COP30ನಲ್ಲಿ CAFOD: ನ್ಯಾಯ ಮತ್ತು ಹವಾಮಾನ ಆರ್ಥಿಕತೆಯಲ್ಲಿ ಕಥೋಲಿಕ ನಟರ ಪಾತ್ರ
ಫ್ರಾನ್ಸೆಸ್ಕಾ ಮೆರ್ಲೊ ಮತ್ತು ಲಿಂಡಾ ಬೋರ್ಡೋನಿ
CAFODನ ವಕಾಲತ್ತು ಮತ್ತು ಸಂವಹನ ನಿರ್ದೇಶಕ ನೀಲ್ ಥಾರ್ನ್ಸ್ ರವರು, COP30 ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಗಾಗಿ ಬೆಲೆಮ್‌ನಲ್ಲಿದ್ದಾರೆ. ಅಲ್ಲಿ ಅವರು ರಾಷ್ಟ್ರೀಯ ಕಥೋಲಿಕ ಹವಾಮಾನ ಮತ್ತು ಪರಿಸರ ಕಾರ್ಯಕರ್ತರದೊಂದಿಗೆ (NCCEAs) ವಿಶಾಲ ಒಕ್ಕೂಟದಲ್ಲಿ ಪವಿತ್ರ ಪೀಠಾಧಿಕಾರಿಯ ನಿಯೋಗದೊಂದಿಗೆ ಭಾಗವಹಿಸುತ್ತಿದ್ದಾರೆ.
ವ್ಯಾಟಿಕನ್ ಸುದ್ಧಿಯವರ ಜೊತೆ ಮಾತನಾಡಿದ ಇವರು, ಈ ವರ್ಷದ ಸಮ್ಮೇಳನದಲ್ಲಿ ಸಂಘಟಿತ ಕಥೊಲಿಕ ನಿಶ್ಚಿಯತೆಯ ಮಹತ್ವವನ್ನು ಒತ್ತಿ ಹೇಳಿದರು. ಪವಿತ್ರ ಪೀಠಾಧಿಕಾರಿಯು ಒಂದು ರಾಜ್ಯ ಪಕ್ಷವಾಗಿ ಹವಾಮಾನ ಬದಲಾವಣೆಯ ವಿಷಯಗಳ ಬಗ್ಗೆ ಮಧ್ಯಪ್ರವೇಶಿಸಬಹುದು, ಇದು ಲೌದಾತೊ ಸಿ ಅವರ 10ನೇ ವಾರ್ಷಿಕೋತ್ಸವದಂದು ನಿಜವಾಗಿಯೂ ಮುಖ್ಯವಾಗಿದೆ. ಕಾರ್ಡಿನಲ್‌ಗಳು ಮತ್ತು ಧರ್ಮಾಧ್ಯಕ್ಷರುಗಳು ಸೇರಿದಂತೆ ಕಥೋಲಿಕ ಕಾರ್ಯಕರ್ತರು ಲೌದಾತೊ ಸಿ'ಯಲ್ಲಿ ಎದ್ದಿರುವ ಕಳವಳಗಳನ್ನು ಮಾತುಕತೆಯ ಜಾಗಕ್ಕೆ ತರುತ್ತಿದ್ದಾರೆ ಎಂದು ಥಾರ್ನ್ಸ್ ರವರು ಗಮನಿಸಿದರು.
ಲೌಡಾಟೊ ಸಿʼಯಲ್ಲಿ ಬೇರೂರಿರುವ ಭರವಸೆಯ ಸಂದೇಶ
ಕಥೋಲಿಕ ಸಂಸ್ಥೆಗಳು COP30ನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಕಾರ್ಯಗಳೊಂದಿಗೆ ಧರ್ಮಸಭೆಯ ಪರಿಸರ ಕಾಳಜಿಗಳನ್ನು ಹೇಗೆ ಸಂಪರ್ಕಿಸುತ್ತವೆ ಎಂದು ಕೇಳಿದಾಗ, ಥಾರ್ನ್ಸ್ ರವರು ಈ ವಿಶ್ವಪರಿಪತ್ರದ ಕ್ರಿಯೆಯನ್ನು ಪ್ರೇರೇಪಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಲೌದಾತೊ ಸಿʼಯು ನಿಜವಾಗಿಯು ಒಂದು ಭರವಸೆಯನ್ನು ತರುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದು ನೈಜವಾದ ಭರವಸೆಯ ಸಂದೇಶವಾಗಿದೆ. ವಿಶ್ವವು ಬಿಕ್ಕಟ್ಟಿನಲ್ಲಿದೆ, ಆದರೆ ಪರಿಹಾರಗಳು ಏನೆಂದು ನಮಗೆ ತಿಳಿದಿದೆ ಮತ್ತು ಹೃದಯದ ಪರಿವರ್ತನೆ ಮತ್ತು ಸೂಕ್ತವಾದ ಉತ್ತಮ ಸಂಬಂಧಗಳೊಂದಿಗೆ ನಾವು ಇದನ್ನು ಬದಲಾಯಿಸಬಹುದು ಎಂದು ನಮಗೆ ತಿಳಿದಿದೆ.
ನಾಡಿನ ಮೇಲಿನ ಪರಿಣಾಮಗಳು
CAFOD ಪಾಲುದಾರರು ಏಷ್ಯಾ, ಆಫ್ರಿಕಾ ಮತ್ತು ಲತೀನ್ ಅಮೆರಿಕಾದಾದ್ಯಂತ ಕೆಲಸ ಮಾಡುತ್ತಾರೆ. ಹವಾಮಾನ ಬಿಕ್ಕಟ್ಟಿನ ಅನುಭವವನ್ನು ಅವರು ವಿಭಿನ್ನ ರೀತಿಯಲ್ಲಿ ವೇದಿಕೆಗೆ ತರುತ್ತಾರೆ ಎಂದು ಥಾರ್ನ್ಸ್ ರವರು ಹೇಳಿದರು.
ಆಯ್ಕೆಗಳು ಮತ್ತು ನೈತಿಕ ನಾಯಕತ್ವ
ಮಿಲಿಟರಿ ವೆಚ್ಚಕ್ಕಾಗಿ ನಿಧಿಯ ಲಭ್ಯತೆ ಮತ್ತು ಹವಾಮಾನ ಹಣಕಾಸು ಸಜ್ಜುಗೊಳಿಸುವ ತೊಂದರೆಯ ನಡುವಿನ ಅಸಂಗತತೆಯನ್ನು ಥಾರ್ನ್ಸ್ ರವರು ಗಮನಿಸಿದರು. ಇದು ಆಯ್ಕೆಗಳ ಬಗ್ಗೆ. ಜಗತ್ತಿನಲ್ಲಿ ಸಾಕಷ್ಟು ಹಣವಿದೆ... ಹಾಗೆಯೇ ದೇಶಗಳು ಬಯಸಿದರೆ, ಅವರು ಅದನ್ನು ಜಗತ್ತಿನ ಒಳಿತಿಗೆ ಇದನ್ನು ಬಳಸಬಹುದಾಗಿದೆ. ಖಂಡಗಳಾದ್ಯಂತದ ಧರ್ಮಸಭೆಯ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ ಅವರು ನೈತಿಕ ನಾಯಕತ್ವದ ಮಹತ್ವವನ್ನು ಎತ್ತಿ ತೋರಿಸಿದರು.