ಜಗದ್ಗರುಗಳು: ಕ್ರೈಸ್ತರು ಸಂಪೂರ್ಣ ಏಕತೆಗಾಗಿ ಪ್ರಾರ್ಥನೆಯನ್ನು ಇನ್ನಷ್ಟು ಗಾಢಗೊಳಿಸೋಣ
ವ್ಯಾಟಿಕನ್ ವರದಿ
ಜನವರಿ 18ರಂದು ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಇಂದು ಆರಂಭವಾಗುತ್ತಿರುವ ಕ್ರೈಸ್ತರ ಏಕತೆಗಾಗಿ ಪ್ರಾರ್ಥನೆಯ ವಾರದ ಮೂಲಗಳನ್ನು ಸ್ಮರಿಸಿದರು. ಈ ಉಪಕ್ರಮವು ಎರಡು ಶತಮಾನಗಳ ಹಿಂದಿನಿಂದ ಆರಂಭವಾಗಿದ್ದು, ಜಗದ್ಗುರು XIVನೇ ಲಿಯೋರವರಿಂದ ಬಲವಾಗಿ ಪ್ರೋತ್ಸಾಹಿಸಲ್ಪಟ್ಟಿತ್ತು ಎಂದು ಅವರು ತಿಳಿಸಿದರು. ಹಾಗೆಯೇ, ನಿಖರವಾಗಿ ನೂರು ವರ್ಷಗಳ ಹಿಂದೆ, ಕ್ರೈಸ್ತರ ಏಕತೆಗಾಗಿ ಪ್ರಾರ್ಥನೆಯ ಅಷ್ಟಕ (ಆಕ್ಟೇವ್)ಕ್ಕೆ ಸಲಹೆಗಳು ಎಂಬ ದಸ್ತಾವೇಜಿನ ಮೂಲಕ ಈ ಉಪಕ್ರಮವು ಮೊದಲ ಬಾರಿಗೆ ಇನ್ನಷ್ಟು ಸಮೃದ್ಧಿಗೊಂಡಿತು ಎಂದು ಅವರು ಹೇಳಿದರು.
ಈ ವರ್ಷದ ಪ್ರಾರ್ಥನಾ ವಾರದ ವಿಷಯವು ಸಂತ ಪೌಲರ ಎಫೆಸಿಯರಿಗೆ ಬರೆದ ಪತ್ರಿಕೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಜಗದ್ಗರುಗಳು ಸ್ಮರಿಸಿದರು ಒಂದು ದೇಹವಿದೆ, ಒಂದು ಆತ್ಮವಿದೆ ಹಾಗೆಯೇ ನಿಮ್ಮ ಕರೆಯ ಒಂದೇ ನಿರೀಕ್ಷೆಗೆ ನೀವು ಕರೆಯಲ್ಪಟ್ಟಿದ್ದೀರಿ”(ಎಫೆ 4:4). ಈ ವಾರದ ಪ್ರಾರ್ಥನೆಗಳು ಮತ್ತು ಧ್ಯಾನಗಳನ್ನು, ಅರ್ಮೇನಿಯನ್ ಪ್ರೇಷಿತರ ಧರ್ಮ ಸಭೆಯ ಅಂತರಧರ್ಮೀಯ ಸಂಬಂಧಗಳ ವಿಭಾಗದ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಐಕ್ಯಮತೀಯ ಗುಂಪೊಂದು ಸಿದ್ಧಪಡಿಸಿದೆ ಎಂದು ಜಗದ್ಗುರು XIVನೇ ಲಿಯೋ ರವರು ಹೇಳಿದರು, ಈ ದಿನಗಳಲ್ಲಿ ಎಲ್ಲಾ ಕಥೋಲಿಕ ಸಮುದಾಯಗಳು ಎಲ್ಲ ಕ್ರೈಸ್ತರ ಸಂಪೂರ್ಣ ಮತ್ತು ದೃಶ್ಯಮಾನ ಐಕ್ಯತೆಗಾಗಿ ತಮ್ಮ ಪ್ರಾರ್ಥನೆಯನ್ನು ಇನ್ನಷ್ಟು ಗಾಢಗೊಳಿಸಬೇಕೆಂದು ನಾನು ಆಹ್ವಾನಿಸುತ್ತೇನೆ ಎಂದರು.
ಜಗದ್ಗರುಗಳು ಮುಂದುವರೆದು, ಈ ಐಕ್ಯತೆಯ ಆಹ್ವಾನವು ಈ ವಾರದ ಪೂರ್ಣ ಅವಧಿಯಲ್ಲೂ ನಡೆಯುವ ಧ್ಯಾನಗಳಿಗೆ ಮಾರ್ಗದರ್ಶಿಯಾಗಲಿದೆ ಎಂದರು. ಈ ಪ್ರಾರ್ಥನಾ ವಾರವು ಜನವರಿ 25ರ ಭಾನುವಾರ ಕೊನೆಗೊಳ್ಳಲಿದೆ. ಸಂಪ್ರದಾಯದಂತೆ, ಸಂತ ಪೌಲರ ಪರಿವರ್ತನೆಯ ಮಹೋತ್ಸವದಂದು, ರೋಮ್ ನಲ್ಲಿ ಸಮಯ ಸಂಜೆ 5.30ಕ್ಕೆ, ಸಂತ ಪೌಲರ ಬಸಿಲಿಕಾದಲ್ಲಿ ನಡೆಯುವ ಸಂಜೆ ಪ್ರಾರ್ಥನಾ ಆಚರಣೆಗೆ ಜಗದ್ಗುರು XIVನೇ ಲಿಯೋರವರು ಅಧ್ಯಕ್ಷತೆ ವಹಿಸಲಿದ್ದಾರೆ.
