ಪೋಪರ ಅಕ್ಟೋಬರ್ ತಿಂಗಳ ಪ್ರಾರ್ಥನಾ ಕೋರಿಕೆ: ಧರ್ಮಗಳ ನಡುವೆ ಸಹಯೋಗಕ್ಕಾಗಿ
ವರದಿ: ವ್ಯಾಟಿಕನ್ ನ್ಯೂಸ್
ಅಕ್ಟೋಬರ್ ತಿಂಗಳಿಗೆ ಪೋಪ್ ಲಿಯೋ ಅವರು ಪ್ರಾರ್ಥನಾ ಉದ್ದೇಶವನ್ನು ಬಿಡುಗಡೆ ಮಾಡಿದ್ದು, ವಿವಿಧ ಧಾರ್ಮಿಕ ಸಂಪ್ರದಾಯಗಳ ನಡುವೆ ಸಹಯೋಗಕ್ಕಾಗಿ ಜನತೆಗೆ ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ವಿಶ್ವಗುರು ಲಿಯೋ ಅವರು ಈ ಉದ್ದೇಶಕ್ಕಾಗಿ ತಾಯಿ ಧರ್ಮಸಭೆ ಈ ತಿಂಗಳಲ್ಲಿ ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ. ಯೇಸುಕ್ರಿಸ್ತರು ತಮ್ಮದೇ ವೈವಿಧ್ಯತೆಯಲ್ಲಿ ಏಕ ದೇವರಾಗಿದ್ದಾರೆ ಹಾಗೂ ನಮ್ಮನ್ನು ಸಹೋದರ ಸಹೋದರಿಯರನ್ನಾಗಿ ಗುರುತಿಸಲು ನೆರವಾಗುತ್ತಾರೆ. ವಿವಿಧ ಧರ್ಮಗಳಿಗೆ ನಾವು ಸೇರಿದ್ದರು ಸಹ ನಾವೆಲ್ಲರೂ ಶಾಂತಿಯಿಂದ ಬಾಳಲು ಪ್ರಾರ್ಥಿಸಲು ಕೆಲಸ ಮಾಡಲು ಹಾಗೂ ಒಟ್ಟಾಗಿ ಕನಸು ಕಾಣಲು ಕರೆಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಜಗತ್ತು ಎಷ್ಟೇ ಸುಂದರವಾಗಿ ಕಾಣುತ್ತಿದ್ದರು ಅದು ಹಲವು ವಿಭಜನೆಗಳಿಂದ ನೊಂದಿದೆ. ಧರ್ಮಗಳು ನಮ್ಮನ್ನು ಒಟ್ಟುಗೂಡಿಸುವ ಬದಲು ವಿಭಜನೆಯ ಸಂಕೇತಗಳಾಗಿವೆ ಎಂದು ವಿಷಾದಿಸಿದರು. ಈ ಹಿನ್ನೆಲೆಯಲ್ಲಿ ಪ್ರಾರ್ಥನೆಯನ್ನು ಮಾಡಿರುವ ವಿಶ್ವಗುರುಗಳು ನಿಮ್ಮ ಆತ್ಮವನ್ನು ನಮಗೆ ನೀಡಿರಿ ನಮ್ಮ ಹೃದಯಗಳನ್ನು ಶುದ್ಧೀಕರಿಸಿರಿ ನಾವೆಲ್ಲರೂ ಯಾವುದನ್ನು ಸಹ ನಾಶ ಮಾಡದೆ ಸಹಯೋಗದಲ್ಲಿ ಪರಸ್ಪರ ಶಾಂತಿಯಿಂದ ಕಾರ್ಯನಿರ್ವಹಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
