ವ್ಯಾಟಿಕನ್ VI ನೇ ಪಾಲ್ ಸಭಾಂಗಣದಲ್ಲಿ ನಡೆದ ಕಾಡಿ೯ನಲ್ ಗಳ ಅಸಾದಾರಣ ಕಾನ್ಸಿಸ್ಟರಿಯ ಮೊದಲ ಅಧಿವೇಶನದ ಅಂತ್ಯದಲ್ಲಿ ಜಗದ್ಗರು XIV ನೇ ಲಿಯೋರವರು ಭಾಷಣ ಮಾಡಿದರು. ವ್ಯಾಟಿಕನ್ VI ನೇ ಪಾಲ್ ಸಭಾಂಗಣದಲ್ಲಿ ನಡೆದ ಕಾಡಿ೯ನಲ್ ಗಳ ಅಸಾದಾರಣ ಕಾನ್ಸಿಸ್ಟರಿಯ ಮೊದಲ ಅಧಿವೇಶನದ ಅಂತ್ಯದಲ್ಲಿ ಜಗದ್ಗರು XIV ನೇ ಲಿಯೋರವರು ಭಾಷಣ ಮಾಡಿದರು.  (ANSA)

ಜಗದ್ಗುರು ಲಿಯೋ: ‘ಕಾರ್ಡಿನಲ್‌ಗಳೇ, ನಾನು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ'

ಜಗದ್ಗುರು XIV ನೇ ಲಿಯೋರವರು VIನೇ ಪೌಲ್ ಸಭಾಂಗಣದಲ್ಲಿ ಭಾಷಾ ಗುಂಪುಗಳಲ್ಲಿ ನಡೆದ ಕಾರ್ಯದ ನಂತರ, ನಿನ್ನೆ ಕಾರ್ಡಿನಲ್‌ಗಳೊಂದಿಗೆ ನಡೆದ ಸಭೆಯ ಮೊದಲ ಅಧಿವೇಶನವನ್ನು ತಕ್ಷಣದ ಅನೌಪಚಾರಿಕ ಭಾಷಣದೊಂದಿಗೆ ಸಮಾರೋಪಗೊಳಿಸಿದರು. ನಾಲ್ಕು ಪ್ರಸ್ತಾವನೆಗಳಿಂದ ಧರ್ಮಾಧಿಕಾರಿಗಳ ಆಲೋಚನಾ ಸಭೆ ಮತ್ತು ಎವಾಂಜೆಲಿ ಗೌಡಿಯಮ್‌ನ ಬೆಳಕಿನಲ್ಲಿ ಮಿಷನ್ ಎಂಬ ಎರಡು ವಿಷಯಗಳನ್ನು ಆಯ್ಕೆ ಮಾಡಿದಕ್ಕಾಗಿ ಅವರು ಕಾರ್ಡಿನಲ್‌ಗಳಿಗೆ ಕೃತಜ್ಞತೆ ಸಲ್ಲಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ವ್ಯಾಟಿಕನ್‌ನಲ್ಲಿ ಆಯೋಜಿಸಿದ ಅಸಾಧಾರಣ ಕನ್ಸಿಸ್ಟರಿಯ ಮೊದಲ ದಿನದ ಅಂತ್ಯದಲ್ಲಿ, ಹಾಜರಿದ್ದ 170 ಕಾರ್ಡಿನಲ್‌ಗಳಿಗೆ ತಮ್ಮ ಬೆಂಬಲ ಮತ್ತು ಸಹಕಾರವನ್ನು ಮತ್ತೊಮ್ಮೆ ವಿನಂತಿಸಿದರು. ಈ ಸೇವೆಯನ್ನು ನನಗೆ ಒಪ್ಪಿಸಿದವರು ನೀವೇ ಆದ್ದರಿಂದ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳುವ ಅಗತ್ಯ ನನಗಿದೆ, ಎಂದು ಅವರು ಹೇಳಿದರು. ಚರ್ಚಿನ ಹಿತಕ್ಕಾಗಿ ಒಟ್ಟಾಗಿ ಕೆಲಸಮಾಡುವುದು, ಒಟ್ಟಾಗಿ ವಿವೇಚಿಸುವುದು ಮತ್ತು ಪವಿತ್ರಾತ್ಮನು ಏನು ಕೇಳುತ್ತಿದ್ದಾನೆ ಎಂಬುದನ್ನು ಹುಡುಕುವುದು ಅತ್ಯಂತ ಮುಖ್ಯವೆಂದು ಜಗದ್ಗುರುಗಳು ಒತ್ತಿ ಹೇಳಿದರು.

ಕನ್ಸಿಸ್ಟರಿಯಲ್ಲಿ ಚಿಂತನೆಗಾಗಿ ಎವಾಂಜೆಲಿ ಗೌಡಿಯಮ್‌ನ ಬೆಳಕಿನಲ್ಲಿ ಧರ್ಮಾಧ್ಯಕ್ಷರ ಆಲೋಚನಾ ಸಭೆ ಮತ್ತು ಮಿಷನ್ ಎಂಬ ವಿಷಯಗಳನ್ನು ಬಹುಮತದೊಂದಿಗೆ ಆಯ್ಕೆ ಮಾಡಲಾಯಿತು. ಜಗದ್ಗುರು ಲಿಯೋರವರು ಗುಂಪು ಚರ್ಚೆಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ರೋಮನ್ ಧರ್ಮ ಪ್ರಾಂತ್ಯದ ಹೊರಗಿನ ಕಾರ್ಡಿನಲ್‌ಗಳಿಂದ ಕೂಡಿದ  ಕಾರ್ಯದರ್ಶಿಗಳು ತಮ್ಮ ಕೆಲಸವನ್ನು ಮಂಡಿಸಿ ಸಮಗ್ರ ಅಧಿವೇಶನದಲ್ಲಿ ಪಾಲ್ಗೊಂಡರು. ಈ ಎರಡು ವಿಷಯಗಳು ಪರಸ್ಪರ ಬೇರ್ಪಡಲಾಗದವುಗಳಾಗಿದ್ದು, ಧರ್ಮ ಸಭೆ ತನ್ನೊಳಗೆ ಮಾತ್ರ ಗಮನಹರಿಸದೆ, ಧರ್ಮ ಪ್ರಚಾರ ಹೊಂದಿರಬೇಕೆಂಬ ಕರೆಯನ್ನೇ ಪ್ರತಿಬಿಂಬಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು.

ಧರ್ಮ ಸಭೆಯ ಅಸ್ತಿತ್ವದ ಮೂಲ ಕಾರಣ ಕಾರ್ಡಿನಲ್‌ಗಳು ಅಥವಾ ಧರ್ಮಗುರುಗಳಿಗಾಗಿ ಅಲ್ಲ, ಬದಲಾಗಿ ಸುವಾರ್ತೆಯನ್ನು ಘೋಷಿಸುವುದಕ್ಕಾಗಿ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. ಸಿನೋಡ್ ಮತ್ತು ಸಿನೋಡಾಲಿಟಿ ಇಂದಿನ ಜಗತ್ತಿನಲ್ಲಿ ಮಿಷನರಿ ಧರ್ಮ ಸಭೆಯಾಗಿರುವ ಮಾರ್ಗವನ್ನು ಹುಡುಕುತ್ತವೆ ಎವಾಂಜೆಲಿ ಗೌಡಿಯಮ್ ಕ್ರಿಸ್ತನನ್ನು ಕೇಂದ್ರವಾಗಿ ಇಟ್ಟು ಸುವಾರ್ತೆಯನ್ನು ಘೋಷಿಸಲು ಧರ್ಮ ಸಭೆ ಕರೆಯುತ್ತದೆ ಇದೇ ಧರ್ಮ ಸಭೆಯ ಧ್ಯೇಯವೆಂದು ಅವರು ಹೇಳಿದರು. ಉಳಿದ ವಿಷಯಗಳು ಕಳೆದುಹೋಗಿಲ್ಲ ಮುಂದಿನ ದಿನಗಳಲ್ಲಿ ಅವುಗಳನ್ನೂ ಸ್ಪಷ್ಟವಾಗಿ ಚರ್ಚಿಸಲಾಗುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಈ ಸಭೆಯ ಫಲಿತಾಂಶಕ್ಕಿಂತಲೂ, ಒಟ್ಟಾಗಿ ನಡೆದ ಪ್ರಯಾಣವೇ ಮುಖ್ಯವೆಂದು ಜಗದ್ಗುರು ಲಿಯೋ ಒತ್ತಿ ಹೇಳಿದರು. ಈ ಸಹಭಾಗಿತ್ವದ ಅನುಭವವು ಧರ್ಮಸಭೆಗೂ ಜಗತ್ತಿಗೂ ಒಟ್ಟಾಗಿ ನಡೆಯುವ ಇಚ್ಛೆಯ ಸಾಕ್ಷಿಯಾಗುತ್ತದೆ. ಕೆಲವರಿಗೆ ದೀರ್ಘ ಪ್ರಯಾಣವಾಗಿದ್ದರೂ, ಇಂದಿಗೂ ನಾಳೆಗೂ ಧರ್ಮ ಸಭೆಗಾಗಿ ಪವಿತ್ರಾತ್ಮನು ಏನು ಬಯಸುತ್ತಾನೆ ಎಂಬುದನ್ನು ಒಟ್ಟಾಗಿ ಹುಡುಕಲು ಈ ತ್ಯಾಗ ಅಗತ್ಯವಾಯಿತು ಎಂದು ಅವರು ಹೇಳಿದರು.

ಸಮಾರೋಪದಲ್ಲಿ, "ನಮ್ಮ ಧರ್ಮ ಸಭೆಯಲ್ಲಿ ಜೀವವಿದೆಯೇ?” ಎಂಬ ಪ್ರಶ್ನೆಯನ್ನು ಜಗದ್ಗುರುಗಳು ಪುನಃ ಉಚ್ಛರಿಸಿದರು. ಧರ್ಮ ಸಭೆಯಲ್ಲಿ ಜೀವವಿದೆ ಎಂಬುದರಲ್ಲಿ ನಾವು ದೃಢವಾಗಿದ್ದರೂ, ಸದಾ ಹೊಸತನಕ್ಕೆ ಸ್ಥಳವಿದೆಯೇ, ದೇವರು ನಮಗೆ ಮತ್ತೆ ಪ್ರಯಾಣ ಆರಂಭಿಸುವಂತೆ ಮಾಡುವನೆಂದು ನಾವು ಪ್ರೀತಿಸಿ ಘೋಷಿಸುತ್ತಿದ್ದೇವೆಯೇ ಎಂಬುದನ್ನು ಆತ್ಮಪರಿಶೀಲನೆ ಮಾಡಬೇಕೆಂದು ಅವರು ಕರೆ ನೀಡಿದರು. ಕನ್ಸಿಸ್ಟರಿ ಧರ್ಮಸಭೆ ಒಟ್ಟಾಗಿ ನಡೆಯಲು ಸಹಾಯ ಮಾಡುವ ಒಂದು ಮಹತ್ವದ ಅಭಿವ್ಯಕ್ತಿಯಾಗಿದ್ದು, ಪವಿತ್ರಾತ್ಮನು ನಮ್ಮ ಮಧ್ಯೆ ಜೀವಂತವಾಗಿ ಕಾರ್ಯನಿರ್ವಹಿಸುತ್ತಿರುವುದರ ಸುಂದರ ಸಾಕ್ಷಿಯಾಗಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.

10 ಜನವರಿ 2026, 13:41