ಶಾಂತಿಗಾಗಿ ಉಪವಾಸ ಮತ್ತು ಪ್ರಾರ್ಥನೆಯ ದಿನವನ್ನು ಆಚರಿಸುವಂತೆ ಪೋಪ್ ಕರೆ

ಪೋಪ್ ಲಿಯೋ XIV ಅವರು ಆಗಸ್ಟ್ 22 ರಂದು ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸದಲ್ಲಿ ಒಂದಾಗಲು ವಿಶ್ವಾಸಿಗಳನ್ನು ಆಹ್ವಾನಿಸುತ್ತಾರೆ ಮತ್ತು ಸಶಸ್ತ್ರ ಸಂಘರ್ಷದಿಂದ ಛಿದ್ರಗೊಂಡ ಎಲ್ಲಾ ಸ್ಥಳಗಳಲ್ಲಿ "ನಿರಾಯುಧ ಮತ್ತು ನಿಶ್ಯಸ್ತ್ರ ಶಾಂತಿ" ಗಾಗಿ ಕರೆ ನೀಡುತ್ತಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಆಗಸ್ಟ್ 22 ರಂದು ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸದಲ್ಲಿ ಒಂದಾಗಲು ವಿಶ್ವಾಸಿಗಳನ್ನು ಆಹ್ವಾನಿಸುತ್ತಾರೆ ಮತ್ತು ಸಶಸ್ತ್ರ ಸಂಘರ್ಷದಿಂದ ಛಿದ್ರಗೊಂಡ ಎಲ್ಲಾ ಸ್ಥಳಗಳಲ್ಲಿ "ನಿರಾಯುಧ ಮತ್ತು ನಿಶ್ಯಸ್ತ್ರ ಶಾಂತಿ" ಗಾಗಿ ಕರೆ ನೀಡುತ್ತಾರೆ.

ತಮ್ಮ ಸಾರ್ವಜನಿಕ ಭೇಟಿಗಾಗಿ ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಪೋಪ್ ಲಿಯೋ XIV ಅವರು ಮತ್ತೊಮ್ಮೆ ವಿಶ್ವದ ಅನೇಕ ಸಂಘರ್ಷ ವಲಯಗಳ ಕಡೆಗೆ ತಮ್ಮ ಆಲೋಚನೆಗಳನ್ನು ತಿರುಗಿಸಿದರು.

ಆಗಸ್ಟ್ 22, ಶುಕ್ರವಾರದಂದು ಆಚರಿಸಲಾಗುವ ಪೂಜ್ಯ ಕನ್ಯಾಮಾತೆ ಮರಿಯಮ್ಮನವರ ಮುಂಬರುವ ಪ್ರಾರ್ಥನಾ ಸ್ಮರಣೆಯನ್ನು ನೆನಪಿಸಿಕೊಳ್ಳುತ್ತಾ, ಪೋಪ್ ಭಕ್ತಾಧಿಗಳನ್ನು ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸದ ಮೂಲಕ ಆಚರಿಸಲು ಆಹ್ವಾನಿಸಿದರು.

"ಮಾತೆ ಮರಿಯ ಭೂಮಿಯ ಮೇಲಿನ ನಂಬಿಗಸ್ತರ ತಾಯಿ ಮತ್ತು ಶಾಂತಿಯ ರಾಣಿ" ಎಂದು ಪೋಪ್ ಹೇಳಿದರು.

ಪವಿತ್ರ ಭೂಮಿಯಲ್ಲಿ, ಉಕ್ರೇನ್‌ನಲ್ಲಿ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ನಮ್ಮ ಜಗತ್ತು ಯುದ್ಧಗಳಿಂದ ಗಾಯಗೊಂಡು ನರಳುತ್ತಿರುವಾಗ, ಪೋಪ್ ಎಲ್ಲಾ ವಿಶ್ವಾಸಿಗಳನ್ನು ಯುದ್ಧದಿಂದ ಬಳಲುತ್ತಿರುವ ಎಲ್ಲರಿಗಾಗಿ "ಪ್ರಾರ್ಥನೆ ಮತ್ತು ಉಪವಾಸದ ದಿನ" ದಲ್ಲಿ ಭಾಗವಹಿಸಲು ಆಹ್ವಾನಿಸಿದರು, "ನಮಗೆ ಶಾಂತಿ ಮತ್ತು ನ್ಯಾಯವನ್ನು ನೀಡುವಂತೆ ಮತ್ತು ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳಿಂದ ಬಳಲುತ್ತಿರುವವರ ಕಣ್ಣೀರನ್ನು ಒರೆಸುವಂತೆ ಭಗವಂತನನ್ನು ಬೇಡಿಕೊಂಡರು."

"ಶಾಂತಿಯ ರಾಣಿ ಮರಿಯ, ಜನರು ಶಾಂತಿಯ ಮಾರ್ಗವನ್ನು ಕಂಡುಕೊಳ್ಳುವಂತೆ ಮಧ್ಯಸ್ಥಿಕೆ ವಹಿಸಲಿ" ಎಂದು ಅವರು ಹೇಳಿದರು.

20 ಆಗಸ್ಟ್ 2025, 16:56