ಜಗದ್ಗುರು XIV ನೇ ಲಿಯೋರವರು ಚೆಕ್ ಗಣರಾಜ್ಯದ ರಾಷ್ಟ್ರಪತಿಯನ್ನು ಭೇಟಿಯಾದರು
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಚೆಕ್ ಗಣರಾಜ್ಯದ ರಾಷ್ಟ್ರಪತಿ ಶ್ರೀ ಪೇತ್ರ್ ಪಾವೆಲ್ ಅವರನ್ನು ಭೇಟಿಯಾಗಿ ಸ್ವಾಗತಿಸಿದರು.
ಜಗದ್ಗರುಗಳ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿ ಅವರು ಜಗದ್ಗುರುಗಳ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪ್ಯಾರೊಲಿನ್ ರವರನ್ನು ಭೇಟಿಯಾದರು. ಈ ಭೇಟಿಗೆ ಜಗದ್ಗುರುಗಳ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ರವರು ಸಹ ಉಪಸ್ಥಿತರಿದ್ದರು.
ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಆತ್ಮೀಯ ಚರ್ಚೆಗಳ ಸಂದರ್ಭದಲ್ಲಿ,ಪ್ರಕಟಣೆ ತಿಳಿಸಿದಂತೆ, ಜಗದ್ಗುರುಗಳು ಮತ್ತು ಚೆಕ್ ಗಣರಾಜ್ಯಗಳ ನಡುವೆ ಇರುವ ಉತ್ತಮ ರಾಜತಾಂತ್ರಿಕ ಸಂಬಂಧಗಳ ಮೇಲಿನ ಮೆಚ್ಚುಗೆಯನ್ನು ಪುನರುಚ್ಚರಿಸಲಾಯಿತು ಹಾಗೂ ಅವುಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ದೃಢಪಡಿಸಲಾಯಿತು.
ಚರ್ಚೆಗಳು ಪರಸ್ಪರ ಸಾಮಾನ್ಯ ಆಸಕ್ತಿಯ ವಿಷಯಗಳ ಮೇಲೆ, ಹಾಗೆಯೇ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸ್ವಭಾವದ ಹಲವಾರು ಸಾಮಾಜಿಕ-ರಾಜಕೀಯ ವಿಚಾರಗಳ ಮೇಲೆ ಕೇಂದ್ರೀಕೃತವಾಗಿದ್ದವು. ವಿಶೇಷವಾಗಿ ನಡೆಯುತ್ತಿರುವ ಸಂಘರ್ಷಗಳ ಕುರಿತು ಗಮನಹರಿಸಿ, ಶಾಂತಿಗೆ ತುರ್ತು ಬದ್ಧತೆಯ ಅಗತ್ಯತೆ ಹಾಗೂ ಅಂತರರಾಷ್ಟ್ರೀಯ ಸಹವಾಸಕ್ಕೆ ಆಧಾರವಾಗಿರುವ ತತ್ವಗಳು ಮತ್ತು ಮೌಲ್ಯಗಳ ಪುನರುಜ್ಜೀವನದ ಮಹತ್ವವನ್ನು ಒತ್ತಿ ಹೇಳಲಾಯಿತು.
