ಭಾರತ, ಪಾಕಿಸ್ತಾನ ಮತ್ತು ನೇಪಾಳದ ನೆರೆಸಂತ್ರಸ್ಥರಿಗೆ ಪ್ರಾರ್ಥಿಸಿದ ಪೋಪ್

ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ ತ್ರಿಕಾಲ ಪ್ರಾರ್ಥನೆಯ ನಂತರ, ಪಾಕಿಸ್ತಾನ, ನೇಪಾಳ ಮತ್ತು ಭಾರತ ಆಡಳಿತದಲ್ಲಿರುವ ಕಾಶ್ಮೀರದಲ್ಲಿ ಹಠಾತ್ ಪ್ರವಾಹದಿಂದ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಪೋಪ್ ಲಿಯೋ ಸಂತ್ರಸ್ಥರು ಮತ್ತು ಅವರ ಕುಟುಂಬಗಳನ್ನು ಸ್ಮರಿಸುತ್ತಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ಫ್ರೀಡಂ ಸ್ಕ್ವೇರ್‌ನಲ್ಲಿ (ಪಿಯಾಝಾ ಡೆಲ್ಲಾ ಲಿಬರ್ಟಾ) ತ್ರಿಕಾಲ ಪ್ರಾರ್ಥನೆ ಮಾಡಿದ ನಂತರ, ಪೋಪ್ ಲಿಯೋ ತೀವ್ರ ಪ್ರವಾಹದಿಂದ ಹಾನಿಗೊಳಗಾದ ಪಾಕಿಸ್ತಾನ, ಭಾರತ ಮತ್ತು ನೇಪಾಳದ ಜನರಿಗೆ ತಮ್ಮ ನಿಕಟತೆಯನ್ನು ವ್ಯಕ್ತಪಡಿಸಿದರು.

"ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ಮತ್ತು ಈ ವಿಪತ್ತಿನ ಪರಿಣಾಮವಾಗಿ ಬಳಲುತ್ತಿರುವ ಎಲ್ಲರಿಗಾಗಿ" ಪೋಪ್ ತಮ್ಮ ಪ್ರಾರ್ಥನೆಗಳನ್ನು ಹಂಚಿಕೊಂಡರು. ವಾಯುವ್ಯ ಪಾಕಿಸ್ತಾನ, ಭಾರತ ಆಡಳಿತದಲ್ಲಿರುವ ಕಾಶ್ಮೀರ ಮತ್ತು ನೇಪಾಳದಲ್ಲಿ ಎರಡು ದಿನಗಳ ಧಾರಾಕಾರ ಮಳೆ ಮತ್ತು ಹಠಾತ್ ಪ್ರವಾಹದ ನಂತರ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

17 ಆಗಸ್ಟ್ 2025, 15:37