ಜ್ಯೂಬಿಲಿಗೆ ಬಂದಿರುವ ಇಟಲಿಯ ಸನ್ಯಾಸಿಗಳನ್ನು ಭೇಟಿ ಮಾಡಿದ ಪೋಪ್

ಪೋಪ್ ಲಿಯೋ ಅವರು ರೋಮ್ ನಗರಕ್ಕಾಗಿ ಜ್ಯೂಬಿಲಿಗಾಗಿ ಆಗಮಿಸಿರುವ ಕ್ರೈಸ್ತ ಸನ್ಯಾಸಿಗಳನ್ನು ಭೇಟಿ ಮಾಡಿದ್ದು, ತಮ್ಮ ದೈವಕರೆಯನ್ನು ಸಂಪೂರ್ಣವಾಗಿ ಜೀವಿಸುವಂತೆ ಅವರಿಗೆ ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸಭೆಗೆ ನೆರವಾಗುವಂತೆ ಸಹ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ ಅವರು ರೋಮ್ ನಗರಕ್ಕಾಗಿ ಜ್ಯೂಬಿಲಿಗಾಗಿ ಆಗಮಿಸಿರುವ ಕ್ರೈಸ್ತ ಸನ್ಯಾಸಿಗಳನ್ನು ಭೇಟಿ ಮಾಡಿದ್ದು, ತಮ್ಮ ದೈವಕರೆಯನ್ನು ಸಂಪೂರ್ಣವಾಗಿ ಜೀವಿಸುವಂತೆ ಅವರಿಗೆ ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸಭೆಗೆ ನೆರವಾಗುವಂತೆ ಸಹ ಹೇಳಿದ್ದಾರೆ.

"ಈ ಜಗತ್ತು ಮಾಧ್ಯಮ ಹಾಗೂ ತಂತ್ರಜ್ಞಾನದಿಂದ ಬಹುತೇಕ ಆವೃತ್ತವಾಗಿರುವ ಈ ಸಂದರ್ಭದಲ್ಲಿ ಇಲ್ಲಿಗೆ ಮೌನ ಹಾಗೂ ಏಕಾಂತದ ಅವಶ್ಯಕತೆ ಇದೆ" ಎಂದು ಹೇಳಿದ ಪೋಪ್ ಲಿಯೋ ಅವರು, ಕ್ರೈಸ್ತ ಸನ್ಯಾಸಿಗಳನ್ನು ಉದ್ದೇಶಿಸುತ್ತಾ "ನೀವು ಈ ಜಗತ್ತಿನಿಂದ ದೂರವಿದ್ದರೂ ಸಹ ಅದು ನಿಮ್ಮನ್ನು ಇತರರಿಂದ ದೂರ ಮಾಡುವುದಿಲ್ಲ. ಬದಲಿಗೆ ಮತ್ತಷ್ಟು ಆತ್ಮೀಯತೆಯಲ್ಲಿ ನಿಮ್ಮನ್ನು ಒಗ್ಗೂಡಿಸುತ್ತದೆ ಎಂದು ಪೋಪ್ ಲಿಯೋ ಹೇಳಿದ್ದಾರೆ.

ಮುಂದುವರೆದುರ ಮಾತನಾಡಿದ ಪೋಪ್ ಲಿಯೋ ಅವರು "ಸನ್ಯಾಸಿಗಳು ಧರ್ಮಸಭೆಯ ಪಿತಾಮಹರುಗಳ ಪರಂಪರೆಗೆ ಹತ್ತಿರವಾಗಿದ್ದು, ಅದನ್ನು ಉಳಿಸುತ್ತಿದ್ದಾರೆ. ಧರ್ಮಾಧ್ಯಕ್ಷರೊಂದಿಗೆ ಐಕ್ಯತೆಯಲ್ಲಿರುವ ಮೂಲಕ, ಧರ್ಮಕೇಂದ್ರದ ಗುರುಗಳಿಗೆ ನೆರವಾಗುವ ಮೂಲಕ ಅವರು ತಮ್ಮ ದೈವಕರೆಯನ್ನು ಜೀವಿಸುತ್ತಿದ್ದಾರ" ಎಂದು ಹೇಳಿದ್ದಾರೆ.

11 ಅಕ್ಟೋಬರ್ 2025, 15:16