ಇಸ್ತಾಂಬುಲ್ ನಗರದಲ್ಲಿ ಭಕ್ತಾಧಿಗಳನ್ನು ಭೇಟಿ ಮಾಡಿದ ಪೋಪ್ ಲಿಯೋ XIV

ಇಸ್ತಾಂಬುಲ್'ನಲ್ಲಿರುವ ಪವಿತ್ರಾತ್ಮರ ಪ್ರಧಾನಾಲಯದಲ್ಲಿ ಪೋಪ್ ಲಿಯೋ ಅವರು ಕಥೋಲಿಕ ಭಕ್ತಾಧಿಗಳನ್ನು ಭೇಟಿ ಮಾಡಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಸ್ತಾಂಬುಲ್'ನಲ್ಲಿರುವ ಪವಿತ್ರಾತ್ಮರ ಪ್ರಧಾನಾಲಯದಲ್ಲಿ ಪೋಪ್ ಲಿಯೋ ಅವರು ಕಥೋಲಿಕ ಭಕ್ತಾಧಿಗಳನ್ನು ಭೇಟಿ ಮಾಡಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 

"ಪೋಪ್ ಲಿಯೋ", "ಪೋಪ್ ಚಿರಾಯುವಾಗಲಿ!" ಇಸ್ತಾನ್‌ಬುಲ್‌ನಲ್ಲಿರುವ ಪವಿತ್ರಾತ್ಮರ ಪ್ರಧಾನಾಲಯದ ಅಂಗಳದಲ್ಲಿ ನೆರೆದಿದ್ದ ಸಣ್ಣ ಜನಸಮೂಹವು ಶುಕ್ರವಾರ ಬೆಳಿಗ್ಗೆ ಪೋಪ್ ಲಿಯೋ XIV ರ ಆಗಮನಕ್ಕಾಗಿ ಕಾಯುತ್ತಿದ್ದಾಗ ಹರ್ಷೋದ್ಗಾರ ಮೂಡಿಸಿತು.

ಪೋಪ್ ಲಿಯೋ ಅವರು ಇದೇ ವೇಳೆ ಇಲ್ಲಿನ ಹಲವಾರು ಧರ್ಮಾಧ್ಯಕ್ಷರುಗಳು, ಗುರುಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಭೇಟಿ ಮಾಡಿ, ಮಾತುಕತೆಯನ್ನು ನಡೆಸಲಿದ್ದಾರೆ. ಮುಂದುವರೆದು ಮಾತನಾಡಿದ ಅವರು ಐತಿಹಾಸಿಕವಾಗಿ ಇಲ್ಲಿ ಪ್ರೇಷಿತ ರಾಯಭಾರಿಯಾಗಿದ್ದ ಪೋಪ್ ಇಪ್ಪತ್ಮೂರನೇ ಜಾನರನ್ನು  ಹಾಗೂ ಇಲ್ಲಿಗೆ ಭೇಟಿ ನೀಡಿದ ಪೋಪರನ್ನು ನೆನಪಿಸಿಕೊಂಡಿದ್ದಾರೆ.

28 ನವೆಂಬರ್ 2025, 15:51