2024ರ ಡಿಸೆಂಬರಿನಲ್ಲಿ ಡೆರ್ಡ್ಘಾಯಾದ ಮೆಲ್ಕೈಟ್ ದೇವಾಲಯದಲ್ಲಿ ಅವಶೇಷಗಳ ನಡುವೆ ವ್ಯಕ್ತಿಯೋರ್ವರು ಕ್ರಿಸ್ಮಸ್ ಮರವನ್ನು ಶೃಂಗರಿಸುತ್ತಿರುವ ದೃಶ್ಯ 2024ರ ಡಿಸೆಂಬರಿನಲ್ಲಿ ಡೆರ್ಡ್ಘಾಯಾದ ಮೆಲ್ಕೈಟ್ ದೇವಾಲಯದಲ್ಲಿ ಅವಶೇಷಗಳ ನಡುವೆ ವ್ಯಕ್ತಿಯೋರ್ವರು ಕ್ರಿಸ್ಮಸ್ ಮರವನ್ನು ಶೃಂಗರಿಸುತ್ತಿರುವ ದೃಶ್ಯ  (AFP or licensors)

ದಕ್ಷಿಣ ಲೆಬನಾನ್‌ನಲ್ಲಿ ದಾಳಿಗೆ ಒಳಗಾಗುತ್ತಿರುವ ಕ್ರೈಸ್ತ ದೇವಾಲಯಗಳು

ಲೌವ್ರೆ ಡಿ ಓರಿಯಂಟ್ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ವಾರದ ಪೂರ್ವದ ಧರ್ಮಸಭೆಗಳ ಸುದ್ದಿಯಲ್ಲಿ, ದಕ್ಷಿಣ ಲೆಬನಾನ್‌ನ ಕ್ರೈಸ್ತ ಸಮುದಾಯಗಳ ಮೇಲಿನ ದಾಳಿಗಳ ಕುರಿತು ಗಮನ ಹರಿಸಲಾಗಿದೆ.

ಕಳೆದ ಶುಕ್ರವಾರ ಲೆಬನಾನ್‌ನಲ್ಲಿ, ಸಾಲ್ವಟೋರಿಯನ್ ಸಹೋದರಿಯರ ಮಠ ಮತ್ತು ಹಿಂದಿನ ಶಾಲೆಯನ್ನು ಇಸ್ರಾಯೇಲ್ ಸೈನ್ಯ ಧ್ವಂಸಗೊಳಿಸಿತು. ಇದು ಪ್ರತ್ಯೇಕ ಘಟನೆ ಅಲ್ಲ. 2024ರಲ್ಲಿ ಲೆಬನಾನ್ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರಿರುವ ಯಾರೌನ್ ಮತ್ತು ಡೆರ್ಡ್ಘಾಯಾದ ಮೆಲ್ಕೈಟ್ ಕ್ರೈಸ್ತ ದೇವಾಲಯಗಳೂ ಧ್ವಂಸಗೊಂಡಿದ್ದವು.

ಹೆಜ್ಬೊಲ್ಲಾ ಮತ್ತು ಇಸ್ರಾಯೇಲ್ ಸೈನ್ಯದ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ, ಕ್ವಾಝಾ ಮತ್ತು ಆಲ್ಮಾ ಎಲ್ ಷಾಅಬ್ ಸೇರಿದಂತೆ ಕೆಲವು ಕ್ರೈಸ್ತ ಗ್ರಾಮಗಳು ಸಂಪೂರ್ಣವಾಗಿ ನೆಲಸಮಗೊಂಡು, ನಿವಾಸಿಗಳಿಲ್ಲದಂತಾಗಿವೆ. ಅನೇಕ ಲೆಬನಾನ್ ನಾಗರಿಕರ ಪ್ರಕಾರ, ಇಸ್ರಾಯೇಲಿನ ಉದ್ದೇಶ ಜನರು ಮತ್ತೆ ತಮ್ಮ ಗ್ರಾಮಗಳಿಗೆ ಮರಳದಂತೆ ಮಾಡುವುದೇ ಆಗಿದೆ.

ಇತ್ತೀಚೆಗೆ ಲೆಬನಾನ್‌ನ ಮೆಲ್ಕೈಟ್ ಗ್ರೀಕ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ, “ದೇವಾಲಯಗಳು, ಶಾಲೆಗಳು ಮತ್ತು ಮನೆಗಳು ಕೇವಲ ಕಲ್ಲುಗಳಲ್ಲ. ಈ ಸ್ಥಳಗಳ ಮೇಲೆ ದಾಳಿ ನಡೆಸುವುದು ಮಾನವ ಗೌರವದ ಮೇಲೆಯೇ ದಾಳಿ ನಡೆಸಿದಂತಾಗಿದೆ” ಎಂದು ಎಚ್ಚರಿಸಿದೆ.

ಈ ಗ್ರಾಮಗಳು ಮೌನವಾಗಿ ಮರೆತುಹೋಗದಂತೆ ನಾಗರಿಕರು, ಅವರ ಆಸ್ತಿಪಾಸ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸಲು ಲೆಬನಾನ್ ಸರ್ಕಾರ, ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕೆಂದು ಮಂಡಳಿ ಕರೆ ನೀಡಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

08 ಮೇ 2026, 17:24