ಪ್ರಧಾನ ದೇವಾಲಯದ ಮೇಲೆ ದಾಳಿಯ ಸುದ್ದಿಯನ್ನು ನಿರಾಕರಿಸಿದ ನೈಜೀರಿಯಾದ ಸೊಕೊಟಾ ಧರ್ಮಪ್ರಾಂತ್ಯ
ವ್ಯಾಟಿಕನ್ ವರದಿ
ಈ ಪ್ರಕಟಣೆಗೆ ಸಂವಹನ ನಿರ್ದೇಶಕರಾದ ವಂ. ಗುರು ಪಾಸ್ಕಲ್ ಸಲಿಫು ಸಹಿ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ವಿಡಿಯೋ ಕುರಿತು ಸ್ಪಷ್ಟನೆ ನೀಡಲಾಗಿದೆ. ಪ್ರಕಟಣೆಯ ಪ್ರಕಾರ, ಧರ್ಮಪ್ರಾಂತ್ಯದ ಎಲ್ಲಾ ಸೌಕರ್ಯಗಳು ಸುರಕ್ಷಿತವಾಗಿದ್ದು, ಯಾವುದೇ ಹಾನಿಯೂ ಸಂಭವಿಸಿಲ್ಲ ಮತ್ತು ಅವುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಧರ್ಮಸಭೆ ತಿಳಿಸಿದೆ.
ನೈಜೀರಿಯಾದ ಧರ್ಮಸಭೆ, ತಪ್ಪುಮಾಹಿತಿಯನ್ನು ದೇಶವನ್ನು ವಿಭಜಿಸಲು ಉಪಯೋಗಿಸಲಾಗುತ್ತಿದೆ ಎಂಬುದನ್ನು ಪುನಃ ಪುನಃ ಎಚ್ಚರಿಸಿದೆ. ಆದ್ದರಿಂದ, ಕೋಪ ಮತ್ತು ನಿಯಂತ್ರಣವಿಲ್ಲದ ಹಿಂಸೆಯನ್ನು ಉಂಟುಮಾಡಬಹುದಾದ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಪ್ಪಿಸಲು, ಪ್ರತಿಯೊಬ್ಬ ವಿಶ್ವಾಸಿಯೂ ಸುದ್ದಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸುಳ್ಳು ಸುದ್ದಿಯ ಹಿನ್ನೆಲೆಗಾಗಿ, ಕಳೆದ ಗರಿಗಳ ಭಾನುವಾರದಂದು ಜೋಸ್ ನಗರದಲ್ಲಿ ನಡೆದ ನಿಜವಾದ ದಾಳಿ ಘಟನೆಯನ್ನು ಉಲ್ಲೇಖಿಸಲಾಗಿದೆ. ಸೊಕೊಟೊದಿಂದ ದೂರದಲ್ಲಿರುವ ಆ ನಗರದಲ್ಲಿ 27 ಮಂದಿ ಸಾವನ್ನಪ್ಪಿದ್ದರು.
ಏಪ್ರಿಲ್ 4ರಂದು ಪ್ರಕಟವಾದ ಸಂದರ್ಶನದಲ್ಲಿ, ಸೊಕೊಟೊ ಧರ್ಮಾಧ್ಯಕ್ಷರು ಮ್ಯಾಥ್ಯೂ ಹಸನ್ ಕುಕಾ ಅವರು, ದೇಶದಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರದ ನಡುವೆಯೂ ಭರವಸೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಅವರು ದಾಳಿಗಳನ್ನು ಖಂಡಿಸಿ, ಜನರು ಭಯಕ್ಕೆ ಒಳಗಾಗದೆ ಪ್ರಭುವಿನಲ್ಲಿ ಭರವಸೆ ಇಟ್ಟು ಸ್ಥಿರವಾಗಿ ನಿಲ್ಲಬೇಕು ಎಂದು ಪ್ರೇರೇಪಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).