ಪೋಪರ ಬುಧವಾರದ ಸಾರ್ವಜನಿಕ ಭೇಟಿ ಬಿಸಿಲಿನ ಕಾರಣ ಒಳಾಂಗಣದಲ್ಲಿ ನಡೆಯಲಿದೆ
ರೋಮನ್ ಬಿಸಿಲಿನ ತೀವ್ರತೆಯಿಂದಾಗಿ, ಆಗಸ್ಟ್ 13, ಬುಧವಾರದಂದು ಪೋಪ್ ಲಿಯೋ XIV ಅವರ ಸಾರ್ವಜನಿಕ ಸಭೆಯು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನಡೆಯಲಿದೆ.
ವರದಿ: ವ್ಯಾಟಿಕನ್ ನ್ಯೂಸ್
ರೋಮನ್ ಬಿಸಿಲಿನ ತೀವ್ರತೆಯಿಂದಾಗಿ, ಆಗಸ್ಟ್ 13, ಬುಧವಾರದಂದು ಪೋಪ್ ಲಿಯೋ XIV ಅವರ ಸಾರ್ವಜನಿಕ ಸಭೆಯು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನಡೆಯಲಿದೆ.
ಈ ವಾರ ಪೋಪ್ ಅವರ ಸಾಮಾನ್ಯ ಸಭೆಯು ಸಾರ್ವಜನಿಕ ಸಭೆಯು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನಡೆಯಲಿದೆ. ಎಂದು ಪವಿತ್ರ ಪೀಠದ ಪತ್ರಿಕಾ ಕಚೇರಿ ಸೋಮವಾರ ಮಧ್ಯಾಹ್ನ ಪ್ರಕಟಿಸಿತು.
"ಹೆಚ್ಚಿನ ತಾಪಮಾನದ ಮುನ್ಸೂಚನೆಯಿಂದಾಗಿ, ಆಗಸ್ಟ್ 13 ರ ಬುಧವಾರದಂದು ಸಾರ್ವಜನಿಕ ಸಭೆಯನ್ನು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನಡೆಸಲಾಗುವುದು" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹೊರಗಿನಿಂದ ನೋಡುವವರಿಗೆ ಎಲ್'ಇಡಿ ಪರದೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದೂ ಸಹ ಪ್ರಕಟಣೆ ತಿಳಿಸಿದೆ.
12 ಆಗಸ್ಟ್ 2025, 16:12