ಭರವಸೆಯ ಮೂಲಕ ಅಮೆರಿಕದ ಕ್ರಿಮಿನಲ್ ಕಾನೂನು ವ್ಯವಸ್ಥೆಯ ಪರಿವರ್ತನೆ
ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿ
2025ರ ಜ್ಯೂಬಿಲಿ ವರ್ಷದಿಂದ ಸ್ಫೂರ್ತಿ ಪಡೆದು, ಕಥೋಲಿಕ ಸೇವಾಕಾರ್ಯದ ನಾಯಕರು, ಶೈಕ್ಷಣಿಕ ಮತ್ತು ಕಾನೂನು ವೃತ್ತಿಪರರು, ಪುನಶ್ಚೈತನ್ಯಕಾರಿ ನ್ಯಾಯ ವೃತ್ತಿಪರರು ಮತ್ತು ಹಾನಿ, ಅಪರಾಧ ಮತ್ತು ಸೆರೆವಾಸದಿಂದ ನೇರವಾಗಿ ಪ್ರಭಾವಿತರಾದ ಜನರು, ಭರವಸೆಯ ಸ್ಪಷ್ಟ ಸಂಕೇತಗಳು, ಸೆಪ್ಟೆಂಬರ್‌ನಲ್ಲಿ 2025ರ ಪುನಶ್ಚೈತನ್ಯಕಾರಿ ನ್ಯಾಯದ ರಾಷ್ಟ್ರೀಯ ಕಥೋಲಿಕ ಸಮ್ಮೇಳನಕ್ಕಾಗಿ ಒಟ್ಟುಗೂಡಿದರು.
ಹಾನಿ, ಅಪರಾಧ ಮತ್ತು ಅನ್ಯಾಯಕ್ಕೆ ಗುಣಪಡಿಸುವ ವಿಧಾನಗಳನ್ನು ಮುನ್ನಡೆಸಲು ಸಮುದಾಯಗಳು ಮತ್ತು ಧರ್ಮಸಭೆಯೊಳಗೆ ತಮ್ಮ ಸಾಮರ್ಥ್ಯವನ್ನು ನಿರ್ಮಿಸುವ ಗುರಿಯನ್ನು ಸಮ್ಮೇಳನವು ಹೊಂದಿತ್ತು.
ಈ ವರ್ಷ ಜಾರ್ಜಿಯಾದ ಅಟ್ಲಾಂಟಾದಲ್ಲಿ ಆಯೋಜಿಸಲ್ಪಟ್ಟ ಮತ್ತು ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್ ಆಯೋಜಿಸಿದ ಈ ಸಮ್ಮೇಳನವು, ಅಮೆರಿಕದ ಮರಣದಂಡನೆ ಹಾಗೂ ಸೆರೆವಾಸದ ವ್ಯವಸ್ಥೆಗಳನ್ನು ಪರಿವರ್ತಿಸುವ ಭರವಸೆಯ ನ್ಯಾಯ ಪರಿಹಾರಗಳನ್ನು ನಿರ್ಮಿಸಲು ವಿಶ್ವಾಸದ ಜನರು ಸ್ಥಳೀಯ ಸಮುದಾಯಗಳು ಮತ್ತು ಕ್ರಿಮಿನಲ್ ಕಾನೂನು ವ್ಯವಸ್ಥೆಯ ಕಾರ್ಯಕರ್ತರೊಂದಿಗೆ ಸಹಕರಿಸುವ ಪ್ರಾಯೋಗಿಕ, ನವೀನ ವಿಧಾನಗಳನ್ನು ಎತ್ತಿ ತೋರಿಸಿತು.
ಕಥೋಲಿಕ ಸಾಮಾಜಿಕ ಬೋಧನೆಯನ್ನು ಆಧರಿಸಿದ ಈ ಕಾರ್ಯಕ್ರಮವು, ಭರವಸೆಯ ಮಸೂರದ ಮೂಲಕ ಗುಣಪಡಿಸುವಿಕೆ, ಸಮನ್ವಯ ಮತ್ತು ವಿಮೋಚನೆಗಾಗಿ ಪರಿಸ್ಥಿತಿಗಳನ್ನು ಸೃಷ್ಟಿಸುವ ಸಾಮೂಹಿಕ ಕೆಲಸದ ಬಗ್ಗೆ ಚಿಂತಿಸಲು ಭಾಗವಹಿಸುವವರನ್ನು ಆಹ್ವಾನಿಸಿತು.
ಈ ಸಮ್ಮೇಳನದಲ್ಲಿ ಭಾಷಣಕಾರರು ಮತ್ತು ನಿರೂಪಕರಲ್ಲಿ ಅಪರಾಧದ ಸಂತ್ರಸ್ತರುಗಳು ಮತ್ತು ಬದುಕುಳಿದವರು ಹಾಗೂ ಹಿಂದೆ ಜೈಲಿನಲ್ಲಿದ್ದ ವ್ಯಕ್ತಿಗಳು, ವಿಶ್ವಾಸದಲ್ಲಿ ಬೇರೂರಿರುವ ಪುನಃಸ್ಥಾಪಕ ನ್ಯಾಯ ವೃತ್ತಿಪರರು, ಹಾಗೆಯೇ ನ್ಯಾಯಾಧೀಶರು, ವಕೀಲರು ಸೇರಿದಂತೆ ಕಾನೂನು ವ್ಯವಸ್ಥೆಯ ವೃತ್ತಿಪರರು ಸೇರಿದ್ದಾರೆ.
ಭರವಸೆಯೇ ದೇವರ ಅತಿಶಯವಾದ ಕರುಣೆ
ಅಟ್ಲಾಂಟಾದ ಮಹಾಧರ್ಮಾಧ್ಯಕ್ಷರಾದ, OFM ಕಾನ್ವಿರವರು, ಮಹಾಧರ್ಮಾಧ್ಯಕ್ಷ ಗ್ರೆಗೊರಿ ಜೆ. ಹಾರ್ಟ್‌ಮೇಯರ್ ರವರು ದಿವ್ಯಬಲಿಪೂಜೆಯ ಪ್ರಾರ್ಥನೆಯೊಂದಿಗೆ ಸಮ್ಮೇಳನವನ್ನು ಉದ್ಘಾಟಿಸಿದರು. ತಮ್ಮ ಪ್ರಸಂಗದಲ್ಲಿ, ಹಾರ್ಟ್‌ಮೇಯರ್ ರವರು ಸಮ್ಮೇಳನದಲ್ಲಿ ಭಾಗವಹಿಸುವವರನ್ನು ಕ್ರಿಸ್ತನ ಭರವಸೆಗೆ ನಮ್ಮ ಸಕ್ರಿಯ ಭಾಗವಹಿಸುವಿಕೆ ಹೇಗೆ ಅಗತ್ಯವಾಗಿರುತ್ತದೆ ಎಂಬುದನ್ನು ಪರಿಗಣಿಸಲು ಆಹ್ವಾನಿಸಿದರು.