ವ್ಯಾಟಿಕನ್ ತೋಟಗಳಲ್ಲಿ ಪ್ರತಿಷ್ಠಾಪಿಸಲಾದ ಸಂತ ರೋಸ್ ಆಫ್ ಲಿಮಾರವರ ಪ್ರತಿಮೆಗೆ ಜಗದ್ಗುರು XIV ನೇ ಲಿಯೋರವರು ಆಶೀರ್ವಾದ ನೀಡಿದರು ವ್ಯಾಟಿಕನ್ ತೋಟಗಳಲ್ಲಿ ಪ್ರತಿಷ್ಠಾಪಿಸಲಾದ ಸಂತ ರೋಸ್ ಆಫ್ ಲಿಮಾರವರ ಪ್ರತಿಮೆಗೆ ಜಗದ್ಗುರು XIV ನೇ ಲಿಯೋರವರು ಆಶೀರ್ವಾದ ನೀಡಿದರು  (VINCENZO LIVIERI)

ಜಗದ್ಗರುಗಳು: ಸಂತ ರೋಸ್ ಆಫ್ ಲಿಮಾರವರು ಪವಿತ್ರತೆಗಾಗಿ ನಮ್ಮ ಕರೆಯ ಹೊಳೆಯುವ ಮಾದರಿಯಾಗಿದ್ದಾರೆ

ವ್ಯಾಟಿಕನ್ ತೋಟಗಳಲ್ಲಿ ಜಗದ್ಗುರು XIVನೇ ಲಿಯೋರವರು ಮರಿಯಮ್ಮನವರ ಚಿತ್ರ ಕಲೆ ಹಾಗೂ ಸಂತ ರೋಸ್ ಆಫ್ ಲಿಮಾರವರ ಪ್ರತಿಮೆಯನ್ನು ಆಶೀರ್ವದಿಸಿದರು. ಅಮೆರಿಕ ಖಂಡದಲ್ಲಿ ಜನಿಸಿದ ಮೊದಲ ಸಂತೆಯಾಗಿರುವ ಸಂತ ರೋಸ್ ಆಫ್ ಲಿಮಾರವರನ್ನು, ಭೂಮಿಯಲ್ಲಿ ಪವಿತ್ರತೆಯ ದಾರಿಗೆ ನಾವು ನಡೆಯಬೇಕಾದ ಪ್ರಯಾಣಕ್ಕೆ ಒಂದು ಮಹತ್ತಾದ ಮಾದರಿಯಾಗಿ ಜಗದ್ಗುರು XIVನೇ ಲಿಯೋರವರು ಮುಂದಿಟ್ಟಿದ್ದಾರೆ.

ವ್ಯಾಟಿಕನ್ ವರದಿ

 

ವ್ಯಾಟಿಕನ್ ತೋಟಗಳಲ್ಲಿ ಹೊಸ ಧಾರ್ಮಿಕ ಕೃತಿಗಳು: ಪವಿತ್ರತೆಯ ಸಂದೇಶ

 

ಶನಿವಾರ ವ್ಯಾಟಿಕನ್ ತೋಟಗಳ ಸಹಜ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ಸೇರ್ಪಡೆಯಾಯಿತು. ಧನ್ಯ ಕನ್ಯಾ ಮರಿಯಮ್ಮನನ್ನು ಚಿತ್ರಿಸುವ ಒಂದು ಚಿತ್ರ ಕಲೆ ಹಾಗೂ ಸಂತ ರೋಸ್ ಆಫ್ ಲಿಮಾರವರ ಪ್ರತಿಮೆ ಎಂಬ ಎರಡು ಹೊಸ ಧಾರ್ಮಿಕ ಕಲಾಕೃತಿಗಳನ್ನು ಅಲ್ಲಿ ಪ್ರತಿಷ್ಠಾಪಿಸಲಾಯಿತು.

ಈ ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಅಧಿಕಾರ ಹುದ್ದೆಗೆ ಪೆರು ದೇಶದ ರಾಯಭಾರಿ ಜಾರ್ಜ್ ಪೊನ್ಸೆ ಸಾನ್ ರೊಮಾನ್ನ್ ಹಾಗೂ ಪೆರು ಬಿಷಪ್‌ಗಳ ಸಭೆಯ ಅಧ್ಯಕ್ಷರಾದ ಲುರಿನ್‌ನ ಧರ್ಮಾಧ್ಯಕ್ಷ ಕಾರ್ಲೊಸ್ ಎನ್ರಿಕೆ ಗಾರ್ಸಿಯಾ ಕಾಮಾದೆರ್ ರವರೊಂದಿಗೆ ಪಾಲ್ಗೊಂಡರು.

ಸಮಾರಂಭದ ಕೊನೆಯಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು ಈ ಕ್ರಮವು ನನಗೆ ಅತ್ಯಂತ ಪ್ರಿಯವಾದ ಪೆರು ದೇಶ ಮತ್ತು ಜಗದ್ಗುರುಗಳ ಅಧಿಕಾರ ಹುದ್ದೆಯ ನಡುವಿನ ಆಳವಾದ ವಿಶ್ವಾಸ ಮತ್ತು ಸ್ನೇಹದ ಬಂಧಗಳನ್ನು ಮತ್ತೊಮ್ಮೆ ನವೀಕರಿಸುತ್ತದೆ ಎಂದು ಹೇಳಿದರು.

ವ್ಯಾಟಿಕನ್ ತೋಟಗಳು ಸೃಷ್ಟಿಕರ್ತನನ್ನು ಮತ್ತು ಸೃಷ್ಟಿಯ ಸೌಂದರ್ಯವನ್ನು ನಮಗೆ ನೆನಪಿಸುವ ಅತ್ಯಂತ ಸುಂದರ ಸ್ಥಳ ಎಂದು ಜಗದ್ಗುರುಗಳು ವಿವರಿಸಿದರು. ಅಲ್ಲಿನ ಪ್ರತಿಯೊಂದು ಅಂಶವೂ ದೇವರ ಸಾನ್ನಿಧ್ಯವನ್ನು ಮಾತನಾಡುತ್ತದೆ ಎಂದು ಅವರು ಹೇಳಿದರು.

ಈ ಎರಡು ಕಲಾಕೃತಿಗಳನ್ನು ರಚಿಸಿದ ಕಲಾವಿದರಿಗೆ ಜಗದ್ಗುರುಗಳು ಧನ್ಯವಾದ ಅರ್ಪಿಸಿದರು. ಪೆರು ಬಿಷಪ್‌ಗಳ ಸಭೆಯ ಆದೇಶದ ಮೇರೆಗೆ, ಪೆರು ಅಂಡೀಸ್ ಪರ್ವತ ಪ್ರದೇಶದ ಯುವಕರಿಂದ ಕೂಡಿದ ಡಾನ್ ಬೋಸ್ಕೊ ಕಲಾವಿದರ ಕುಟುಂಬ ಎಂಬ ಸಂಘಟನೆಯು ಈ ಚಿತ್ರಗಳು ಮತ್ತು ಪ್ರತಿಮೆಯನ್ನು ಸೃಷ್ಟಿಸಿದೆ.

ಮರಿಯಮ್ಮನವರ  ಮತ್ತು ಲ್ಯಾಟಿನ್ ಅಮೆರಿಕಾದ ಮೊದಲ ಸಂತೆಯಾಗಿರುವ ಸಂತ ರೋಸ್ ಆಫ್ ಲಿಮಾ  ಈ ಇಬ್ಬರು ವ್ಯಕ್ತಿತ್ವಗಳು ನಮಗೆ ಪವಿತ್ರತೆಯ ವಿಷಯವನ್ನು ನೆನಪಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು. ಪ್ರತಿಯೊಬ್ಬ ಕ್ರೈಸ್ತನೂ ಸಂಪೂರ್ಣ ಕ್ರೈಸ್ತ ಜೀವನ ಮತ್ತು ಪ್ರೀತಿಯ ಪರಿಪೂರ್ಣತೆಯನ್ನು ಹಂಬಲಿಸಬೇಕು ಎಂಬ ದ್ವಿತೀಯ ವ್ಯಾಟಿಕನ್ ಮಹಾಸಭೆಯ ಕರೆಗಳನ್ನು ಅವರು ಸ್ಮರಿಸಿದರು.

ದೇವರ ಜನರ ಪವಿತ್ರತೆ ಅಪಾರ ಫಲಗಳನ್ನು ತರುತ್ತದೆ ಅನೇಕ ಸಂತರ ಜೀವನಗಳಲ್ಲಿ ಧರ್ಮ ಸಭೆಯ ಇತಿಹಾಸ ಇದನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ಅವರು ಲುಮೆನ್ ಜೆಂಟಿಯಮ್ ಎಂಬ ಧರ್ಮಸಂವಿಧಾನವನ್ನು ಉಲ್ಲೇಖಿಸಿದರು.

ಕೊನೆಗೆ, ಪರಲೋಕದ ನಿವಾಸದ ಕಡೆ ನಮ್ಮ ಪ್ರಯಾಣದಲ್ಲಿ ಧನ್ಯ ಕನ್ಯಾ ಮರಿಯಮ್ಮನವರು ಮತ್ತು ಸಂತ ರೋಸ್ ಆಫ್ ಲಿಮಾರವರು ನಮ್ಮ ಪರ ಮಧ್ಯಸ್ಥಿಕೆ ವಹಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ದೇವರ ಕೃಪೆಯಿಂದ, ಎಂದು ಅವರು ಹೇಳಿದರು, ಇಂದಿನ ಜಗತ್ತಿನಲ್ಲಿ ನೀವು ಪವಿತ್ರತೆಯ ಸಾಕ್ಷಿಗಳೂ ಮಾದರಿಗಳೂ ಆಗಿರಿ.

31 ಜನವರಿ 2026, 00:00