ಮರಿಯನ್ ಜ್ಯುಬಿಲಿ ಬಲಿಪೂಜೆಯಲ್ಲಿ ಪೋಪ್: ಮಾತೆ ಮರಿಯ ನಮ್ಮೆಲ್ಲರನ್ನು ಆಕೆಯ ಪುತ್ರನೆಡೆಗೆ ಕರೆದೊಯ್ಯಲಿ
ವರದಿ: ವ್ಯಾಟಿಕನ್ ನ್ಯೂಸ್
ಮಾತೆ ಮರಿಯಮ್ಮನವರ ಆಧ್ಯಾತ್ಮಿಕ ಭಕ್ತಿ ಆಚರಣೆಯ ಜ್ಯೂಬಿಲಿಯ ಬಲಿಪೂಜೆಯನ್ನು ಪೋಪ್ ಲಿಯೋ ಅವರು ಇಂದು ವ್ಯಾಟಿಕನ್ ನಗರದಲ್ಲಿ ಅರ್ಪಿಸಿದ್ದಾರೆ. ಯೇಸು ಕ್ರಿಸ್ತರನ್ನು ಹೇಗೆ ಹಿಂಬಾಲಿಸಬೇಕೆಂದು ಮಾತೆ ಮರಿಯಮ್ಮನವರನ್ನು ನೋಡಿ ನಾವೆಲ್ಲರೂ ಕಲಿತುಕೊಳ್ಳಬೇಕೆಂದು ಅವರು ಭಕ್ತಾಧಿಗಳಿಗೆ ಕರೆ ನೀಡಿದರು.
ಮಾತೆ ಮರಿಯಮ್ಮನವರ ಭಕ್ತಿ ಆಚರಣೆಯು ನಮ್ಮಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೆ ಏಸುಕ್ರಿಸ್ತರನ್ನು ನಮ್ಮಲ್ಲಿ ಕೇಂದ್ರಬಿಂದುವಾಗಿಸುತ್ತದೆ ಎಂದು ವಿಶ್ವಗುರು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಮಾತೆ ಮರಿಯಮ್ಮನವರ ಭಕ್ತಿ ಆಚರಣೆಯು ಶುಭ ಸಂದೇಶದ ಗುರಿಯನ್ನು ತಲುಪುವುದಾಗಿದೆ ಹಾಗೂ ಶುಭ ಸಂದೇಶವನ್ನು ನಾವು ಮತ್ತಷ್ಟು ವಿಶ್ವಾಸದ ಮೂಲಕ ಹಿಂಬಾಲಿಸುವಂತೆ ನಮಗೆ ಪ್ರೇರಣೆಯನ್ನು ನೀಡುತ್ತದೆ. ಇದು ನಮಗೆ ಸರಳತೆಯನ್ನು ಕಲಿಸುತ್ತದೆ ಎಂದು ವಿಶ್ವಗುರುಗಳು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಮಾತೆ ಮರಿಯಮ್ಮನವರು ಏಸುಕ್ರಿಸ್ತರನ್ನು ಹೇಗೆ ನಾವು ಆಪ್ತತೆಯಿಂದ ಹಿಂಬಾಲಿಸಬೇಕು ಎಂಬುದನ್ನು ನಮಗೆ ಕಲಿಸುತ್ತಾರೆ ಹಾಗೂ ದೇವರ ಚಿತ್ತಕ್ಕೆ ಸದಾ ಹೌದು ಎಂಬುದನ್ನು ಹೇಳಲು ನಮಗೆ ಕಲಿಸುತ್ತಾರೆ ಎಂದು ವಿಶ್ವಗುರು ಹೇಳಿದ್ದಾರೆ.
