ್ವಗುರು ಫ್ರಾನ್ಸಿಸ್ ರವರು ಧರ್ಮಸಭೆಯೊಂದಿಗೆ ಒಟ್ಟಿಗೆ ನಡೆಯುವುದು ಎಂದು ನಾನು ಭಾವಿಸುತ್ತೇನೆ.

ಧರ್ಮಸಭೆಯೊಳಗೆ ಸೇರಿರುವ ಭಾವನೆಯನ್ನು ಎತ್ತಿ ತೋರಿಸುತ್ತಾ, ಧರ್ಮಾಧ್ಯಕ್ಷರಾದ ಕೋಕ್ಲಿರವರು ಇದು ಧರ್ಮಾಧ್ಯಕ್ಷರ ದರ್ಮಸಭೆಯಲ್ಲ ಎಂದು ಹೇಳಿದರು. "ಇದು ಸಭಾಪಾಲಕರ ದರ್ಮಸಭೆಯಲ್ಲ. ಇದು ನಮ್ಮ ಧರ್ಮಸಭೆ, ದೀಕ್ಷಾಸ್ನಾನ ಸ್ವೀಕರಿಸಿದ ಸದಸ್ಯರೆಲ್ಲರೂ ಪರಸ್ಪರ ಸಂಪರ್ಕದಲ್ಲಿ ವಾಸಿಸುತ್ತಿದ್ದಾರೆ ಧರ್ಮಸಭೆಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವವರೊಂದಿಗೆ ಉತ್ತಮವಾದ ಸಂವಹನದೊಂದಿಗೆ ವಾಸಿಸುತ್ತಿದ್ದಾರೆ.

ಧರ್ಮಾಧ್ಯಕ್ಷರುಗಳು ಮತ್ತು ಯಾಜಕರುಗಳು ದಾರಿ ತೋರಿಸಬೇಕು ಮತ್ತು ಆದರೆ ಸಿನೊಡಲ್ ಧರ್ಮಸಭೆಯಾಗಿರುವುದರಿಂದ ಎಲ್ಲರ ಭಾಗವಹಿಸುವಿಕೆಯ ಅಗತ್ಯವಿರುತ್ತದೆ, ಧರ್ಮಸಭೆಯ ಏಕತೆಯನ್ನು ಖಚಿತಪಡಿಸಿಕೊಳ್ಳಲು ಪರಸ್ಪರ ಐಕ್ಯತೆಯನ್ನು ನಿರ್ಮಿಸಲು ಬದ್ಧವಾಗಿದೆ.
 

15 ನವೆಂಬರ್ 2025, 19:07