Alistair Dutton - Segretario Generale di Caritas Internationalis - al meeting organizzato da Caritas Ucraina con rappresentanti di diverse Caritas e con l' Arcivescovo Maggiore Shevchuk Alistair Dutton - Segretario Generale di Caritas Internationalis - al meeting organizzato da Caritas Ucraina con rappresentanti di diverse Caritas e con l' Arcivescovo Maggiore Shevchuk 

COP30ನಲ್ಲಿ ಕಾರಿತಾಸ್: ಭರವಸೆ ಒಂದು ಆಯ್ಕೆ

ನಲವತ್ತಕ್ಕೂ ಹೆಚ್ಚು ದೇಶಗಳ ಕಾರಿತಾಸ್ ಪ್ರತಿನಿಧಿಗಳು COP30ಗಾಗಿ ಬ್ರೆಜಿಲ್‌ನಲ್ಲಿದ್ದಾರೆ, ಹವಾಮಾನ ಬಿಕ್ಕಟ್ಟು ಫಿಲಿಪೈನ್ಸ್‌ನಿಂದ ಸಹೇಲ್‌ವರೆಗೆ ಆಳವಾಗುತ್ತಿದ್ದಂತೆ ರಾಜಕೀಯ ಹಿತಾಸಕ್ತಿಗಳಿಗಿಂತ ಮಾನವ ಜೀವಗಳತ್ತ ಕಾಳಜಿವಹಿಸುವಂತೆ ವಿಶ್ವ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.

ಫ್ರಾನ್ಸೆಸ್ಕಾ ಮೆರ್ಲೊ

ಅಂತರರಾಷ್ಟ್ರೀಯ ಕಾರಿತಾಸ್‌ ವಿಶ್ವದಾದ್ಯಂತದ ಅತ್ಯಂತ ಭಯಾನಕ ಮಾನವ ಹಕ್ಕುಗಳ ದುರಂತಗಳಲ್ಲಿ ಮುಂಚೂಣಿಯಲ್ಲಿದೆ. ಇದು ನಿಜವಾಗಿಯೂ ಎಲ್ಲೆಡೆ ಇದೆ. ಬ್ರೆಜಿಲ್‌ನ COP30 ಇದಕ್ಕೆ ಹೊರತಾಗಿಲ್ಲ, ಅಲ್ಲಿ ನಲವತ್ತಕ್ಕೂ ಹೆಚ್ಚು ದೇಶಗಳ ಕಾರಿತಾಸ್ ಪ್ರತಿನಿಧಿಗಳು ತಾವು ಸೇವೆ ಸಲ್ಲಿಸುವ ಜನರ ಧ್ವನಿಯನ್ನು ಜಾಗತಿಕ ವೇದಿಕೆಗೆ ತರುತ್ತಿದ್ದಾರೆ.

COPಯಲ್ಲಿನ ಅವರ ಸಮಿತಿಯ ಸಮಯದಲ್ಲಿ ಕಾರಿತಾಸ್‌ ವಿಶ್ವಾದ್ಯಂತ ಉಪಸ್ಥಿತಿಯು ಸ್ಪಷ್ಟವಾಗಿ ಕಂಡುಬಂದಿತು, ಇದರಲ್ಲಿ ಪ್ರತಿನಿಧಿಗಳು ಮತ್ತು ಅತಿಥಿಗಳು ಫಿಲಿಪೈನ್ಸ್ ನ್ನು ಅಪ್ಪಳಿಸಿದ ಭಯಾನಕ ಚಂಡಮಾರುತಗಳ ಬಗ್ಗೆ ಮಾತನಾಡಿದರು.

COP30 ಪ್ರಕ್ರಿಯೆಯ ಹೃದಯಭಾಗದಲ್ಲಿ ರಾಜಕೀಯ ಹಿತಾಸಕ್ತಿಗಳಿಗಿಂತ ಮಾನವ ಜೀವಗಳನ್ನು ಇರಿಸಲು ಸಮಾಲೋಚಕರನ್ನು ಒತ್ತಾಯಿಸುವ ದಾಖಲೆಯನ್ನು ಮಂಡಿಸಿದ ಜಾಗತಿಕ ದಕ್ಷಿಣದ ಮೂವರು ಕಾರ್ಡಿನಲ್‌ಗಳೊಂದಿಗಿನ ಸಭೆಯ ಕೊನೆಯಲ್ಲಿ, ಅಂತರರಾಷ್ಟ್ರೀಯ ಕಾರಿತಾಸ್‌ ನ ಪ್ರಧಾನ ಕಾರ್ಯದರ್ಶಿ ಅಲಿಸ್ಟೈರ್ ಡಟ್ಟನರವರು, COP (UNFCCCಯು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಂಸ್ಥೆ) ನೇತೃತ್ವ ವಹಿಸುವ UNFCCC ಕಾರ್ಯದರ್ಶಿಗೆ ಹಸ್ತಾಂತರಿಸಿದ ಅರ್ಜಿಗೆ ಸಹಿ ಹಾಕಲು ಎಲ್ಲರನ್ನೂ ಆಹ್ವಾನಿಸಿದಾಗ ಇದು ಪ್ರತಿಫಲಿಸಿತು, ಇದರಲ್ಲಿ ಜಾಗತಿಕವಾಗಿ 200 ಸಂಸ್ಥೆಗಳಿಂದ 200,000 ಸಹಿಗಳಿವೆ. ಜನರು ಎದುರಿಸುತ್ತಿರುವ ಸಾಲದ ಬಿಕ್ಕಟ್ಟಿನಿಂದ ಪಾರಾಗಲು ನಾವು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾದ ಕೆಲವು ನಿರ್ದಿಷ್ಟ ಶಿಫಾರಸುಗಳನ್ನು ಆ ಅರ್ಜಿಯು ಹೊಂದಿದೆ ಎಂದು ಅವರು ವ್ಯಾಟಿಕನ್ ಸುದ್ದಿಯವರಿಗೆ ತಿಳಿಸಿದರು.

ಕಾರಿತಾಸ್‌, ಇತರ ಕಥೋಲಿಕ ಸಂಸ್ಥೆಗಳೊಂದಿಗೆ, ಆ ನೈತಿಕ ಬೋಧನೆ, ಆ ನೈತಿಕ ಧ್ವನಿಯನ್ನು ಕೋಣೆಗೆ ತರಲು ಪ್ರಯತ್ನಿಸುತ್ತದೆ ಎಂದು ಅವರು ವಿವರಿಸುತ್ತಾರೆ. ಜನರ ಹೃದಯಗಳನ್ನು ಸ್ಪರ್ಶಿಸಲು, ನಮ್ಮ ಮನಸ್ಸಿನಲ್ಲಿ ಈಗಾಗಲೇ ತಿಳಿದಿರುವ ಕೆಲಸವನ್ನು ಅವರು ಮಾಡಲು ಪ್ರಯತ್ನಿಸುತ್ತದೆ ಎಂದು ಅವರು ವಿವರಿಸುತ್ತಾರೆ.

ಆದರೆ ನೈತಿಕ ಅನುಕರಣೆಯ ಜೊತೆಗೆ ಸಂಖ್ಯೆಗಳ ನಿರಾಕರಿಸಲಾಗದ ತೂಕವಿದ,. 1.4 ಬಿಲಿಯನ್ ಕಥೊಲಿಕರು ಮತ್ತು ಪ್ರಪಂಚದ 85% ರಷ್ಟು ಜನರು ವಿಶ್ವಾಸದ ಸಂಪ್ರದಾಯಕ್ಕೆ ಸೇರಿದವರು. ಡಟ್ಟನ್‌ಗೆ, ಇದು ಧಾರ್ಮಿಕ ಪ್ರಭಾವದ ಬಗ್ಗೆ ಅಲ್ಲ, ಬದಲಾಗಿ ನಾಯಕರ ನಿರ್ಧಾರಗಳು ಬಹುಪಾಲು ಮಾನವೀಯತೆಯ ಮೌಲ್ಯಗಳು ಮತ್ತು ವಾಸ್ತವಗಳನ್ನು ಪ್ರತಿಬಿಂಬಿಸಬೇಕು ಎಂದು ನೆನಪಿಸುವುದರ ಬಗ್ಗೆ, ನೀವು ಯಾವುದೇ ವಿಶ್ವಾಸದಿಂದ ಬಂದರೂ, ನಾವೆಲ್ಲರೂ ಒಂದೇ ರೀತಿಯ ತೀರ್ಮಾನಗಳಿಗೆ ಬರುತ್ತೇವೆ. ವಿಶ್ವಾಸದ ಧ್ವನಿ, ಕಥೋಲಿಕ - ಹೌದು, ಆದರೆ ಇತರ ಹಲವು ವಿಶ್ವಾಸದ ಜೊತೆಗೆ - ಇರುವುದು ಮುಖ್ಯ, ಇದು ಭಕ್ತಾಧಿಗಳಾಗಿರುವ ನಮಗೆಲ್ಲರಿಗೂ ಬಹು ಮುಖ್ಯವಾಗಿದೆ ಎಂದು ಅವರು ಹೇಳುತ್ತಾರೆ.

ಅದಕ್ಕಾಗಿಯೇ ಇಂದಿನ ಮಾತುಕತೆಗಳನ್ನು ಸಂಕುಚಿತ ರಾಷ್ಟ್ರೀಯ ಹಿತಾಸಕ್ತಿಗಳಿಂದ ದೂರವಿಟ್ಟು ಮತ್ತೆ ಜನರ ಮೇಲೆ ಕೇಂದ್ರೀಕರಿಸಬೇಕು. ವಿಶೇಷವಾಗಿ ಅತ್ಯಂತ ದುರ್ಬಲರ ಮೇಲೆ ಕೇಂದ್ರೀಕರಿಸಬೇಕು ಎಂದು ಡಟನರವರು ಒತ್ತಿ ಹೇಳುತ್ತಾರೆ. "ಅವರು "ಆರ್ಥಿಕತೆಗೆ ಸೇವೆ ಸಲ್ಲಿಸುವ ಜನರಾಗಿ ಅಲ್ಲ, ನಮಗೆ ಜನರಿಗೆ ಸೇವೆ ಸಲ್ಲಿಸುವ ಆರ್ಥಿಕತೆ ಬೇಕು" ಎಂದು ಒತ್ತಾಯಿಸುತ್ತಾರೆ.

ಭರವಸೆ ಒಂದು ಆಯ್ಕೆಯಾಗಿದೆ ಎಂದು ಅವರು ಹೇಳುತ್ತಾರೆ. ಅದನ್ನು ಧರ್ಮಸಭೆಯು ಪಟ್ಟುಬಿಡದೆ ಅದರ ಸಫಲತೆಯ ಕಾರ್ಯದೆಡೆ ತಮ್ಮ ಸೇವೆಯನ್ನು ಮುಂದುವರಿಸಬೇಕು. ನಾವು ನಿರಾಶೆಯಲ್ಲಿ ಬೆಳೆಯಲು ಸಾಧ್ಯವಿಲ್ಲ, ಬದಲಿಗೆ ನಾವು ಉತ್ತಮ ಪ್ರಪಂಚಕ್ಕಾಗಿ ಶ್ರಮಿಸುತ್ತಲೇ ಇರಬೇಕು ಆಗ ಮಾತ್ರ ಇದು ಸಾಧ್ಯ , ಎಂದು ಅವರು ತೀರ್ಮಾನಿಸುತ್ತಾರೆ.

20 ನವೆಂಬರ್ 2025, 16:28