ಪೋಪ್ ಲಿಯೋ XIV: ಬಡವರ ಪ್ರೀತಿಯಿಂದ ವಿಶ್ವಾಸವನ್ನು ಬೇರ್ಪಡಿಸಲಾಗದು
ವರದಿ: ವ್ಯಾಟಿಕನ್ ನ್ಯೂಸ್
'ಕ್ರಿಸ್ತರ ಪ್ರೀತಿ ಹಾಗೂ ಬಡವರ ಪ್ರೀತಿಯ ನಡುವೆ ಸಂಪರ್ಕವನ್ನು ಏರ್ಪಡಿಸುವಲ್ಲಿ ಎಲ್ಲಾ ಕ್ರೈಸ್ತರು ಕಾರ್ಯಗತವಾಗಬೇಕು" ಎಂಬ ದಿವಂಗತ ಪೋಪ್ ಫ್ರಾನ್ಸಿಸ್ ಅವರ ಕರೆಯನ್ನು ನೆನಪಿಸುತ್ತಾ, ಪೋಪ್ ಲಿಯೋ ಅವರು ತಮ್ಮ ಮೊದಲ ಪ್ರೇಷಿತ ಪರಿಪತ್ರ "ದಿಲೇಶಿತ್ ತೆ" ಅನ್ನು ಬಿಡುಗಡೆ ಮಾಡಿದ್ದಾರೆ. ಬಡವರು ಹಾಗೂ ಯಾತನೆಯನ್ನು ಅನುಭವಿಸುತ್ತಿರುವವರಲ್ಲಿ ಕ್ರಿಸ್ತರನ್ನು ಕಾಣಬೇಕೆಂದು ಕರೆ ನೀಡಿದ್ದಾರೆ.
ಪೋಪ್ ಲಿಯೋ XIV ಅವರು ತಮ್ಮ ನೂತನ ಪ್ರೇಷಿತ ಪರಿಪತ್ರದಲ್ಲಿ ಬಡವರ ಕುರಿತು ಹಾಗೂ ಯಾತನೆಯನ್ನು ಅನುಭವಿಸುತ್ತಿರುವವರಲ್ಲಿ ಕ್ರಿಸ್ತರನ್ನು ನಾವು ಕಾಣಬೇಕು ಎಂದು ಹೇಳಿದ್ದಾರೆ. "ದಿಲೇಶಿತ್ ತೆ" ಎಂದರೆ "ನಾನು ನಿಮ್ಮನ್ನು ಈಗಾಗಲೇ ಪ್ರೀತಿಸಿದ್ದೇನೆ" ಎಂಬುದಾಗಿದೆ.
ತಮ್ಮ ಈ ಪ್ರೇಷಿತ ಪರಿಪತ್ರದಲ್ಲಿ ಪೋಪ್ ಲಿಯೋ XIV ಅವರು ತಮ್ಮ ಪೂರ್ವವರ್ತಿ ವಿಶ್ವಗುರುಗಳಾದ ಪೋಪ್ 23ನೇ ಜಾನರು, ಪೋಪ್ ದ್ವಿತೀಯ ಸಂತ ಜಾನ್ ಪೌಲ್ ಹಾಗೂ ಪೋಪ್ ಫ್ರಾನ್ಸಿಸ್ ಅವರನ್ನು ನೆನಪಿಸಿಕೊಂಡಿದ್ದಾರೆ.
