ಸಂತ ಪೌಲರ ಬಸಿಲಿಕಾದಲ್ಲಿ ಜಗದ್ಗುರು ಲಿಯೋರವರ ಮೊಸಾಯಿಕ್ ಭಾವಚಿತ್ರ ಸಿದ್ಧವಾಗಿದೆ.
ವ್ಯಾಟಿಕನ್ ವರದಿ
ವಾಟಿಕನ್‌ನ ಸಂತ ಪೇತ್ರರ ಫ್ಯಾಬ್ರಿಕ್‌ಗೆ ಸೇರಿದ ವಾಟಿಕನ್ ಮೋಸಾಯಿಕ್ ಸ್ಟುಡಿಯೋವು ಜಗದ್ಗುರು XIVನೇ ಲಿಯೋರವರಿಗೆ ಮೀಸಲಾದ ಮೋಸಾಯಿಕ್ ಪದಕಚಿತ್ರವನ್ನು ಪೂರ್ಣಗೊಳಿಸಿದೆ ಎಂದು ಬುಧವಾರ ಜಗದ್ಗುರುಗಳು ಅವರ ಪತ್ರಿಕಾ ಕಚೇರಿಯಲ್ಲಿ ಪ್ರಕಟಿಸಿದೆ. ಈ ಮೋಸಾಯಿಕ್ ಚಿತ್ರವನ್ನು ಜಗದ್ಗುರುಗಳ ಪರಂಪರೆಯ ಪ್ರಕಾರ ಸಿದ್ಧಪಡಿಸಲಾಗಿದೆ.
ಪ್ರತಿ ಜಗದ್ಗುರುಗಳ ಆಯ್ಕೆ ಬಳಿಕ ಅನುಸರಿಸಲಾಗುವ ಪ್ರಾಚೀನ ಸಂಪ್ರದಾಯದಂತೆ, ಜಗದ್ಗುರು XIVನೇ ಲಿಯೋರವರ ಆಯ್ಕೆಯಾದ ಸುಮಾರು ಎಂಟು ತಿಂಗಳುಗಳ ನಂತರ, ಸಂತ ಪೌಲರ ಬಸಿಲಿಕೆಗೆ ಅಳವಡಿಸಲು ಈ ಮೋಸಾಯಿಕ್ ಚಿತ್ರವನ್ನು ಪೂರ್ಣಗೊಳಿಸಲಾಗಿದೆ. ಈ ಕಾರ್ಯವನ್ನು ಬಸಿಲಿಕಾದ ಮಹಾಧ್ಯಕ್ಷರಾದ ಕಾರ್ಡಿನಲ್ ಜೇಮ್ಸ್ ಮೈಕೆಲ್ ಹಾರ್ವಿರವರ ವಿನಂತಿಯ ಮೇರೆಗೆ ಕೈಗೊಳ್ಳಲಾಯಿತು.
137 ಸೆಂಟಿಮೀಟರ್ ವ್ಯಾಸವಿರುವ ಈ ವೃತ್ತಾಕಾರದ ಮೋಸಾಯಿಕ್ ಚಿತ್ರವನ್ನು ಸೇಂಟ್ ಪೀಟರ್ ಫ್ಯಾಬ್ರಿಕ್ ಸ್ಟುಡಿಯೋದಲ್ಲಿ ಲೋಹದ ಆಧಾರ ರಚನೆಯ ಮೇಲೆ ಗಾಜಿನ ಎನಾಮೆಲ್‌ಗಳು ಮತ್ತು ಬಂಗಾರದ ಅಲಂಕಾರವನ್ನು ಬಳಸಿ ನಿರ್ಮಿಸಲಾಗಿದೆ. ಮೋಸಾಯಿಕ್‌ನ ಪ್ರತ್ಯೇಕ ತುಂಡುಗಳನ್ನು ಪ್ರಾಚೀನ ಕಟ್-ಮೋಸಾಯಿಕ್ ತಂತ್ರದ ಮೂಲಕ ತಯಾರಿಸಿ, ವಾಟಿಕನ್ ಪರಂಪರೆಯ ತೈಲ ಆಧಾರಿತ ಮ್ಯಾಸ್ಟಿಕ್ ಬಳಸಿ ಅಳವಡಿಸಲಾಗಿದೆ.
ಈ ಕೃತಿಯ ನಿರ್ಮಾಣಕ್ಕೆ ಮಾಸ್ಟರ್ ರೊಡೋಲ್ಫೊ ಪಾಪಾರವರು ತಯಾರಿಸಿದ ತೈಲ ಬಣ್ಣದ ಪೂರ್ವ ಚಿತ್ರಣ (ಸ್ಕೆಚ್) ಆಧಾರವಾಗಿದೆ. ಮೋಸಾಯಿಕ್‌ಗೆ ಅನುವಾದಗೊಳ್ಳುವಂತೆ ವಿಶೇಷವಾಗಿ ಕಲ್ಪಿಸಿದ ಈ ಕ್ಯಾನ್‌ವಾಸ್ ಮೇಲಿನ ಚಿತ್ರವು ಮೋಸಾಯಿಕ್‌ನಷ್ಟೇ ಗಾತ್ರದಲ್ಲಿದೆ.
ಜಗದ್ಗರು XIVನೇ ಲಿಯೋರವರ ಮೋಸಾಯಿಕ್ ಚಿತ್ರವನ್ನು ಬಸಿಲಿಕಾದ ಬಲ ನೇವ್‌ನಲ್ಲಿ, ಪೋಪ್ ಫ್ರಾನ್ಸಿಸ್ ರವರ ಚಿತ್ರಕ್ಕೆ ಸಮೀಪವಾಗಿ, ಸುಮಾರು 13 ಮೀಟರ್ ಎತ್ತರದಲ್ಲಿ ಅಳವಡಿಸಲಾಗುತ್ತದೆ. ಅದೇ ಸಮಯದಲ್ಲಿ, ಈ ಮೋಸಾಯಿಕ್‌ಗೆ ಆಧಾರವಾದ ಬಣ್ಣದ ಚಿತ್ರಣವನ್ನು ವಾಟಿಕನ್‌ನ ಸಂತ ಪೇತ್ರರ ಫ್ಯಾಬ್ರಿಕ್‌ನಲ್ಲಿ, ಇತರ ಎಲ್ಲಾ ಜಗದ್ಗುರುಗಳ ಚಿತ್ರಗಳೊಂದಿಗೆ ಸಂರಕ್ಷಿಸಲಾಗುತ್ತದೆ.
