ಜನವರಿ 7 ಮತ್ತು 8 ರಂದು ಜಗದ್ಗುರು XIV ನೇ ಲಿಯೋರವರ ಮೊದಲ ವಿಶೇಷ ಕಾನ್ಸಿಸ್ಟರಿ ನಡೆಯಲಿದೆ
ವ್ಯಾಟಿಕನ್ ವರದಿ
ಎವಾಂಜೆಲಿ ಗೌಡಿಯಮ್ ಮತ್ತು ಚರ್ಚಿನ ಮಿಷನರಿಯ ಪಾತ್ರ ಪ್ರೇಷಿತರ ಸಂವಿಧಾನ ಸುವಾತ೯ ಪ್ರಚಾರದ ಕಾಯ೯ವನ್ನು ವಹಿಸಲಾಗಿದ್ದು ಕ್ಯೂರಿಯಾದ ಪಾತ್ರ ಮತ್ತು ಸ್ಥಳೀಯ ಧರ್ಮಸಭೆಗಳೊಂದಿಗೆ ಅದರ ಸಂಬಂಧ ಧರ್ಮಾಧಿಕಾರಿಗಳ ಆಲೋಚನಾ ಸಭೆ ಹಾಗೂ ಆರಾಧನಾ ವಿಧಿ ಇವುಗಳೆಲ್ಲ ಜಗದ್ಗುರು XIVನೇ ಲಿಯೋರವರು ಕರೆಸಿರುವ ವಿಶೇಷ ಕಾನ್ಸಿಸ್ಟರಿಯನ್ನು ಮಾರ್ಗದರ್ಶಿಸುವ ವಿಷಯಗಳಾಗಿವೆ. ಇದು ಜಗದ್ಗುರುಗಳ ಮೊದಲ ಕಾನ್ಸಿಸ್ಟರಿಯಾಗಿದ್ದು, ಜನವರಿ 7 ಬುಧವಾರ ಮತ್ತು ಜನವರಿ 8 ಗುರುವಾರ ನಡೆಯಲಿದೆ.
ಈ ಎರಡು ದಿನಗಳ ಅವಧಿಯಲ್ಲಿ, ಜಗದ್ಗುರು XIVನೇ ಲಿಯೋರವರು ಕಾರ್ಡಿನಲ್‌ಗಳ ಕಾಲೇಜಿನ ಸದಸ್ಯರೊಂದಿಗೆ ಭೇಟಿಯಾಗಲಿದ್ದಾರೆ. ಇವರಲ್ಲಿ ಅನೇಕರು ಜನವರಿ 6ರ ಬೆಳಿಗ್ಗೆ ನಡೆದ ಪವಿತ್ರ ಬಾಗಿಲು ಮುಚ್ಚುವ ವಿಧಿ ಹಾಗೂ ದೈವದಶ೯ನ ಹಬ್ಬದ ಬಲಿಪೂಜೆಯಲ್ಲಿ ಭಾಗವಹಿಸಿದ್ದವರಾಗಿದ್ದಾರೆ. ಈ ಸಭೆಯ ಉದ್ದೇಶ, ಸಂಯುಕ್ತ ವಿವೇಚನೆಯನ್ನು ಉತ್ತೇಜಿಸುವುದಕ್ಕೂ, ಸಾರ್ವತ್ರಿಕ ಚರ್ಚಿನ ಆಡಳಿತದ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಜಗದ್ಗುರುಗಳಿಗೆ ಬೆಂಬಲ ಮತ್ತು ಸಲಹೆಗಳನ್ನು ನೀಡುವುದಕ್ಕೂ ಆಗಿದೆ.
ಜಗದ್ಗುರು XIV ನೇ ಲಿಯೋರವರು ತಮ್ಮ ಮೊದಲ ಕಾರ್ಡಿನಲ್‌ಗಳ ಕಾನ್ಸಿಸ್ಟರಿಯನ್ನು ಕರೆಯುತ್ತಾರೆ
ಕಾನ್ಸಿಸ್ಟರಿ ನಾಳೆ ಮಧ್ಯಾಹ್ನ 4:00ಕ್ಕೆ ವಾಟಿಕನ್‌ನ ಸಿನೋಡ್ ಸಭಾಂಗಣದಲ್ಲಿ ಆರಂಭವಾಗಲಿದೆ. ಈ ಸಭೆಗಳು ಮುಚ್ಚಲ್ಪಟ್ಟ ಬಾಗಿಲಿನ ಹಿಂದೆ ನಡೆಯಲಿವೆ.
ಮುಂದಿನ ದಿನವಾದ ಜನವರಿ 8ರಂದು, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಮಹಾದೇವಾಲಯದ ಪೇತ್ರರ ಆಸನದ ವೇದಿಯಲ್ಲಿ ಕಾರ್ಡಿನಲ್‌ಗಳೊಂದಿಗೆ ಸಹಪೂಜೆಯನ್ನು ನೆರವೇರಿಸಲಿದ್ದಾರೆ. ಬೆಳಿಗ್ಗೆ 9:30ಕ್ಕೆ ಆರಂಭವಾಗುವ ಪ್ರಾತಃಕಾಲದ ಅಧಿವೇಶನವು ಮಧ್ಯಾಹ್ನ 12:45ರವರೆಗೆ ಸಿನೋಡ್ ಸಭಾಂಗಣದಲ್ಲೇ ನಡೆಯಲಿದೆ. ಅಂತಿಮವಾಗಿ, ಮಧ್ಯಾಹ್ನ 3:15ರಿಂದ ಸಂಜೆ 7:00ರವರೆಗೆ ಜಗದ್ಗುರುಗಳು ಹಾಗೂ ಕಾರ್ಡಿನಲ್‌ಗಳು ಮತ್ತೆ ಸೇರಿ ಸಭೆ ನಡೆಸಲಿದ್ದು, ಈ ಮೂಲಕ ಎರಡು ದಿನಗಳ ಕಾನ್ಸಿಸ್ಟರಿಯು ಮುಕ್ತಾಯಗೊಳ್ಳಲಿದೆ.
