ಅಮೇರಿಕಾ ಕಥೋಲಿಕರೊಂದಿಗೆ ಡಿಜಿಟಲ್ ಸಂವಾದವನ್ನು ನಡೆಸಲಿರುವ ಪೋಪ್

ಅಮೇರಿಕದಾದ್ಯಂತ ಕಥೋಲಿಕ ಯುವಜನರು ನ್ಯಾಷನಲ್ ಕ್ಯಾಥೊಲಿಕ್ ಯೂಥ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ, ಇವರೊಂದಿಗೆ ಪೋಪ್ ಲಿಯೋ ಅವರು ಇದೇ ಮೊದಲ ಬಾರಿಗೆ ಡಿಜಿಟಲ್ ಸಂವಾದವನ್ನು ನಡೆಸಲಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಪೋಪರು ಯುವಜನತೆಯೊಂದಿಗೆ ಸಂವಾದಿಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಈ ಮಾಹಿತಿಯನ್ನು ವ್ಯಾಟಿಕನ್ನಿನ ಮಾಧ್ಯಮ ಕಚೇರಿ ಹಾಗೂ ನ್ಯಾಷನಲ್ ಫೆಡರೇಶನ್ ಫಾರ್ ಕ್ಯಾಥೊಲಿಕ್ ಯೂಥ್ ಮಿನಿಸ್ಟ್ರಿ ಸ್ವರ್ಗಸ್ವೀಕೃತಮಾತೆಯ ಹಬ್ಬದಂದು ಪ್ರಕಟಿಸಿದೆ. ಇದು ಪೋಪ್ ಹದಿನಾಲ್ಕನೇ ಲಿಯೋ ಅವರು ಮೊಟ್ಟ ಮೊದಲ ಉಪಕ್ರಮವಾಗಿದೆ.

ಈ ಸಂವಾದಲ್ಲಿ ಪೋಪ್ ಲಿಯೋ ಅವರು ವಿಶ್ವಾಸದ ಕುರಿತು ಮಾತನಾಡಲಿದ್ದು, ಯುಜನರ ಪ್ರಶ್ನೆಗಳು, ಗೊಂದಲಗಳು ಹಾಗೂ ಇನ್ನು ಅನೇಕ ಭಾವನೆಗಳಿಗೆ ಕಿವಿಗೊಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯು ತಿಳಿಸಿದೆ. ಅನೇಕ ಯುವ ನಾಯಕರನ್ನು ಪೋಪರ ಜೊತೆಗೆ ಸಂವಾದಿಸುವುದಕ್ಕೆ ಆರಿಸಿಕೊಳ್ಳಲಾಗಿದೆ.

ನ್ಯಾಷನಲ್ ಕ್ಯಾಥೊಲಿಕ್ ಯೂಥ್ ಕಾನ್ಫರೆನ್ಸ್ ನಲ್ಲಿ ಸಾವಿರಾರು ಯುವ ಜನತೆ, ಗುರುಗಳು ಹಾಗೂ ಧಾರ್ಮಿಕ ವ್ಯಕ್ತಿಗಳು ಭಾಗವಹಿಸಲಿದ್ದು, ಇದು ಅಮೇರಿಕಾ ಇತಿಹಾಸದಲ್ಲೇ ಒಂದು ಅನನ್ಯ ಕಥೋಲಿಕ ಸಮ್ಮೇಳನವಾಗಲಿದೆ ಎಂದು ಹೇಳಲಾಗಿದೆ.

16 ಆಗಸ್ಟ್ 2025, 14:37