ಜಗದ್ಗುರು XIV ನೇ ಲಿಯೋರವರು ಭಾನುವಾರದ ತ್ರಿಕಾಲ ಪ್ರಾಥ೯ನೆಯನ್ನು ನೀಡುತ್ತಿದ್ದಾರೆ. ಜಗದ್ಗುರು XIV ನೇ ಲಿಯೋರವರು ಭಾನುವಾರದ ತ್ರಿಕಾಲ ಪ್ರಾಥ೯ನೆಯನ್ನು ನೀಡುತ್ತಿದ್ದಾರೆ.  (AFP or licensors)

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ದೇವರ ದೃಷ್ಟಿಯಲ್ಲಿ ನಾವು ಅಮೂಲ್ಯರು.

ವ್ಯಾಟಿಕನ್‌ನಲ್ಲಿ ಈ ಭಾನುವಾರ ನಡೆದ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋ ರವರು, ಕ್ರೈಸ್ತರು ಸದಾ ಎಚ್ಚರಿಕೆಯಿಂದಿರಬೇಕು, ಅತಿ ಅವಶ್ಯಕವಾದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ದೇವರ ದೃಷ್ಟಿಯಲ್ಲಿ ನಾವು ಎಷ್ಟೊಂದು ಅಮೂಲ್ಯರಾಗಿದ್ದೇವೆ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿನ ಭಾನುವಾರ ಮಧ್ಯಾಹ್ನದ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು, ಪ್ರತಿದಿನವೂ ಪ್ರಾರ್ಥನೆ ಮತ್ತು ಆತ್ಮಪರಿಶೀಲನೆಗೆ ಸಮಯ ಮೀಸಲಿಟ್ಟು ನಮ್ಮನ್ನು ಪ್ರೀತಿಸುವ ಪ್ರಭುವನ್ನು ಭೇಟಿಯಾಗುವಂತೆ ವಿಶ್ವಾಸಿಗಳಿಗೆ ಆಹ್ವಾನಿಸಿದರು. ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂತ ಯಾವಾನ್ನರ ಸುವಾರ್ತೆಯಲ್ಲಿನ ದಿನದ ವಾಚನವನ್ನು ಸ್ಮರಿಸಿದರು ಅಲ್ಲಿ ಸ್ನಾನಿಕ ಯೋವಾನ್ನ ಯೇಸುವನ್ನು ದೇವರ ಕುರಿಮರಿಯಾಗಿಯೂ, ಮೆಸ್ಸಿಯಾಗಿಯೂ ಗುರುತಿಸಿ, ಅವರ ದೈವತ್ವ ಮತ್ತು ರಕ್ಷಣೆಯ ಗುರಿಯನ್ನು ಘೋಷಿಸುತ್ತಾನೆ.

ಜಗದ್ಗರುಗಳು ಸ್ನಾನಿಕ ಯೋವಾನ್ನ  ಜನರಿಂದ ಬಹಳ ಪ್ರೀತಿಸಲ್ಪಟ್ಟ ವ್ಯಕ್ತಿಯಾಗಿದ್ದನೆಂದು ನೆನಪಿಸಿದರು. ಆತನಿಗೆ ದೊರೆತ ಖ್ಯಾತಿ ಮತ್ತು ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸುಲಭವಾಗಿದ್ದರೂ, ಅವನು ಅದಕ್ಕೆ ಒಳಗಾಗದೆ, ತನ್ನ ಸಣ್ಣತನವನ್ನು ಒಪ್ಪಿಕೊಂಡು ಯೇಸುವಿನ ಮಹಿಮೆಗೆ ಸ್ಥಳ ಕೊಟ್ಟನು. ಪ್ರಭು ಬಂದಾಗ, ವಿನಯ ಮತ್ತು ಆನಂದದಿಂದ ದೇವರ ಸಾನ್ನಿಧ್ಯವನ್ನು ಅಂಗೀಕರಿಸಿ, ತಾನೇ ಹಿಂದೆ ಸರಿದನು ಎಂಬುದು ನಮಗೆ ಮಹತ್ವದ ಸಾಕ್ಷಿಯಾಗಿದೆ ಎಂದು ಜಗದ್ಗರುಗಳು ಹೇಳಿದರು.

ಇಂದಿನ ಕಾಲದಲ್ಲಿಯೂ ಅನೇಕರು ಸಂತೋಷಕ್ಕಾಗಿ ಮಾನ್ಯತೆ, ಒಪ್ಪಿಗೆ ಮತ್ತು ದೃಶ್ಯಮಾನತೆಯನ್ನು ಹುಡುಕುತ್ತಾರೆ ಆದರೆ ಇವುಗಳು ಬಹುಶ ನೋವು, ವಿಭಜನೆ ಮತ್ತು ಅಸ್ಥಿರ ಸಂಬಂಧಗಳಿಗೆ ಕಾರಣವಾಗುತ್ತವೆ ಎಂದು ಜಗದ್ಗರುಗಳು ಎಚ್ಚರಿಸಿದರು. ನಿಜವಾದ ಸಂತೋಷವು ತಾತ್ಕಾಲಿಕ ಯಶಸ್ಸು ಅಥವಾ ಖ್ಯಾತಿಯಲ್ಲಿ ಅಲ್ಲ, ಬದಲಾಗಿ ನಾವು ಸ್ವರ್ಗೀಯ ತಂದೆಯಿಂದ ಪ್ರೀತಿಸಲ್ಪಟ್ಟವರೂ ಬಯಸಲ್ಪಟ್ಟವರೂ ಆಗಿದ್ದೇವೆ ಎಂಬ ಅರಿವಿನಲ್ಲಿ ನೆಲೆಸಿದೆ ಎಂದು ಅವರು ಹೇಳಿದರು.

ಯೇಸು ತೋರಿಸುವ ಪ್ರೀತಿ, ಅದ್ಭುತ ಪ್ರದರ್ಶನಗಳಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುವ ಪ್ರೀತಿ ಅಲ್ಲ ಬದಲಾಗಿ ನಮ್ಮ ಸಂಕಷ್ಟಗಳಲ್ಲಿ ಪಾಲ್ಗೊಂಡು, ನಮ್ಮ ಭಾರವನ್ನು ತನ್ನ ಮೇಲೆ ಹೊರುವ ದೇವರ ಪ್ರೀತಿ ಎಂದು ಜಗದ್ಗರುಗಳು ವಿವರಿಸಿದರು. ಈ ಮೂಲಕ ದೇವರ ದೃಷ್ಟಿಯಲ್ಲಿ ನಾವು ಎಷ್ಟು ಅಮೂಲ್ಯರಾಗಿದ್ದೇವೆ ಎಂಬ ಸತ್ಯವನ್ನು ಯೇಸು ನಮಗೆ ಪ್ರಕಟಿಸುತ್ತಾರೆ.

ಸಂದೇಶದ ಕೊನೆಯಲ್ಲಿ, ಪ್ರಭುವಿನ  ಸಾನ್ನಿಧ್ಯದಿಂದ ಗಮನ ಭ್ರಷ್ಟರಾಗದೆ, ಬಾಹ್ಯ ರೂಪಗಳ ಹಿಂದೆ ಓಡಾಡುವುದನ್ನು ಬಿಡಲು ಜಗದ್ಗುರುಗಳು ವಿಶ್ವಾಸಿಗಳಿಗೆ ಕರೆ ನೀಡಿದರು. ಸ್ನಾನಿಕ ಯೋವಾನ್ನ ನಿಂದ ಕಲಿತು ಎಚ್ಚರಿಕೆಯಿಂದಿರುವುದು, ಸರಳತೆಯನ್ನು ಪ್ರೀತಿಸುವುದು, ಮಾತಿನಲ್ಲಿ ಪ್ರಾಮಾಣಿಕರಾಗಿರುವುದು, ಮಿತವಾಗಿ ಬದುಕುವುದು ಮತ್ತು ಮನಸ್ಸು–ಹೃದಯಗಳ ಆಳವನ್ನು ಬೆಳೆಸುವುದು ಅಗತ್ಯವೆಂದರು. ಪ್ರತಿದಿನ ಸಾಧ್ಯವಾದಷ್ಟು ಮೌನದಲ್ಲಿ ನಿಲ್ಲಿ, ಪ್ರಾರ್ಥಿಸಿ, ಧ್ಯಾನಿಸಿ, ಪ್ರಭುವು ಕೇಳುವ ಸಮಯವನ್ನು ತೆಗೆದುಕೊಳ್ಳುವಂತೆ ಮತ್ತು ಈ ನಿರ್ಧಾರದಲ್ಲಿ ನಮಗೆ ನೆರವಾಗಲು ಸರಳತೆ, ಜ್ಞಾನ ಮತ್ತು ವಿನಯದ ಮಾದರಿಯಾದ ಕನ್ಯಾ ಮರಿಯಮ್ಮನ ಸಹಾಯವನ್ನು ಕೋರಿದರು.

18 ಜನವರಿ 2026, 15:24