Cristo Re dell'universo, Gesu Cristo Cristo Re dell'universo, Gesu Cristo  (©Renáta Sedmáková - stock.adobe.com)

ಪ್ರಭುವಿನ ದಿನದ ಚಿಂತನೆ: ಅಗತ್ಯವಿರುವ ರಾಜತ್ವ

ತಾಯಿ ಧರ್ಮಸಭೆಯು, ವಿಶ್ವದ ಅರಸ ನಮ್ಮ ಪ್ರಭುಯೇಸು ಕ್ರಿಸ್ತರಾಜರ ಮಹೋತ್ಸವದ ದಿನವನ್ನು ಆಚರಿಸುತ್ತಿರುವಾಗ, ಅಬಾಟ್ ಮರಿಯನ್ ನ್ಗುಯೆನ್ ರವರು ಒಂದು ವರ್ಷವದ ನಂತರ, ಅಂತ್ಯವಿರದಾತನ ರಾಜತ್ವ ಎಂಬ ವಿಷಯದ ಬಗ್ಗೆ ಧ್ಯಾನಿಸುತ್ತಾರೆ.

ಅಬಾಟ್ ಮರಿಯನ್ ನ್ಗುಯೆನ್

ಇಂದಿನ ಶುಭಸಂದೇಶವು ಎಲ್ಲಾ ಧರ್ಮಗ್ರಂಥಗಳಲ್ಲಿ ಅತ್ಯಂತ ಗಮನಾರ್ಹವಾದ ವಿರೋಧಾಭಾಸಗಳಲ್ಲಿ ಒಂದನ್ನು ನಮಗೆ ಎದುರಿಸುತ್ತದೆ. ಅದು ಚಿನ್ನದ ಸಿಂಹಾಸನದ ಮೇಲೆ ಅಲ್ಲ, ಬದಲಿಗೆ ಶಿಲುಬೆಯ ಮೇಲೆ ಕುಳಿತಿರುವ ರಾಜನಾಗಿ ಧ್ಯಾನಿಸುತ್ತಿದೆ. ಆಡಳಿತಗಾರರು ಯೇಸುವನ್ನು ಅಪಹಾಸ್ಯ ಮಾಡಿದರು ಎಂಬ ಮೊದಲ ವಾಚನದಿಂದಲೇ, ಈ ದೃಶ್ಯವು ಮಾನವ ರಾಜತ್ವದ ನಿರೀಕ್ಷೆಗಳಾದ ಅಧಿಕಾರ, ಪ್ರಾಬಲ್ಯ, ನಿಯಂತ್ರಣ ಮತ್ತು ಪ್ರಭುಯೇಸು ಬಹಿರಂಗಪಡಿಸುವ ರಾಜತ್ವದ ನಡುವಿನ ವ್ಯತ್ಯಾಸವನ್ನು ಬಹಿರಂಗಪಡಿಸುತ್ತಿದೆ, ಈ ರಾಜತ್ವವು ಪ್ರೀತಿ, ತ್ಯಾಗ ಮತ್ತು ಕರುಣೆಯಲ್ಲಿ ಬೇರೂರಿದೆ.

ಸುಮಾರು ನೂರು ವರ್ಷಗಳ ಹಿಂದೆ ವಿಶ್ವಗುರು XIನೇ ಪಯಸ್ ರವರು ಪ್ರಾರಂಭಿಸಿದ ಈ ಹಬ್ಬದಂದು, ಈ ಶುಭಸಂದೇಶವು 1925ರಲ್ಲಿ ಅವರಿಗೆ ಸಂಬಂಧಿಸಿದ ವಿಷಯಗಳೊಂದಿಗೆ ನಮ್ಮನ್ನು ಎದುರಿಸುತ್ತದೆ. ಮಾನವ ಆತ್ಮ ಮತ್ತು ಮಾನವ ಸಮಾಜದಲ್ಲಿ ಅಧಿಕವಾಗುತ್ತಿರುವ ಮೂರು ಬೆದರಿಕೆಗಳಾದ ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ನಾಸ್ತಿಕತೆಗೆ ಪ್ರತಿಕ್ರಿಯೆಯಾಗಿ ಅವರು ವಿಜಯರಾಜ ಕ್ರಿಸ್ತರಾಜನ ಹಬ್ಬವನ್ನು ಪ್ರಾರಂಭಿಸಿದರು. ಮೊದಲನೆಯ ಮಹಾಯುದ್ಧದ ವಿನಾಶದ ನಂತರ ಈ ಶಕ್ತಿಗಳು ತೀವ್ರಗೊಳ್ಳುವುದನ್ನು ಆತನು ಕಂಡನು - ದೇವರನ್ನು ಸಮಾಜದ ಅಂಚಿನಲ್ಲಿ ತಳ್ಳುವ ಮತ್ತು ಮಾನವ ಶಕ್ತಿ, ಮಾನವ ಹೆಮ್ಮೆ ಹಾಗೂ ಮಾನವ ಸ್ವಾಯತ್ತತೆಯನ್ನು ದೇವರ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಗುರಿಯನ್ನು ಹೊಂದಿರುವ ಶಕ್ತಿಗಳಾಗಿವೆ.

ಸಾರ್ವಜನಿಕ ಜೀವನದಿಂದ ವಿಶ್ವಾಸವನ್ನು ಬೇರ್ಪಡಿಸುವುದು ಎಂದಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಒಂದು ಕಾಲದಲ್ಲಿ ಸಾಮಾನ್ಯ ಆದರ್ಶಗಳಲ್ಲಿ ನೆಲೆಗೊಂಡಿದ್ದ ರಾಷ್ಟ್ರಗಳು ಈಗ ತಮ್ಮೊಳಗೆ ಅಪರಿಚಿತರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ ಮತ್ತು ವಲಸಿಗರ ಕಡೆಗೆ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಪವಿತ್ರವಾದದ್ದನ್ನು ಹೆಚ್ಚಾಗಿ ಕುಶಲತೆಯಿಂದ ಅಥವಾ ದಬ್ಬಾಳಿಕೆಯಿಂದ ಚಿತ್ರಿಸಲಾಗುತ್ತಿದೆ, ನೈತಿಕ ಸತ್ಯವು ಮಾನವ ಸ್ವಾತಂತ್ರ್ಯಕ್ಕೆ, ಅದರ ಅಡಿಪಾಯಕ್ಕಿಂತ ಹೆಚ್ಚಾಗಿ ಬೆದರಿಕೆಯಾಗಿದೆ. ಜಾತ್ಯತೀತತೆಯು ವಿಮೋಚನೆಯ ಭರವಸೆ ನೀಡುತ್ತದೆ; ಸಾಪೇಕ್ಷತಾವಾದವು ಶಾಂತಿ ಮತ್ತು ವೈಯಕ್ತಿಕ ತೃಪ್ತಿಯ ಭರವಸೆ ನೀಡುತ್ತದೆ, ಅತೀಂದ್ರಿಯ ಮಾನವತಾವಾದವು ಪ್ರಗತಿಯ ಭರವಸೆ ನೀಡುತ್ತದೆ. ಈ ಚಳುವಳಿಗಳು ಸಾಮಾನ್ಯವಾಗಿ ಶಾಂತಿ, ಸ್ವೀಕಾರ ಮತ್ತು ಬಹುತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂಬುದು ನಿಜ, ಆದರೆ ಈ ಚಳುವಳಿಗಳು ನಿಜವಾಗಿಯೂ ಮಾನವ ಹೃದಯವನ್ನು ಸೌಖ್ಯಪಡಿಸಿವೆಯೇ ಅಥವಾ ಸಮಾಜವನ್ನು ಹೆಚ್ಚಿನ ಸಾಮರಸ್ಯಕ್ಕೆ ತಂದಿವೆಯೇ?

ಈ ಲೋಕಕ್ಕೆ, ಯೇಸು ನಮಗೆ ಸಂಪೂರ್ಣವಾಗಿ ವಿಭಿನ್ನವಾದ ರಾಜತ್ವವನ್ನು ತೋರಿಸುತ್ತಾನೆ. ಆತನ ರಾಜ್ಯವು ಬಲವಂತದಿಂದ ಸ್ಥಾಪಿಸಲ್ಪಟ್ಟಿಲ್ಲ ಆದರೆ ಬಳಲುತ್ತಿರುವವರಿಗೆ ಪ್ರೀತಿಯ ಮೂಲಕ ಸ್ಥಾಪಿಸಲ್ಪಟ್ಟಿದ್ದಾರೆ. ಆತನ ನಿಯಮವು ಇತರರನ್ನು ತನ್ನ ಪಾದಗಳ ಕೆಳಗೆ ಇಡುವುದರ ಬಗ್ಗೆಯಲ್ಲ, ಬದಲಿಗೆ ಮರೆತುಹೋದವರನ್ನು ಮತ್ತು ತಪ್ಪಿತಸ್ಥರನ್ನು ಕರುಣೆಯ ಅಪ್ಪುಗೆಗೆ ಎತ್ತುವುದರ ಬಗ್ಗೆ - ಪಶ್ಚಾತ್ತಾಪಪಟ್ಟ ಕಳ್ಳನಿಗೆ "ಇಂದೇ, ನೀನು ನನ್ನೊಂದಿಗೆ ಪರಂಧಾಮದಲ್ಲಿರುವೆ" ಎಂದು ಆತನು ಪ್ರತಿಕ್ರಿಯಿಸಿದಾಗ ನಾವು ಸ್ಪಷ್ಟವಾಗಿ ಆತನ ರಾಜ್ಯವು ಬಲವಂತದಿಂದ ಸ್ಥಾಪಿಸಲ್ಪಟ್ಟಿಲ್ಲ ಎಂಬುದನ್ನು ನೋಡುತ್ತೇವೆ.

ಒಬ್ಬ ಆತ್ಮವನ್ನೂ ಕಳೆದುಕೊಳ್ಳಲು ನಿರಾಕರಿಸುವ ರಾಜನಿವನು. ಕ್ರಿಸ್ತನ ನಿಜವಾದ ವಿಜಯವು ಪ್ರದೇಶ ಅಥವಾ ಅಧಿಕಾರ ರಚನೆಗಳಲ್ಲ, ಅದು ಮಾನವ ಹೃದಯವನ್ನು ಸ್ಪರ್ಶಿಸುವ ವಿಜಯವಾಗಿದೆ. ಇತಿಹಾಸದುದ್ದಕ್ಕೂ, ಪ್ರಭುಯೇಸು ಕ್ರಿಸ್ತನಷ್ಟು ಆಳವಾಗಿ, ಸಾರ್ವತ್ರಿಕವಾಗಿ ಅಥವಾ ಹೆಚ್ಚು ಶಾಶ್ವತವಾಗಿ ಮಾನವ ಹೃದಯವನ್ನು ಯಾರೂ ಸೆರೆಹಿಡಿದಿಲ್ಲ.

ಕ್ರಿಸ್ತನ ರಾಜತ್ವವು ರಾಷ್ಟ್ರಗಳಿಗೆ ಸವಾಲು ಹಾಕಿದರೆ, ಅದು ನಮ್ಮ ಹೃದಯಗಳಿಗೂ ಸವಾಲು ಹಾಕುತ್ತದೆ. ನಾವು ಇನ್ನೂ ನಮ್ಮ ವಿಶ್ವಾಸವನ್ನು ದೈನಂದಿನ ನಮ್ಮ ಜೀವನದಿಂದ ಬೇರ್ಪಡಿಸುತ್ತೇವೆಯೇ? ಅಧಿಕಾರವನ್ನು ವಶಪಡಿಸಿಕೊಳ್ಳುವುದು, ವಿರೋಧಿಗಳನ್ನು ನಿಗ್ರಹಿಸುವುದು ಅಥವಾ ಸೇಡು ತೀರಿಸಿಕೊಳ್ಳುವ ಸುತ್ತ ಸುತ್ತುವ ರಾಜಕೀಯ, ಸಾಮಾಜಿಕ ಅಥವಾ ವೈಯಕ್ತಿಕ ವ್ಯವಸ್ಥೆಗಳನ್ನು ನಾವು ಬೆಂಬಲಿಸುವುದನ್ನು ಮುಂದುವರಿಸುತ್ತೇವೆಯೇ? ನಮ್ಮ ಸ್ವಂತ ಸಂಬಂಧಗಳಲ್ಲಿ, ನಾವು ನಮ್ಮ ಇಚ್ಛೆಯಂತೆ ನಡೆದುಕೊಳ್ಳಲು ಒತ್ತಾಯಿಸುತ್ತೇವೆಯೇ, ಇತರರನ್ನು ಶ್ರೇಷ್ಠತೆಯ ಸ್ಥಾನದಿಂದ ಅವರ ಜೀವನವನ್ನು ನಿರ್ಣಯಿಸುತ್ತೇವೆಯೇ ಅಥವಾ ನಾವು ನಿಜವಾಗಿಯೂ ಪ್ರಭುಯೇಸುವನ್ನು ವಿಶ್ವದ ರಾಜರನ್ನಾಗಿ ಮಾತ್ರವಲ್ಲದೆ ನಮ್ಮ ವೈಯಕ್ತಿಕ ವಿಶ್ವದ ಅರಸರನ್ನಾಗಿ ಮಾಡಲು ಅನುಮತಿಸುತ್ತೇವೆಯೇ?

ಕ್ರಿಸ್ತರನ್ನು ಅರಸನೆಂದು ಹೇಳಿಕೊಳ್ಳುವುದು ಎಂದರೆ ರೂಪಾಂತರದ ಮಾರ್ಗವಾಗಿ ಶಿಲುಬೆಯನ್ನು ಅಪ್ಪಿಕೊಳ್ಳುವುದು: ಸತ್ಯ, ನ್ಯಾಯ ಮತ್ತು ಸದಾಚಾರಕ್ಕಾಗಿ ತ್ಯಾಗವನ್ನು ಆರಿಸಿಕೊಳ್ಳುವುದು; ಅಸಮಾಧಾನ ಮತ್ತು ಪ್ರತೀಕಾರಕ್ಕಿಂತ, ಕರುಣೆ ಮತ್ತು ಕ್ಷಮೆಗೆ ಆದ್ಯತೆ ನೀಡುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ, ವಿಶೇಷವಾಗಿ ನಮ್ಮನ್ನು ವಿರೋಧಿಸುವ ಅಥವಾ ನಾವು ಪ್ರೀತಿಸಲು ಕಷ್ಟಕರವೆಂದು ಕಂಡುಕೊಳ್ಳುವವರಲ್ಲಿ ದೇವರ ಪ್ರತಿರೂಪವನ್ನು ಗುರುತಿಸುವುದಾಗಿದೆ. ಕ್ರಿಸ್ತರನ್ನು ಅರಸನೆಂದು ಘೋಷಿಸುವುದು ಎಂದರೆ ಆತನ ಮಾರ್ಗವು - ನಮ್ಮ ಹಾದಿಯನ್ನು, ಆತನ ರಾಜ್ಯವು ನಮ್ಮ ವಿಶ್ವ ದೃಷ್ಟಿಕೋನವನ್ನು ಮತ್ತು ಆತನ ಕರುಣೆಯು ನಮ್ಮ ಹೃದಯಗಳನ್ನು ಪುನರ್ರೂಪಿಸುವುದಾಗಿದೆ.
 

22 ನವೆಂಬರ್ 2025, 11:18