ಜಗದ್ಗುರು ಲಿಯೋರವರು: ಶಾಂತಿಗಾಗಿ ನಮ್ಮ ಧ್ವನಿಯನ್ನು ಎತ್ತೋಣ
ವ್ಯಾಟಿಕನ್ ವರದಿ
ನಾವು ಶಾಂತಿಗಾಗಿ ಬಹಳಷ್ಟು ಪ್ರಾರ್ಥಿಸಬೇಕೆಂಬುದನ್ನು ಮಾತ್ರ ನಾನು ಹೇಳುತ್ತೇನೆ.
ಇವು ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿರುವ ತಮ್ಮ ನಿವಾಸವಾದ ವಿಲ್ಲಾ ಬಾರ್ಬೆರಿನಿಯಿಂದ ಹೊರಡುವಾಗ, ಇಟಾಲಿಯನ್ ದೂರದರ್ಶನಕ್ಕೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಜಗದ್ಗುರು XIVನೇ ಲಿಯೋರವರು ಹೇಳಿದ ಮಾತುಗಳು.ಆ ದಿನವೂ ಅವರು ಸದಾ ಮಾಡುವಂತೆ ಮಂಗಳವಾರ ವಿಶ್ರಾಂತಿ ಹಾಗೂ ಕಾರ್ಯಗಳಲ್ಲಿ ಕಳೆಯುತ್ತಿದ್ದರು.
ಮಧ್ಯಪೂರ್ವದಲ್ಲಿನ ಪರಿಸ್ಥಿತಿಯ ಬಗ್ಗೆ, ವಿಶೇಷವಾಗಿ ಪರ್ಷಿಯನ್ ಕೊಲ್ಲಿಯ ಜಲಪ್ರದೇಶದಲ್ಲಿ ಅಮೇರಿಕದ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯ ನೇತೃತ್ವದಲ್ಲಿರುವ ನೌಕಾ ದಾಳಿ ಪಡೆಯ ಹಾಜರಾತಿ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಜಗದ್ಗುರುಗಳು ಶಾಂತಿಗಾಗಿ ತಮ್ಮ ಮನವಿಯನ್ನು ಪುನರುಚ್ಚರಿಸಿದರು.
ನಾವು ಸಣ್ಣವರಾದರೂ ನಮ್ಮ ಧ್ವನಿಯನ್ನು ಎತ್ತಬಹುದು ಈ ಸಮಸ್ಯೆಗಳನ್ನು ಪರಿಹರಿಸಲು ಹಿಂಸೆಯಲ್ಲ, ಸದಾ ಸಂವಾದದ ಮಾರ್ಗವನ್ನೇ ಹುಡುಕಬೇಕು,ಎಂದು ಅವರು ಹೇಳಿದರು. ವಿಶೇಷವಾಗಿ ಇಂದು ನಾವು ಹತ್ಯಾಕಾಂಡವನ್ನು ಸ್ಮರಿಸುವ ದಿನವಾಗಿದೆ ಎಂದರು.
ಇಂದು ಹತ್ಯಾಕಾಂಡದ ಸ್ಮರಣಾ ದಿನವಾಗಿರುವ ಹಿನ್ನೆಲೆಯಲ್ಲಿ, ಜಗದ್ಗುರು ಲಿಯೋರವರು ದಿನದ ಮೊದಲೇ ತಮ್ಮ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಹೇಳಿದ್ದನ್ನು ಮತ್ತೊಮ್ಮೆ ದೃಢಪಡಿಸಿದರು:
ಎಲ್ಲಾ ವಿಧದ ಯಹೂದಿ ವಿರೋಧಿತ್ವ ವಿರುದ್ಧ ನಾವು ಹೋರಾಡೋಣ ಎಂದರು
