ಅರ್ಜೆಂಟೀನಾ ಅಧ್ಯಕ್ಷ ಹಾವೇರ್ ಮಿಲೆಯ್ ಅವರನ್ನು ಭೇಟಿ ಮಾಡಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನಲ್ಲಿ ಇಂದು ಅರ್ಜೆಂಟೀನಾ ದೇಶದ ಅಧ್ಯಕ್ಷ ಹಾವೇರ್ ಮಿಲೆಯ್ ಅವರನ್ನು ಭೇಟಿ ಮಾಡಿದ್ದು, ಶಾಂತಿ ಸ್ಥಾಪನೆಗಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಚರ್ಚಿಸಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್

ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನಲ್ಲಿ ಇಂದು ಅರ್ಜೆಂಟೀನಾ ದೇಶದ ಅಧ್ಯಕ್ಷ ಹಾವೇರ್ ಮಿಲೆಯ್ ಅವರನ್ನು ಭೇಟಿ ಮಾಡಿದ್ದು, ಶಾಂತಿ ಸ್ಥಾಪನೆಗಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಚರ್ಚಿಸಿದ್ದಾರೆ.

ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಅಧ್ಯಕ್ಷ ಹಾವೇರ್ ಮಿಲಿ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಹಾಗೂ ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿರುವ ಮೊನ್ಸಿಜ್ಞೊರ್ ಮಿರೋಸ್ಲಾವ್ ವಾಚೋವ್ಸ್ಕಿ ಅವರನ್ನು ಭೇಟಿ ಮಾಡಿದರು.

ವ್ಯಾಟಿಕನ್ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ಪಕ್ಷಗಳ ಮಾತುಕತೆಗಳು ಸೌಹಾರ್ದಯುತವಾಗಿದ್ದು, ಫಲಪ್ರದಾಯಕವಾಗಿದ್ದವು. ವ್ಯಾಟಿಕನ್ ಹಾಗೂ ಆರ್ಜೆಂಟೀನಾ ನಡುವಿನ ಉತ್ತಮ ಸಂಬಂಧದ ಕುರಿತು ಚರ್ಚೆಗಳು ನಡೆದು, ಆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂಬ ಅನಿಸಿಕೆ ಉಭಯ ನಾಯಕರು ವ್ಯಕ್ತಪಡಿಸಿದರು.

"ಬಡತನ ವಿರುದ್ಧ ಹಾಗೂ ಪ್ರಸ್ತುತ ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಸಹ ಮಾತುಕತೆಗಳು ನಡೆದವು" ಎಂದು ವ್ಯಾಟಿಕನ್ ಪತ್ರಿಕಾ ಹೇಳಿಕೆಯು ತಿಳಿಸಿದೆ.

ಡಿಸೆಂಬರ್ 10, 2023 ರಂದು ಹಾವೇರ್ ಮಿಲೆಯ್ ಅವರು ಅರ್ಜೆಂಟೀನಾ ದೇಶದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪೋಪ್ ಫ್ರಾನ್ಸಿಸ್ ಇವರನ್ನು ಹಲವು ಬಾರಿ ಭೇಟಿ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

07 ಜೂನ್ 2025, 17:22