ಜಗದ್ಗುರುಗಳು ವ್ಯಾಟಿಕನ್ ಸಿಟಿ ರಾಜ್ಯದ ಫ್ಲೊರೆರಿಯಾ (ಹೂವಿನ ವಿಭಾಗ) ಮತ್ತು ಭವನ ಕಚೇರಿಯ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.. ಜಗದ್ಗುರುಗಳು ವ್ಯಾಟಿಕನ್ ಸಿಟಿ ರಾಜ್ಯದ ಫ್ಲೊರೆರಿಯಾ (ಹೂವಿನ ವಿಭಾಗ) ಮತ್ತು ಭವನ ಕಚೇರಿಯ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು..  (@VATICAN MEDIA )

ಜಗದ್ಗುರುಗಳು ವಾಟಿಕನ್ ಸಿಬ್ಬಂದಿಯ ನಿಶ್ಶಬ್ದ ಮತ್ತು ಅಮೂಲ್ಯ ಸೇವೆಗೆ ಧನ್ಯವಾದಗಳನ್ನು ಅರ್ಪಿಸಿದರು

ತ್ರಿಕಾಲ ಪ್ರಾರ್ಥನೆಯ ಸಂದೇಶಕ್ಕೆ ಮುನ್ನ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಪುಷ್ಪಾಲಂಕಾರ (ಫ್ಲೋರಿಸ್ಟ್) ಕಚೇರಿ ಮತ್ತು ಕಟ್ಟಡ ಸೇವೆಗಳ ನಿರ್ದೇಶಕರು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭ ಅವರು, ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಸಂಪೂರ್ಣ ಅರ್ಥ ಮತ್ತು ಮೌಲ್ಯವನ್ನು ನೀಡುವುದು ವಿಶ್ವಾಸ ಮತ್ತು ಪ್ರಾರ್ಥನೆಯೇ ಎಂಬುದನ್ನು ನೆನಪಿಟ್ಟುಕೊಳ್ಳುವಂತೆ ಅವರಿಗೆ ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಪುಷ್ಪಾಲಂಕಾರ ಕಚೇರಿ ಮತ್ತು ಕಟ್ಟಡ ಸೇವೆಗಳ ನಿರ್ದೇಶಕರು ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡುತ್ತ, ವ್ಯಾಟಿಕನ್ ನಗರದಲ್ಲಿ ಶಿಸ್ತು, ಗೌರವ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಅವರು ಸಲ್ಲಿಸುತ್ತಿರುವ ಸೇವೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಜೂಬಿಲಿ ವರ್ಷದ ಅವಧಿಯಲ್ಲಿ ಅವರು ತೋರಿದ ಬದ್ಧತೆ ಮತ್ತು ಹೊಣೆಗಾರಿಕೆಯನ್ನು ವಿಶೇಷವಾಗಿ ಪ್ರಶಂಸಿಸಿದರು.

ಈ ಸಿಬ್ಬಂದಿಯ ನಿಷ್ಠಾವಂತ ಸೇವೆಯಿಂದಾಗಿ ಲಕ್ಷಾಂತರ ಭಕ್ತರು ಸಂತ ಪೇತ್ರರ ಮಹಾದೇವಾಲಯದ ಪವಿತ್ರ ಬಾಗಿಲು ಮೂಲಕ ಕ್ರಮಬದ್ಧವಾಗಿ ಮತ್ತು ಶಾಂತ ಮನಸ್ಸಿನಿಂದ ಯಾತ್ರೆ ಮಾಡುವ ಅವಕಾಶ ಪಡೆದರು ಎಂದು ಜಗದ್ಗುರುಗಳು ಹೇಳಿದರು. ಅವರ ದೈವಾರಾಧನ ವಿಧಿ ಆಚರಣೆಗಳು, ಸಾರ್ವಜನಿಕ ಸಭೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಫಲಪ್ರದವಾಗಿ ಭಾಗವಹಿಸಲು ಸಾಧ್ಯವಾಯಿತು ಎಂದು ಅವರು ಸೂಚಿಸಿದರು.

ಭವಿಷ್ಯದತ್ತ ಗಮನಹರಿಸುತ್ತಾ, ಜಗದ್ಗುರುಗಳು ತಾಂತ್ರಿಕ ಮತ್ತು ಸಂಪನ್ಮೂಲಗಳ ಸೇವೆಗಳ ನಿರಂತರ ಸುಧಾರಣೆ ಹಾಗೂ ವ್ಯಾಟಿಕನ್‌ನ ವಿವಿಧ ಸ್ಥಳಗಳ ಸಂರಕ್ಷಣೆ ವಿಶೇಷವಾಗಿ ಜಗದ್ಗುರುಗಳೊಂದಿಗೆ ಸಭೆ ಮತ್ತು ಪ್ರಾರ್ಥನೆಗೆ ಮೀಸಲಾದ ಸ್ಥಳಗಳ ನಿವ೯ಹಣೆ ಈ ಎಲ್ಲ ಕಾರ್ಯಗಳಿಗೆ ಉತ್ತೇಜನ ನೀಡಿದರು. ಈ ಸ್ಥಳಗಳ ಗೌರವ ಮತ್ತು ಕಟ್ಟಡಗಳ ಸಮಗ್ರತೆ ಭಕ್ತರ ಭಕ್ತಿಭಾವನೆ ಮತ್ತು ಧರ್ಮ ಸಭೆಯ ಧರ್ಮೋಪದೇಶಕ ಗುರಿಗೆ ಬೆಂಬಲ ನೀಡುವುದರಲ್ಲಿ ಅತೀ ಮಹತ್ವ ಹೊಂದಿದೆ ಎಂದು ಅವರು ವಿವರಿಸಿದರು.

ಸಂತ ಪೇತ್ರರ ಮಹಾದೇವಾಲಯವು ಕೇವಲ ಐತಿಹಾಸಿಕ ಸ್ಮಾರಕವಲ್ಲ, ಆದರೆ ಅದು ಧ್ಯಾನ, ಮೌನ ಮತ್ತು ಆತ್ಮಿಕ ಆಶ್ಚರ್ಯದ ಪವಿತ್ರ ದೇವಾಲಯವಾಗಿದ್ದು, ಅದನ್ನು ವಿಶೇಷವಾಗಿ ರಕ್ಷಿಸಬೇಕಾಗಿದೆ ಎಂದು ಜಗದ್ಗುರುಗಳು ಒತ್ತಿ ಹೇಳಿದರು. ಅದರ ಮುಂಭಾಗದಲ್ಲಿರುವ ಚೌಕವು ತನ್ನ ಸ್ತಂಭಸಾಲೆಗಳ ಮೂಲಕ ಎಲ್ಲರನ್ನೂ ಆಲಿಂಗಿಸುವಂತಿದ್ದು, ಅದು ನಮ್ಮ ಆತಿಥ್ಯ ಮತ್ತು ಸ್ವಾಗತದ ಗುರುತಿನ ಚೀಟಿಯಂತೆ ಕಾರ್ಯನಿರ್ವಹಿಸುತ್ತದೆ ಎಂದರು.

ಜಗದ್ಗುರು XIVನೇ ಲಿಯೋರವರು ಸಿಬ್ಬಂದಿಯನ್ನು ತಮ್ಮ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವಾಗ, ಆ ಸ್ಥಳಗಳಿಗೆ ಬರುವ ಪ್ರತಿಯೊಬ್ಬರಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದರು. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಸಂಪೂರ್ಣ ಅರ್ಥ ಮತ್ತು ಮೌಲ್ಯವನ್ನು ನೀಡುವುದು ವಿಶ್ವಾಸ ಮತ್ತು ಪ್ರಾರ್ಥನೆಯೇ ಎಂದು ಅವರು ಹೇಳಿದರು. ಈ ಕೆಲಸವು ಜಗದ್ಗುರುಗಳ ಪ್ರೇಷಿತರ ಮಿಷನ್‌ಗೆ ನಿಶ್ಶಬ್ದವಾದರೂ ಅಮೂಲ್ಯ ಸೇವೆಯಾಗಿದ್ದು, ವ್ಯಾಟಿಕನ್ ಗವರ್ನರೇಟ್ ಮತ್ತು ಮೂಲಸೌಕರ್ಯ ಹಾಗೂ ಸೇವೆಗಳ ನಿರ್ದೇಶನಾಲಯದ ಮಹತ್ವದ ಭಾಗವಾಗಿದೆ ಎಂದು ಅವರು ಪ್ರಶಂಸಿಸಿದರು.

ಕೊನೆಗೆ, ನಾವು ಪ್ರತಿಯೊಬ್ಬರೂ ವಿಶೇಷವಾಗಿ ಪರೀಕ್ಷೆಯ ಸಮಯಗಳಲ್ಲಿ ಒಂದೇ ದೇಹದ ಅಂಗಗಳೆಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಜಗದ್ಗುರುಗಳು ನೆನಪಿಸಿದರು. ನಮ್ಮ ಧ್ಯೇಯವು ಬಾಲಯೇಸುವಿನ ಆಜ್ಞೆಯಂತೆ ಸುವಾರ್ತೆಗೆ ಸಾಕ್ಷಿಯಾಗುವುದೇ ಎಂದು ಅವರು ಒತ್ತಿ ಹೇಳಿದರು.

08 ಫೆಬ್ರವರಿ 2026, 16:13