ಪೋಪ್: ಸಂತ ಜಾನ್ ಹೆನ್ರಿ ನ್ಯೂಮನ್ ಉರ್ಬಾನಿಯಾ ವಿಶ್ವವಿದ್ಯಾಲಯದ ಪಾಲಕರು

ಸಕಲ ಸಂತರ ಮಹೋತ್ಸವದಂದು ಪೋಪ್ ಲಿಯೋ XIV ಅವರು ಸಂತ ಜಾನ್ ಹೆನ್ರಿ ನ್ಯೂಮನ್ ಅವರನ್ನು ಧರ್ಮಸಭೆಯ ಪಂಡಿತ ಎಂದು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಪೊಂಟಿಫಿಕಲ್ ಉರ್ಬಾನಿಯ ವಿಶ್ವವಿದ್ಯಾನಿಲಯದ ಪೋಷಕ ಸಂತರೆಂದು ಅವರು ಘೋಷಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಕಲ ಸಂತರ ಮಹೋತ್ಸವದಂದು ಪೋಪ್ ಲಿಯೋ XIV ಅವರು ಸಂತ ಜಾನ್ ಹೆನ್ರಿ ನ್ಯೂಮನ್ ಅವರನ್ನು ಧರ್ಮಸಭೆಯ ಪಂಡಿತ ಎಂದು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಪೊಂಟಿಫಿಕಲ್ ಉರ್ಬಾನಿಯ ವಿಶ್ವವಿದ್ಯಾನಿಲಯದ ಪೋಷಕ ಸಂತರೆಂದು ಅವರು ಘೋಷಿಸಿದ್ದಾರೆ.

ಉರ್ಬಾನಿಯ ವಿಶ್ವವಿದ್ಯಾನಿಲಯದ ಗ್ರಾಂಡ್ ಚಾನ್ಸೆಲರ್ ಆಗಿರುವ ಕಾರ್ಡಿನಲ್ ಲೂಯಿಸ್ ಅಂತೋನಿಯೋ ಗೋಕಿಂ ತಾಗ್ಲೆ ಅವರು ವಿಶ್ವವಿದ್ಯಾನಿಲಯದ ಪರವಾಗಿ ಈ ಪ್ರಸ್ತಾವನೆಯನ್ನು ಪೋಪರ ಮುಂದಿಟ್ಟರು ಎಂಬುದು ತಿಳಿದುಬಂದಿದೆ.

ಸಂತ ಜಾನ್ ಹೆನ್ರಿ ನ್ಯೂಮನ್ ಅವರು ಮೂಲತಃ ಆಂಗ್ಲಿಕನ್ ಪಂಥಕ್ಕೆ ಸೇರಿದವರಾಗಿದ್ದು, ತದನಂತರ ಧರ್ಮಸಭೆಯ ಸತ್ಯವನ್ನರಿತು ಕಥೋಲಿಕರಾದರು. ಗುರುವಾಗಿ, ಕಾರ್ಡಿನಲ್ ಪದವಿಗೇರಿದರು. "ಲೀಡ್ ಕೈಂಡ್ಲಿ ಲೈಟ್" (ಕರುಣಾಳು ಬಾ ಬೆಳಕೆ) ಎಂಬುದು ಅವರು ರಚಿಸಿದ ಸುಪ್ರಸಿದ್ಧ ಕವಿತೆಗಳಲ್ಲೊಂದಾಗಿದೆ.

03 ನವೆಂಬರ್ 2025, 16:08