ಹಂಗೇರಿ ಪ್ರಧಾನಿಯನ್ನು ಭೇಟಿ ಮಾಡಿದ ಪೋಪ್ ಲಿಯೋ XIV

ಪೋಪ್ ಲಿಯೋ XIV ಅವರು ಹಂಗೇರಿ ಪ್ರಧಾನಮಂತ್ರಿ ವಿಕ್ಟರ್ ಓರ್ಬಾನ್ ಅವರನ್ನು ಇಂದು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಹಂಗೇರಿ ಪ್ರಧಾನಮಂತ್ರಿ ವಿಕ್ಟರ್ ಓರ್ಬಾನ್ ಅವರನ್ನು ಇಂದು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ತದನಂತರ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರನ್ನು ಹಾಗೂ ವಿದೇಶಾಂಗ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉಭಯ ಪಕ್ಷಗಳು ಪವಿತ್ರ ಪೀಠ ಹಾಗೂ ಹಂಗೇರಿ ನಡುವಿನ ಸಂಪರ್ಕ ಹಾಗೂ ಸಂಬಂಧಗಳ ಕುರಿತು ಮಾತುಕತೆಯನ್ನು ನಡೆಸಿದರು. ಪ್ರಗತಿಗಾಗಿ ಮತ್ತಷ್ಟು ರೀತಿಯಲ್ಲಿ ಹೇಗೆ ಮುಂದುವರೆಯಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗಳಾದವು. ಚರ್ಚೆಗಳು ಫಲಪ್ರದವಾಗಿತ್ತು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

27 ಅಕ್ಟೋಬರ್ 2025, 16:30