ಲಿಥುಯೇನಿಯಾದ ಅಧ್ಯಕ್ಷರನ್ನು ಸ್ವಾಗತಿಸಿದ ಪೋಪ್ ಲಿಯೋ XIV

ಪೋಪ್ ಲಿಯೋ XIV ಅವರು ಲಿಥುಯೇನಿಯಾದ ಅಧ್ಯಕ್ಷರಾದ ಗಿಟನಾಸ್ ನಾಸೀಡ ಅವರನ್ನು ವ್ಯಾಟಿಕನ್'ಗೆ ಬರಮಾಡಿಕೊಂಡು ಮಾತುಕತೆಯನ್ನು ನಡೆಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಲಿಥುಯೇನಿಯಾದ ಅಧ್ಯಕ್ಷರಾದ ಗಿಟನಾಸ್ ನಾಸೀಡ ಅವರನ್ನು ವ್ಯಾಟಿಕನ್'ಗೆ ಬರಮಾಡಿಕೊಂಡು ಮಾತುಕತೆಯನ್ನು ನಡೆಸಿದ್ದಾರೆ. ತದ ನಂತರ ಲಿಥುಯೇನಿಯಾದ ಅಧ್ಯಕ್ಷರಾದ ಗಿಟನಾಸ್ ನಾಸೀಡ  ಅವರು ವ್ಯಾಟಿಕನ್ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಾರ ವ್ಯಾಟಿಕನ್ ಹಾಗೂ ಲಿಥುಯೇನಿಯ ನಡುವಿನ ಉತ್ತಮ ಸಂಬಂಧಗಳ ಕುರಿತು ಉಭಯಪಕ್ಷಗಳು ಸಂತೋಷವನ್ನು ವ್ಯಕ್ತಪಡಿಸಿದವು ಎಂದು ವರದಿಯಾಗಿದೆ.

ಉಕ್ರೇನ್‌ನಲ್ಲಿನ ಯುದ್ಧ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅವರು ಮಾತನಾಡಿದರು, "ರಾಜತಾಂತ್ರಿಕ ಪರಿಹಾರಗಳ ಹುಡುಕಾಟವನ್ನು ತೀವ್ರಗೊಳಿಸುವ ಮತ್ತು ಅನಿರೀಕ್ಷಿತ ಮತ್ತು ಭೀಕರ ಪರಿಣಾಮಗಳನ್ನು ಉಂಟುಮಾಡಬಹುದಾದ ಸಂಘರ್ಷದ ಉಲ್ಬಣಗೊಳ್ಳುವಿಕೆಯ ಅಪಾಯವನ್ನು ತಪ್ಪಿಸುವ ಅಗತ್ಯವನ್ನು ಎತ್ತಿ ತೋರಿಸಿದರು." ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

06 ಅಕ್ಟೋಬರ್ 2025, 13:56