ಕಾಡಿ೯ನಲ್ ಪರೋಲಿನ್ ರವರು ಏಂಜಲೊ ಗುಗೆನ್ ರವರ ಅಂತ್ಯಕ್ರಿಯೆಯ ಬಲಿಪೂಜೆಯನ್ನು ಆಚರಿಸಿದರು. ಕಾಡಿ೯ನಲ್ ಪರೋಲಿನ್ ರವರು ಏಂಜಲೊ ಗುಗೆನ್ ರವರ ಅಂತ್ಯಕ್ರಿಯೆಯ ಬಲಿಪೂಜೆಯನ್ನು ಆಚರಿಸಿದರು. 

ಪೋಪ್: ಆಂಜೆಲೊ ಗುಗೇಲ್ ಮೂರು ಜಗದ್ಗುರುಗಳ ಸೇವೆಯಲ್ಲಿ ನಿಷ್ಠಾವಂತ ಹಾಗೂ ಪರಿಶ್ರಮಿ ವ್ಯಕ್ತಿಯಾಗಿದ್ದರು

ಜಗದ್ಗರು XIVನೇ ಲಿಯೋರವರು, ಮೂರು ಜಗದ್ಗುರುಗಳಿಗೆ ಜಗದ್ಗುರುಗಳ ಚೇಂಬರ್ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ಆಂಜೆಲೊ ಗುಗೇಲ್ ರವರ ಅಂತ್ಯಕ್ರಿಯೆಯಲ್ಲಿ ಓದಲ್ಪಟ್ಟ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. ಆ ಸಂದೇಶದಲ್ಲಿ, ವಾಟಿಕನ್‌ಗೆ ಅವರು ಸಲ್ಲಿಸಿದ ಉದಾರ ಸೇವೆಯನ್ನೂ, ಅವರ ಮಾದರಿಯಾದ ಕ್ರೈಸ್ತ ಸಾಕ್ಷ್ಯವನ್ನೂ ಜಗದ್ಗುರುಗಳು ಸ್ಮರಿಸಿದ್ದಾರೆ

ವ್ಯಾಟಿಕನ್ ವರದಿ

ಜಗದ್ಗುರುಗಳಿಗೆ ಆಂಜೆಲೊ ಗುಗೇಲ್ ರವರು ಸಲ್ಲಿಸಿದ ಸೇವೆಯನ್ನು ಜಗದ್ಗುರು XIVನೇ ಲಿಯೋರವರು “ದೀರ್ಘಕಾಲದ ಮತ್ತು ಅಮೂಲ್ಯ ಸೇವೆ” ಎಂದು ವರ್ಣಿಸಿದ್ದಾರೆ. Iನೇ ಜಾನ್ ಪಾಲ್ , II ನೇ ಜಾನ್ ಪಾಲ್  ಮತ್ತು XVI ನೇ ಬೆನೆಡಿಕ್ಟ್ ಎಂಬ ಮೂರು ಜಗದ್ಗುರುಗಳಿಗೆ  ಅವರು ಪ್ರತಿದಿನವೂ ನಿಷ್ಠೆ ಮತ್ತು ಪರಿಶ್ರಮದೊಂದಿಗೆ ಸೇವೆ ಸಲ್ಲಿಸಿದ್ದನ್ನು ಜಗದ್ಗುರುಗಳು ತಮ್ಮ ಸಂತಾಪ ಸಂದೇಶದಲ್ಲಿ ಸ್ಮರಿಸಿದರು. ಈ ಸಂದೇಶವನ್ನು, ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪ್ಯಾರೊಲಿನ್ ಸಹಿ ಮಾಡಿದ ದೂರಲಿಪಿಯಾಗಿ, ಆಂಜೆಲೊ ಗುಗೇಲ್ ರವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಓದಲಾಯಿತು.

90ನೇ ವಯಸ್ಸಿನಲ್ಲಿ ನಿಧನರಾದ ಆಂಜೆಲೊ ಗುಗೇಲ್ ರವರ ಅಂತ್ಯಕ್ರಿಯೆ ಶನಿವಾರ ವ್ಯಾಟಿಕನ್ ಸಮೀಪದ ರೋಮಿನ ಸಂತ ಮರಿಯಾ ದೆಲ್ಲೆ ಗ್ರಾತ್ಸಿಯೆ ಅಲೆ ಫೋರ್ನಾಚಿ ದೇವಾಲಯದಲ್ಲಿ ನಡೆಯಿತು. ಜಗದ್ಗರುಗಳು ತಮ್ಮ ಸಂದೇಶದಲ್ಲಿ, ಗುಗೇಲ್ ರವರ ಪತ್ನಿ ಮತ್ತು ಮಕ್ಕಳಿಗೆ ಸಂತಾಪ ಸೂಚಿಸಿ, ಅವರ ನಿಷ್ಕಳಂಕ ಜೀವನ ಮತ್ತು ಮಾದರಿಯಾದ ಕ್ರೈಸ್ತ ಸಾಕ್ಷ್ಯವನ್ನೂ, ವಾಟಿಕನ್ ಜೆಂಡಾರ್ಮರಿಯಲ್ಲಿ ಹಾಗೂ ಗವರ್ನರೇಟ್‌ನಲ್ಲಿ ಅವರು ನೀಡಿದ ಸೇವೆಯನ್ನೂ ಸ್ಮರಿಸಿದರು. ಜಗದ್ಗರುಗಳ ನಿವಾಸದಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಅವರು ಸೂಕ್ಷ್ಮ ಹಾಗೂ ಮೌಲ್ಯಯುತ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರು.

ಅಂತ್ಯಕ್ರಿಯೆ ಬಲಿ ಪೂಜೆಯನ್ನು ಕಾರ್ಡಿನಲ್ ಪಿಯೇತ್ರೋ ಪ್ಯಾರೊಲಿನ್ ರವರು ನೆರವೇರಿಸಿ, ಆಂಜೆಲೊ ಗುಗೇಲ್ ರವರನ್ನು ಒಳ್ಳೆಯ ವ್ಯಕ್ತಿ, ಪ್ರೀತಿಪಾತ್ರ ಪತಿ, ಮಾದರಿಯಾದ ತಂದೆ, ಸೌಮ್ಯ, ವಿವೇಕಿ ಮತ್ತು ನ್ಯಾಯಸಮ್ಮತ ವ್ಯಕ್ತಿ ಎಂದು ವರ್ಣಿಸಿದರು. ಅವರ ಕಣ್ಣುಗಳ ಸ್ಪಷ್ಟತೆ ಮತ್ತು ನಗು ಅವರ ದೇವರೊಂದಿಗೆ ಇದ್ದ ಆಳವಾದ ಸ್ನೇಹವನ್ನು ಪ್ರತಿಬಿಂಬಿಸುತ್ತಿತ್ತು ಎಂದು ಅವರು ಹೇಳಿದರು. ಬಡತನದಿಂದ ಗುರುತಿಸಲ್ಪಟ್ಟ ಕಾಲ ಮತ್ತು ಪರಿಸ್ಥಿತಿಗಳಲ್ಲಿ ಹುಟ್ಟಿದ ಅವರ ನಂಬಿಕೆ ಶಿಲೆಯಂತೆ ದೃಢವಾಗಿತ್ತು ಎಂದೂ ಅವರು ಸ್ಮರಿಸಿದರು.

ಕಾರ್ಡಿನಲ್ ಸ್ಟಾನಿಸ್ಲಾವ್ ಜಿವಿಷ್ ರವರು, ಆಂಜೆಲೊ ಗುಗೇಲ್ ರವರನ್ನು ಬುದ್ಧಿವಂತ ಮತ್ತು ನಿಷ್ಠಾವಂತ ಸೇವಕ ಎಂದು ಹೊಗಳಿ, ಸುವಾರ್ತಾ ವಿವೇಕ, ಸಮರ್ಪಣೆ, ಮೌನಸೇವೆ ಮತ್ತು ಶಿಸ್ತಿನ ಮಾದರಿಯಾಗಿದ್ದರು ಎಂದು ಹೇಳಿದರು. ಅಂತ್ಯಕ್ರಿಯೆಯ ಕೊನೆಯಲ್ಲಿ, ಅವರ ಶವಪೆಟ್ಟಿಗೆಯನ್ನು ಇಟಲಿಯ ಟ್ರೆವಿಸೋ ಪ್ರಾಂತ್ಯದ ಮಿಯಾನೆ ಪಟ್ಟಣಕ್ಕೆ ಕೊಂಡೊಯ್ಯಲಾಗುತ್ತದೆ. ಜನವರಿ 19ರಂದು ಸ್ಮರಣಾರ್ಥ ಬಲಿ ಪೂಜೆಯ ನಂತರ, ಅವರನ್ನು ಅಲ್ಲಿನ ಸಮಾಧಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

17 ಜನವರಿ 2026, 15:03