ತೆಹ್ರಾನ್ ಮೇಲೆ ಅಮೆರಿಕ-ಇಸ್ರಾಯೇಲ್ ನಡೆಸಿದ ದಾಳಿಯ ಸ್ಥಳದಿಂದ ಏಳುತ್ತಿರುವ ಹೊಗೆ (AFP ಅಥವಾ ಪರವಾನಗಿದಾರರು) ತೆಹ್ರಾನ್ ಮೇಲೆ ಅಮೆರಿಕ-ಇಸ್ರಾಯೇಲ್ ನಡೆಸಿದ ದಾಳಿಯ ಸ್ಥಳದಿಂದ ಏಳುತ್ತಿರುವ ಹೊಗೆ (AFP ಅಥವಾ ಪರವಾನಗಿದಾರರು)   (AFP or licensors)

ಅಮೆರಿಕಾ ಧರ್ಮಸಭೆಯ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಿಂದ ಟ್ರಂಪ್‌ಗೆ ಯುದ್ದದಿಂದ ಹಿಂದೆ ಸರಿಯಲು ಮನವಿ

ಅಮೆರಿಕಾ ಧರ್ಮಸಭೆಯ ಧರ್ಮಾಧ್ಯಕ್ಷರ ಮಂಡಳಿಯ (USCCB) ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರು ಪಾಲ್ ಎಸ್. ಕೋಕ್ಲಿ ಅವರು, ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರಿಗೆ ಯುದ್ದದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.

ವ್ಯಾಟಿಕನ್ ವರದಿ

ಪರ್ಶಿಯನ್ ಕೊಲ್ಲಿ ಮತ್ತು ಓಮಾನ್ ಕೊಲ್ಲಿಯ ನಡುವಿನ ಪ್ರಮುಖ ಜಲಮಾರ್ಗವನ್ನು ಪುನಃ ತೆರೆಯಲು ಇರಾನ್ ಒಪ್ಪದಿದ್ದರೆ, “ಇರಾನ್‌ನ ಸಂಪೂರ್ಣ ನಾಗರಿಕತೆಯನ್ನು ನಾಶಮಾಡುವ” ಬೆದರಿಕೆಯನ್ನು ಟ್ರಂಪ್ ನೀಡಿರುವ ಹಿನ್ನೆಲೆ ಈ ಮನವಿ ಹೊರಬಂದಿದೆ.

“ಯುದ್ಧದ ಅಂಚಿನಿಂದ ಹಿಂದೆ ಸರಿದು, ಇನ್ನಷ್ಟು ಜೀವಗಳು ಕಳೆದುಕೊಳ್ಳುವ ಮೊದಲು ನ್ಯಾಯಸಮ್ಮತ ಪರಿಹಾರಕ್ಕಾಗಿ ಮಾತುಕತೆ ನಡೆಸಬೇಕು,” ಎಂದು ಮಹಾಧರ್ಮಾಧ್ಯಕ್ಷರು ಪಾಲ್ ಎಸ್. ಕೋಕ್ಲಿ ಹೇಳಿದರು. ಏಪ್ರಿಲ್ 7ರಂದು ಪ್ರಕಟಿಸಿದ ಪ್ರಕಟಣೆಯಲ್ಲಿ, ಇರಾನ್ ಒಪ್ಪಂದಕ್ಕೆ ಬರದಿದ್ದರೆ ಸಂಪೂರ್ಣ ದಾಳಿ ನಡೆಸುವ ಟ್ರಂಪ್ ಅವರ ಬೆದರಿಕೆಯನ್ನು ಅವರು ಖಂಡಿಸಿದರು.

ಹೊರ್ಮುಜ್ ಜಲಸಂಧಿ ಜಾಗತಿಕ ಸಾಗಣೆಗಾಗಿ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಸೇನಾ ದಾಳಿಗಳು ಹೆಚ್ಚಾಗುವ ಭೀತಿ—ವಿಶೇಷವಾಗಿ ಇರಾನ್‌ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಸಾಧ್ಯತೆ—ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಹಾಧರ್ಮಾಧ್ಯಕ್ಷರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಪವಿತ್ರ ವಾರ ಮತ್ತು ಪುನರುತ್ಥಾನ ಮಹೋತ್ಸವದ ಸಂದರ್ಭದಲ್ಲಿ ನೀಡಿದ ಶಾಂತಿಯ ಕರೆಗೆ ಗಮನ ಸೆಳೆದರು.

ಅವರು ಏಪ್ರಿಲ್ 11ರಂದು ನಡೆಯುವ ಶಾಂತಿಗಾಗಿ ಜಾಗರಣ ಬಲಿಪೂಜೆಗೆ ಎಲ್ಲರನ್ನು ಆಹ್ವಾನಿಸಿದರು. “ನನ್ನ ಸಹ ಧರ್ಮಾಧ್ಯಕ್ಷರು, ಗುರುಗಳು, ವಿಶ್ವಾಸಿಗಳು ಮತ್ತು ನಿಜವಾದ ಶಾಂತಿಯನ್ನು ಬಯಸುವ ಎಲ್ಲರೂ—ಧರ್ಮಕೇಂದ್ರಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಅಥವಾ ತಮ್ಮ ಹೃದಯದ ಮೌನದಲ್ಲಿ ಪ್ರಭುವಿನ ಸನ್ನಿಧಿಯಲ್ಲಿ—ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ಒಂದಾಗಿ ಶಾಂತಿಗಾಗಿ ಪ್ರಾರ್ಥಿಸಬೇಕು,” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

07 ಏಪ್ರಿಲ್ 2026, 01:31