ಜಗದ್ಗರು ಲಿಯೋರವರು ಮೊನಾಕೊದ ಪ್ರಿನ್ಸ್ IIನೇ ಅಲ್ಬರ್ಟ್ ರವರನ್ನು ಭೇಟಿಯಾದರು ಜಗದ್ಗರು ಲಿಯೋರವರು ಮೊನಾಕೊದ ಪ್ರಿನ್ಸ್ IIನೇ ಅಲ್ಬರ್ಟ್ ರವರನ್ನು ಭೇಟಿಯಾದರು   (ANSA)

ಜಗದ್ಗರು ಲಿಯೋರವರು ಮೊನಾಕೊದ ಪ್ರಿನ್ಸ್ IIನೇ ಅಲ್ಬರ್ಟ್ ರವರನ್ನು ಭೇಟಿಯಾದರು

ಶನಿವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಮೊನಾಕೊ ಪ್ರಿನ್ಸಿಪಾಲಿಟಿಯ ಪ್ರಿನ್ಸ್ II ನೇ ಅಲ್ಬರ್ಟ್ ರವರನ್ನು ಆತ್ಮೀಯವಾಗಿ ಸ್ವಾಗತಿಸಿ ಭೇಟಿಯಾದರು.

ವ್ಯಾಟಿಕನ್ ವರದಿ 

ಜಗದ್ಗರು XIVನೇ ಲಿಯೋರವರು ಶನಿವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಮೊನಾಕೊದ ಪ್ರಿನ್ಸ್ IIನೇ ಅಲ್ಬರ್ಟ್  ಅವರನ್ನು ಭೇಟಿಯಾದರು.

 

ಪವಿತ್ರ ಸಿಂಹಾಸನದ ಪತ್ರಿಕಾ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ನಂತರ ಪ್ರಿನ್ಸ್ II ನೇ ಅಲ್ಬರ್ಟ್  ಅವರು ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳಿಗಾಗಿ ಪವಿತ್ರ ಸಿಂಹಾಸನದ ಕಾರ್ಯದರ್ಶಿಗಳಾದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರನ್ನು ಭೇಟಿಯಾದರು.

 

ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಹೃದಯಂಗಮ ಮಾತುಕತೆಗಳ ಸಂದರ್ಭದಲ್ಲಿ, ಎಂದು ಹೇಳಿಕೆ ತಿಳಿಸಿದೆ, “ಪವಿತ್ರ ಸಿಂಹಾಸನ ಮತ್ತು ಮೊನಾಕೊ ಪ್ರಿನ್ಸಿಪಾಲಿಟಿಯ ನಡುವಿನ ಉತ್ತಮ ರಾಜತಾಂತ್ರಿಕ ಸಂಬಂಧಗಳು ಹಾಗೂ ಪ್ರಿನ್ಸಿಪಾಲಿಟಿಯ ಸಾಮಾಜಿಕ ಜೀವನದಲ್ಲಿ ಕಥೋಲಿಕ ಧರ್ಮ ಸಭೆ ನೀಡಿರುವ ಐತಿಹಾಸಿಕ ಮತ್ತು ಮಹತ್ವದ ಕೊಡುಗೆಗಳನ್ನು ಗಮನಿಸಲಾಯಿತು.

 

ಹೇಳಿಕೆ ಮುಂದುವರೆದು, ಪರಿಸರದ ಕಾಳಜಿ, ಮಾನವೀಯ ಸಹಾಯ ಮತ್ತು ಮಾನವ ವ್ಯಕ್ತಿಯ ಗೌರವದ ರಕ್ಷಣೆ ಹಾಗೂ ಉತ್ತೇಜನ ಎಂಬಂತಹ ಪರಸ್ಪರ ಆಸಕ್ತಿಯ ಹಲವು ವಿಷಯಗಳಿಗೆ ವಿಶೇಷ ಗಮನ ನೀಡಲಾಯಿತು ಎಂದು ತಿಳಿಸಿದೆ.

 

ಕೊನೆಯಲ್ಲಿ, ಹೇಳಿಕೆಯ ಪ್ರಕಾರ, ಪ್ರಸ್ತುತ ಅಂತರರಾಷ್ಟ್ರೀಯ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು. ಇದರಲ್ಲಿ ಶಾಂತಿ ಮತ್ತು ಭದ್ರತೆ, ಮಧ್ಯಪೂರ್ವದ ಸಾಮಾನ್ಯ ಪರಿಸ್ಥಿತಿ ಹಾಗೂ ಆಫ್ರಿಕಾದ ಕೆಲವು ಪ್ರದೇಶಗಳ ಸ್ಥಿತಿಗತಿಗಳಿಗೆ ವಿಶೇಷ ಒತ್ತು ನೀಡಲಾಯಿತು.

17 ಜನವರಿ 2026, 00:00