ಸಂತ ಪೇತ್ರರ ಬಸಿಲಿಕಾದಲ್ಲಿ ಕ್ರಿಅಭಿಷೇಕ ತೈಲದ ಬಲಿಪೂಜೆಯಲ್ಲಿ ಭಾಗವಹಿಸುತ್ತಿರುವ ಧರ್ಮಗುರುಗಳು. (AFP ಅಥವಾ ಪರವಾನಗಿದಾರರು) ಸಂತ ಪೇತ್ರರ ಬಸಿಲಿಕಾದಲ್ಲಿ ಕ್ರಿಅಭಿಷೇಕ ತೈಲದ ಬಲಿಪೂಜೆಯಲ್ಲಿ ಭಾಗವಹಿಸುತ್ತಿರುವ ಧರ್ಮಗುರುಗಳು. (AFP ಅಥವಾ ಪರವಾನಗಿದಾರರು)  (AFP or licensors)

ಚಿಕಾಗೋದಲ್ಲಿ ಅಭಿಷೇಕ ತೈಲದ ಬಲಿಪೂಜೆ: ಗುರುಗಳಿಗೆ ‘ಶಾಂತಿಯ ಸಂಸ್ಕಾರ’ಗಳಾಗಿರಲು ಕರೆ

ಚಿಕಾಗೋದ ಪ್ರಧಾ‌ನ ದೇವಾಲಯದಲ್ಲಿ ನಡೆದ ಅಭಿಷೇಕ ತೈಲದ ಬಲಿಪೂಜೆಯ ಸಂದರ್ಭದಲ್ಲಿ, ಪ್ರಧಾ‌ನ ಗುರು ಬ್ಲೇಸ್ ಕುಪಿಚ್ ಅವರು ಸೇವೆ, ಯುದ್ಧ ಮತ್ತು ಪವಿತ್ರ ತೈಲಗಳ ಮೌನ ಭಾಷೆಯ ಕುರಿತು ಆಳವಾದ ಚಿಂತನೆ ಹಂಚಿಕೊಂಡು, ಹಿಂಸೆಯನ್ನು ತಿರಸ್ಕರಿಸಿ ಹೃದಯಗಳನ್ನು ರೂಪಾಂತರಗೊಳಿಸುವ ಶಾಂತಿಯ ಸಾಕ್ಷಿಗಳಾಗುವಂತೆ ಸಭೆಯನ್ನು ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಮಾರ್ಚ್ 31ರಂದು ಚಿಕಾಗೋದ ಪ್ರಧಾ‌ನ ದೇವಾಲಯದಲ್ಲಿ ಅಭ್ಯಂಗ ಬಲಿಪೂಜೆಯನ್ನು ಮುನ್ನಡೆಸಿದ ಪ್ರಧಾ‌ನ ಗುರು   ಕುಪಿಚ್ ಅವರು, ಶಾಂತಿಯತ್ತ ಹಂಬಲಿಸುತ್ತಿರುವ ಇಂದಿನ ಜಗತ್ತಿನ ಹಿನ್ನೆಲೆಯಲ್ಲಿಯೇ ಸೇವೆ, ಜವಾಬ್ದಾರಿ ಮತ್ತು ಧಾರ್ಮಿಕ ಸೇವೆಯ ಅರ್ಥವನ್ನು ಆಳವಾಗಿ ಧ್ಯಾನಿಸಲು ಕರೆ ನೀಡಿದರು.

“ಇಂದು ಈ ಪವಿತ್ರ ತೈಲಗಳನ್ನು ಆಶೀರ್ವದಿಸುವಾಗ, ಅದನ್ನು ಸಂಪೂರ್ಣ ಸಭೆಯೊಂದಿಗೇ ಹಾಗೂ ಸಭೆಗಾಗಿ ನೆರವೇರಿಸುತ್ತೇವೆ,” ಎಂದು ಅವರು ಹೇಳಿದರು. ದೀಕ್ಷಿತರೆಲ್ಲರನ್ನು ದೇವರ ಯಾತ್ರಿಕ ಜನರಾಗಿ ಹೊಸ ಉತ್ಸಾಹದೊಂದಿಗೆ ಮುಂದುವರಿಯಲು ಶಕ್ತಿಗೊಳಿಸುವ ಸಾಮೂಹಿಕ ಕರೆಯಾಗಿದೆ ಇದು ಎಂದು ಅವರು ವಿವರಿಸಿದರು.

ಗುರುಗಳಿಗೆ ವಿಶೇಷವಾಗಿ, ಈ ದಿನವು ತಮ್ಮ ಕರೆಯನ್ನು ಪುನಃ ಜ್ಞಾಪಿಸುವ ಕ್ಷಣವಾಗಿದೆ ಎಂದು ಅವರು ಹೇಳಿದರು. “ದೇವರಾತ್ಮ ನನ್ನ ಮೇಲಿದೆದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದುಅವರೆನ್ನನು ಅಭಿಷೇಕಿಸಿದ್ದಾರೆ;ಬಂಧಿತರಿಗೆ ಬಿಡುಗಡೆಯನ್ನು,ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವಕಾಲ ಬಂತೆಂದು ಸಾರಲೂಅವರು ನನ್ನನ್ನು ಕಳುಹಿಸಿದ್ದಾರೆ” ಎಂಬ ಕ್ರಿಸ್ತನ ವಾಕ್ಯವನ್ನು ಅವರು ಸ್ಮರಿಸಿದರು.

ಈ ಸೇವೆ ಗಾಯಗೊಂಡಿರುವ ಜಗತ್ತಿನ ಮಧ್ಯೆ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಯುದ್ಧದ ಬಲಿಯಾಗಿರುವವರು — ನೆಲದಡಿಯಲ್ಲಿ ಅಥವಾ ಗಡಿಗಳ ಹಿಂದೆ ಸಿಲುಕಿರುವವರು — ಹಾಗೂ ರಾಷ್ಟ್ರೀಯತೆಯ ಮತ್ತು ‘ನಾವು–ಅವರು’ ಎಂಬ ವಿಭಜನೆಯ ಮನೋಭಾವದಿಂದ ಕುರುಡಾದವರು, ಇಂತಹ ಪರಿಸ್ಥಿತಿಗಳನ್ನು ಅವರು ಉಲ್ಲೇಖಿಸಿದರು.

ಈ ಹಿನ್ನೆಲೆಯಲ್ಲಿ, ಗುರುಗಳು “ಶಾಂತಿಯ ಸಂಸ್ಕಾರಗಳಾಗಿರಲು” ಕರೆಯಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು — ಪ್ರತೀಕಾರದ ತರ್ಕವನ್ನು ತಿರಸ್ಕರಿಸಿ, ಶಾಂತಿಯ ಪ್ರಭುವಾದ ಕ್ರಿಸ್ತನ ಸಾಕ್ಷಿಗಳಾಗುವ ಕರೆಯಿದು.

ಪೂಜ್ಯ ಜಗದ್ಗುರುಗಳ ಫ್ರಾನ್ಸಿಸ್ ಅವರ ಅವರ ಮಾತುಗಳನ್ನು ನೆನಪಿಸಿ, ಯೇಸು “ಯುದ್ಧವನ್ನು ತಿರಸ್ಕರಿಸುವ ಶಾಂತಿಯ ರಾಜನ; ಯಾರೂ ಅವನನ್ನು ಯುದ್ಧಕ್ಕೆ ನೆಪವನ್ನಾಗಿ ಬಳಸಕೂಡದು” ಎಂಬುದನ್ನು ಅವರು ಒತ್ತಿಹೇಳಿದರು. ಈ ಸಂದರ್ಭದಲ್ಲಿ, ಧಾರ್ಮಿಕ ಸೇವೆಯ ಸವಾಲು ಕೇವಲ ಧಾರ್ಮಿಕ ಮಟ್ಟದಲ್ಲೇ ಅಲ್ಲ, ಮಾನವೀಯ ಆಳದಲ್ಲಿಯೂ ಇದೆ — ಲೋಕದ ದುರುದ್ದೇಶಪೂರಿತ ಕಾರ್ಯಸೂಚಿಗಳು ಅಥವಾ ಪಕ್ಷಪಾತಗಳಿಂದ ರೂಪುಗೊಳ್ಳದ ಮಾತು ಮತ್ತು ನಡೆಗಳನ್ನು ಆಯ್ಕೆಮಾಡಬೇಕಿದೆ ಎಂದು ಅವರು ಹೇಳಿದರು.

ಬಲಿಪೂಜೆಯಲ್ಲಿ ಆಶೀರ್ವದಿಸಲ್ಪಟ್ಟ ಮೂರು ಪವಿತ್ರ ಎತೈಲಗಳ ಕುರಿತು ಚಿಂತನೆ ನಡೆಸಿದ ಅವರು, ರೋಗಿಗಳ ಎತೈಲ ಸಭೆಯನ್ನು ಸಮೀಪತೆಯತ್ತ ಕರೆಯುತ್ತದೆ — ಗಾಯಗೊಂಡವರ ಬಳಿಗೆ ನಿಲ್ಲುವ, ಒಡನಾಡಿಯಾಗುವ ಕರೆಯಾಗಿದೆ ಅದು ಎಂದು ಹೇಳಿದರು.

ದೀಕ್ಷಾಸ್ನಾನದ ಅಭ್ಯರ್ಥಿಗಳ ತೈಲ, ನಂಬಿಕೆಯ ಪ್ರಯಾಣವು ನಿಧಾನವಾಗಿ ಬೆಳೆಯುವ ಪಥವೆಂದು ನೆನಪಿಸುತ್ತದೆ; ಕೃಪೆ ತಕ್ಷಣವೇ ಹೊಮ್ಮುವುದಲ್ಲ, ಅದು ಒಳಗೆ ಶಾಂತವಾಗಿ ಹರಿದು ನೆಲೆಗೊಳ್ಳುತ್ತದೆ ಎಂದು ಅವರು ವಿವರಿಸಿದರು.

ಕೊನೆಗೆ, ಅಭ್ಯಂಗ ತೈಲವು ಆಂತರಿಕ ರೂಪಾಂತರವನ್ನು ಸೂಚಿಸುತ್ತದೆ. ನಿಜವಾದ ಶಾಂತಿ ಹೊರಗಿನಿಂದ ಹೇರಲ್ಪಡುವುದಲ್ಲ; ಅದು ಒಳಗಿನಿಂದ ಮೊಳೆಯುತ್ತದೆ — ಅದು ಆಧಿಪತ್ಯದ ವಿಷಯವಲ್ಲ, ಹೃದಯದ ಪರಿವರ್ತನೆಯ ಫಲವಾಗಿದೆ ಎಂದು ಅವರು ಹೇಳಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

01 ಏಪ್ರಿಲ್ 2026, 22:01