2026ರ ಜನವರಿ 15ರಂದು ವ್ಯಾಟಿಕನ್‌ನಲ್ಲಿ ಕ್ರಾನ್ಸ್–ಮೊಂಟಾನಾ ಅಗ್ನಿ ಅವಘಡದ ಬಲಿದಾನಿಗಳ ಕುಟುಂಬಗಳನ್ನು ಜಗದ್ಗುರು  ಲಿಯೋರವರು ಭೇಟಿಯಾದರು 2026ರ ಜನವರಿ 15ರಂದು ವ್ಯಾಟಿಕನ್‌ನಲ್ಲಿ ಕ್ರಾನ್ಸ್–ಮೊಂಟಾನಾ ಅಗ್ನಿ ಅವಘಡದ ಬಲಿದಾನಿಗಳ ಕುಟುಂಬಗಳನ್ನು ಜಗದ್ಗುರು ಲಿಯೋರವರು ಭೇಟಿಯಾದರು  (@Vatican Media)

ಜಗದ್ಗುರು XIVನೇ ಲಿಯೋರವರು ಕ್ರಾನ್ಸ್ ಮೋಂಟಾನಾ ಅಗ್ನಿ ದುರಂತದ ಒಂದು ತಿಂಗಳ ಸ್ಮರಣೆಯಲ್ಲಿ ಬಾಧಿತರಿಗೆ ಸಾಂತ್ವನ ವ್ಯಕ್ತಪಡಿಸಿದ್ದಾರೆ

ಕ್ರಾನ್ಸ್ ಮೋಂಟಾನಾದಲ್ಲಿ ಸಂಭವಿಸಿದ ಮಾರಕ ಅಗ್ನಿ ದುರಂತದ ಒಂದು ತಿಂಗಳ ಸ್ಮರಣಾರ್ಥ ನಡೆಯುವ ಕಾರ್ಯಕ್ರಮಕ್ಕೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಬಾಧಿತರು ಹಾಗೂ ಅವರ ಪ್ರಿಯಜನರಿಗೆ ಸಾಂತ್ವನ ನೀಡುತ್ತಾ, ಕ್ರಿಸ್ತನಲ್ಲಿ ಯಾವುದೂ ಅಂತ್ಯವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಒಂದು ಉತ್ತಮ ದಿನ ಖಂಡಿತವಾಗಿಯೂ ಬರಲಿದೆ ಆ ದಿನದಲ್ಲಿ ಅವರು ಸಂತೋಷವನ್ನು ಅನುಭವಿಸುವರು ಮತ್ತು ತಮ್ಮ ಪ್ರಿಯವಾದವರ ಸಮೀಪತೆಯನ್ನು ಮತ್ತೊಮ್ಮೆ ಅನುಭವಿಸುವರು ಎಂದು ತಿಳಿಸಿದ್ದಾರೆ.

ವ್ಯಾಟಿಕನ್ ವರದಿ

ಕ್ರಾನ್ಸ್–ಮೋಂಟಾನಾ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಜನವರಿ 1ರಂದು ಸಂಭವಿಸಿದ ಭೀಕರ ಅಗ್ನಿ ದುರಂತದ ಒಂದು ತಿಂಗಳ ಸ್ಮರಣಾರ್ಥ ಜಗದ್ಗುರು XIVನೇ ಲಿಯೋರವರು ಬರೆದ ಸಂದೇಶದಲ್ಲಿ, ತಾನು ಮತ್ತು ಸಮಸ್ತ ಧರ್ಮ ಸಭೆಯ ಬಾಧಿತರೊಂದಿಗೆ ಆತ್ಮೀಯ ಸಮೀಪತೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ತಾಯಿಯಂತೆ ಕಾಳಜಿ ವಹಿಸುವ ಧರ್ಮ ಸಭೆ ಸಾಧ್ಯವಾದಷ್ಟು ಈ ನೋವಿನ ಭಾರವನ್ನು ಅವರೊಂದಿಗೆ ಹೊರುವುದಾಗಿ ಹಾಗೂ ಈ ಪರೀಕ್ಷೆಯ ಸಮಯದಲ್ಲಿ ಅವರ ವಿಶ್ವಾಸವನ್ನು ಬಲಪಡಿಸಲು ಯೇಸು ಕ್ರಿಸ್ತನಿಗೆ ಪ್ರಾರ್ಥಿಸುವುದಾಗಿ ಅವರು ಹೇಳಿದರು.

ಈ ದುರಂತದಲ್ಲಿ ಕನಿಷ್ಠ 40 ಜನರು ಮೃತಪಟ್ಟಿದ್ದು, ಸುಮಾರು 120 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನವರಿ 15ರಂದು ಜಗದ್ಗುರು XIVನೇ ಲಿಯೋರವರು ವಾಟಿಕನ್‌ನಲ್ಲಿ ಅಗ್ನಿ  ಸ್ಫೋಟದಿಂದ ಮೃತಪಟ್ಟವರ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ನೀಡಿದ್ದರು. ತಮ್ಮ ಇತ್ತೀಚಿನ ಸಂದೇಶದಲ್ಲಿ ಅವರು ಬಾಧಿತರ ದುಃಖವನ್ನು ಗುರುತಿಸಿ, ಯಾಜಕರು ಮತ್ತು ಕ್ರೈಸ್ತ ಸಮುದಾಯಗಳೊಂದಿಗೆ ಸೇರಿ, ದುಃಖವನ್ನು ಜಯಿಸಲು ಮತ್ತು ಧೈರ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಸಹೋದರತ್ವ ಮತ್ತು ಆತ್ಮೀಯ ಬೆಂಬಲವನ್ನು ಅವರು ಕಂಡುಕೊಳ್ಳಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಜಗದ್ಗುರುಗಳು ಅವರ ನೋವು, ಗೊಂದಲ  ತ್ಯಜಿಸಲ್ಪಟ್ಟಿದ್ದೇವೆ ಎಂಬ ಭಾವನೆಯನ್ನು ಒಪ್ಪಿಕೊಂಡು, ಅವರನ್ನು ದುಃಖಿತೆ ಮಾತೆ ಮರಿಯಮ್ಮನವರಿಗೆ ಒಪ್ಪಿಸುತ್ತೇನೆ ಎಂದು ಬರೆದಿದ್ದಾರೆ. ಮಾತೆ ಮರಿಯಮ್ಮನವರನ್ನು  ತನ್ನ ಹೃದಯದ ಸಮೀಪದಲ್ಲಿ ಇಟ್ಟುಕೊಂಡು, ಶಿಲುಬೆಯತ್ತ ನೋಡುವಂತೆ ಆಹ್ವಾನಿಸುತ್ತಾರೆ ಅಲ್ಲಿ ಅವಳ ಪುತ್ರ ಯೇಸು ದುಃಖ ಅನುಭವಿಸಿ ತನ್ನ ಜೀವವನ್ನು ಅರ್ಪಿಸಿದರು ಎಂದು ಅವರು ಹೇಳಿದರು.

ಈ ಮೂಲಕ ಪ್ರಭು ಇಂದು ಅನುಭವಿಸುತ್ತಿರುವ ದುಃಖದಲ್ಲಿ ಪಾಲುಗಾರನಾಗಿರುವನು ಮತ್ತು ಅವರೊಂದಿಗೆ ತನ್ನ ಮಹಿಮೆಯುತ ಹಾಗೂ ಆಶೀರ್ವದಿತ ಪುನರುತ್ಥಾನದಲ್ಲಿಯೂ ಪಾಲುಗಾರನಾಗುವನು ಎಂದು ಜಗದ್ಗುರುಗಳು ತಿಳಿಸಿದರು. ಯೇಸು ನಿಜವಾಗಿಯೂ ಪುನರುತ್ಥಾನಗೊಂಡಿದ್ದಾರೆ! ಎಂಬ ಸತ್ಯವನ್ನು ಪವಿತ್ರ ಧರ್ಮ ಸಭೆ ವಿಶ್ವಾಸ ಮತ್ತು ಶಾಂತಿಯಿಂದ ಘೋಷಿಸುತ್ತದೆ ಎಂದು ಅವರು ಹೇಳಿದರು.

 ಈ ನಂಬಿಕೆಯೊಂದಿಗೆ, ಅವರು ಕಳೆದುಕೊಂಡ ತಮ್ಮ ಪ್ರಿಯರನ್ನು ಒಂದು ದಿನ ಮತ್ತೆ ಕಾಣುವ ನಿರೀಕ್ಷೆಯನ್ನು ಕಾಪಾಡಿಕೊಳ್ಳಬೇಕೆಂದು ಜಗದ್ಗುರುಗಳು ಹೇಳಿದರು. ಭೂಮಿಯ ಮೇಲೆಯೂ ಅವರಿಗಾಗಿ ಹೊಸ ದಿನ ಉದಯಿಸುವುದು, ಮತ್ತು ಅವರ ಹೃದಯಗಳಲ್ಲಿ ಸಂತೋಷ ಮತ್ತೆ ಮರಳುವುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

 ಸಂತ ಪೌಲರು ರೋಮನ್ನರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ, ಮರಣವಾಗಲಿ ಅಥವಾ ಜೀವನವಾಗಲಿ, ವರ್ತಮಾನವಾಗಲಿ ಅಥವಾ ಭವಿಷ್ಯವಾಗಲಿ, ಪರೀಕ್ಷೆಗಳಾಗಲಿ ಅಥವಾ ನೋವಾಗಲಿ ಯಾವುದೂ ಕ್ರಿಸ್ತನಲ್ಲಿ ಇರುವ ದೇವರ ಪ್ರೀತಿಯಿಂದ ಅವರನ್ನು ಮತ್ತು ಅವರ ಪ್ರಿಯರನ್ನು ಬೇರ್ಪಡಿಸಲಾರದು ಎಂದು ಜಗದ್ಗುರುಗಳು ದೃಢವಾಗಿ ನೆನಪಿಸಿದರು. ಅವರು ಹಂಚಿಕೊಂಡ ಸುಂದರ ಮತ್ತು ಸಂತೋಷದ ಕ್ಷಣಗಳೇನೂ ಶಾಶ್ವತವಾಗಿ ಕಳೆದುಹೋಗುವುದಿಲ್ಲ ಯಾವುದೂ ಅಂತ್ಯವಾಗಿಲ್ಲ ಎಂದು ಹೇಳಿದರು.

ಈ ದುಃಖಮಯ ದಿನಗಳಲ್ಲಿ ಮಾತೆ ಮರಿಯಮ್ಮನವರು ಶಿಲುಬೆಯತ್ತ ನೋಡಲು ಆಹ್ವಾನಿಸಿದರೂ, ಅವರು ಸದಾ ಪ್ರಕಾಶಮಾನವಾದ ಸ್ವರ್ಗದತ್ತವೂ ನೋಡಲು ಕರೆಯುತ್ತಾರೆ ಎಂದು ಜಗದ್ಗುರುಗಳು ಹೇಳಿದರು. ಯೇಸು ನೀಡುವ, ಸ್ವರ್ಗದಲ್ಲಿ ದೃಢವಾಗಿ ನೆಲೆಗೊಂಡಿರುವ ನಿರೀಕ್ಷೆಯನ್ನು ಗಟ್ಟಿಯಾಗಿ ಹಿಡಿದರೆ, ಮುಂದುವರೆಯಲು ಮತ್ತು ತಮ್ಮ ಜೀವನ ಪಥವನ್ನು ಸಾಗಿಸಲು ಅಗತ್ಯವಾದ ಶಕ್ತಿ ಮತ್ತು ಧೈರ್ಯವನ್ನು ಅವರು ಪಡೆಯುವರು ಎಂದು ಜಗದ್ಗುರು XIVನೇ ಲಿಯೋರವರು ಭರವಸೆ ನೀಡಿದರು.

01 ಫೆಬ್ರವರಿ 2026, 00:00