ಜಗದ್ಗುರು ಲಿಯೋರವರು ಯುರೋಪಿಯನ್ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು
ವಾಟಿಕನ್ ನ್ಯೂಸ್
ಗುರುವಾರ ಬೆಳಿಗ್ಗೆ, ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಜಗದ್ಗುರು XIVನೇ ಲಿಯೋರವರು ಯುರೋಪಿಯನ್ ಸಂಸತ್ತಿನ ಅಧ್ಯಕ್ಷೆ ರೋಬೆರ್ಟಾ ಮೆಟ್ಸೋಲಾರವರನ್ನು ಸ್ವೀಕರಿಸಿದರು.
ಭೇಟಿಯ ನಂತರ ತಮ್ಮ ಅಧಿಕೃತ X ಹಿಂದಿನ ಟ್ವಿಟರ್ ಖಾತೆಯಲ್ಲಿ ಮೆಟ್ಸೋಲಾರವರು ಹೀಗೆ ಬರೆದಿದ್ದಾರೆ
ಜಗದ್ಗುರು XIV ನೇ ಲಿಯೋರವರೊಂದಿಗೆ ನಡೆದ ಭೇಟಿಯ ಸಂದರ್ಭದಲ್ಲಿ ವ್ಯಾಟಿಕನ್‌ನಲ್ಲಿ ಅರ್ಥಪೂರ್ಣವಾದ ಬೆಳಗ್ಗೆ ಅವರ ಉದ್ದೇಶಗಳ ಸ್ಪಷ್ಟತೆಗೆ ಮತ್ತು ಯುರೋಪ್ ಹಾಗೂ ಜಗತ್ತಿನಾದ್ಯಂತ ಸಂವಾದದ ಮೂಲಕ ಶಾಂತಿಯನ್ನು ಮುಂದುವರಿಸುವ ಬಗ್ಗೆ ನಮ್ಮ ಸಾಮಾನ್ಯ ಚಿಂತನೆಗಳಿಗೆ ನಾನು ಕೃತಜ್ಞಳಾಗಿದ್ದೇನೆ ಎಂದರು.
ಇಂದು ರೋಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮೆಟ್ಸೋಲಾರವರನ್ನು ಮೊದಲಿಗೆ ಜಗದ್ಗುರು ಲಿಯೋರವರು ಸ್ವೀಕರಿಸಿದ್ದು, ನಂತರ ವ್ಯಾಟಿಕನ್ ರಾಜ್ಯದ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೊಲಿನ್ ರವರು ಭೇಟಿಯಾಗಿದರು.
ಬೆಳಿಗ್ಗೆಯ ನಂತರದ ಸಮಯದಲ್ಲಿ, ಯುರೋಪಿಯನ್ ಸಂಸತ್ತಿನ ಅಧ್ಯಕ್ಷೆ ಇಟಲಿ ಗಣರಾಜ್ಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಹೊಂದಿದ್ದಾರೆ. ಇದರಲ್ಲಿ ಪ್ರಧಾನಮಂತ್ರಿ ಜಿಯೋರ್ಜಿಯಾ ಮೆಲೋನಿ ರವರೊಂದಿಗೆ ನಡೆಯುವ ಭೇಟಿಯೂ ಸೇರಿದೆ.
ಮಧ್ಯಾಹ್ನ, ರೋಮ್ ನಗರದ ಕೇಂದ್ರದಲ್ಲಿರುವ ಪಿಯಾಜ್ಜಾ ವೆನೆಝಿಯಾದಲ್ಲಿನ ಯುರೋಪಿಯನ್ ಸಂಸತ್ತಿನ ಕಚೇರಿಯಲ್ಲಿ ನಡೆಯಲಿರುವ ಡೆ ಗ್ಯಾಸ್ಪೇರಿ ರವರ ಪರಂಪರೆ ಯುರೋಪ್ ಮತ್ತು ಸ್ವಾತಂತ್ರ್ಯದ ರಕ್ಷಣೆ ಎಂಬ ಕಾರ್ಯಕ್ರಮದಲ್ಲಿ ಮೆಟ್ಸೋಲಾ ರವರು ಭಾಷಣ ಮಾಡಲಿದ್ದಾರೆ.
ಇಂದು ಬೆಳಿಗ್ಗೆಯ ಕಾರ್ಯಕ್ರಮಗಳಲ್ಲೇ, ರೋಮ್‌ನ ಮ್ಯಾಜಿಸ್ಟ್ರಲ್ ಅರಮನೆಯಲ್ಲಿ ಯುರೋಪಿಯನ್ ಸಂಸತ್ತಿನ ಅಧ್ಯಕ್ಷೆ ರೋಬೆರ್ಟಾ ಮೆಟ್ಸೋಲಾ ಮತ್ತು ಮಾಲ್ಟಾ ಸಂಸ್ಥಾನದ ಗ್ರ್ಯಾಂಡ್ ಮಾಸ್ಟರ್ ಫ್ರಾ’ ಜಾನ್ ಡನ್‌ಲ್ಯಾಪ್ ರವರ ನಡುವಿನ ಭೇಟಿಯೂ ನಡೆಯಿತು.
ಒಂದು ಪ್ರಕಟಣೆಯ ಪ್ರಕಾರ, ಈ ಸೌಜನ್ಯ ಭೇಟಿಯು ಮಾಲ್ಟಾ ಸಂಸ್ಥಾನದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಅವಕಾಶವಾಯಿತು. ಈ ಸಂಸ್ಥೆ ವಿಶ್ವದ 130ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಯುಕ್ರೇನ್ ಮತ್ತು ಗಾಜಾ ಮುಂತಾದ ಸಂಕೀರ್ಣ ಪರಿಸ್ಥಿತಿಗಳಲ್ಲಿ ಮಾಲ್ಟಾ ಸಂಸ್ಥೆ ನಡೆಸುತ್ತಿರುವ ಮಾನವೀಯ ಸೇವೆಗಾಗಿ ಅಧ್ಯಕ್ಷೆ ಮೆಟ್ಸೋಲಾರವರು ಅತ್ಯಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
