ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಪೋರ್ಚುಗಲ್ ಗಣರಾಜ್ಯದ ಅಧ್ಯಕ್ಷರನ್ನು ಬರಮಾಡಿಕೊಂಡರು. ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಪೋರ್ಚುಗಲ್ ಗಣರಾಜ್ಯದ ಅಧ್ಯಕ್ಷರನ್ನು ಬರಮಾಡಿಕೊಂಡರು.  (ANSA)

ಜಗದ್ಗುರು XIVನೇ ಲಿಯೋರವರು ಪೋಚು೯ಗಲ್ ಗಣರಾಜ್ಯದ ರಾಷ್ಟ್ರಪತಿಯನ್ನು ಸ್ವೀಕರಿಸಿದರು

ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಪೋಚು೯ಗಲ್ ಗಣರಾಜ್ಯದ ರಾಷ್ಟ್ರಪತಿ ಮಾರ್ಸೆಲೊ ರೆಬೆಲೊ ದೆ ಸೌಸಾರವರನ್ನು ಆತ್ಮೀಯವಾಗಿ ಭೇಟಿಯಾಗಿ ಸ್ವೀಕರಿಸಿದರು

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಪೋಚ೯ಗಲ್ ಗಣರಾಜ್ಯದ ರಾಷ್ಟ್ರಪತಿ ಮಾರ್ಸೆಲೊ ರೆಬೆಲೊ ದೆ ಸೌಸಾರವರನ್ನು ಭೇಟಿಯಾಗಿ ಸ್ವೀಕರಿಸಿದರು.

ಅನಂತರ ರಾಷ್ಟ್ರಪತಿಗಳು ವ್ಯಾಟಿಕನ್‌ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪ್ಯಾರೋಲಿನ್ ಹಾಗೂ ರಾಜ್ಯಗಳೊಂದಿಗೆ ಸಂಬಂಧಗಳ ಉಪ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ರವರನ್ನು ರಾಜ್ಯ ಕಾರ್ಯಾಲಯದಲ್ಲಿ ಭೇಟಿಯಾದರು. ಆ ಸಂದರ್ಭದಲ್ಲಿ ಸ್ಟಾರ್ಮ್ ಕ್ರಿಸ್ಟಿನ್‌ನಿಂದ ಉಂಟಾದ ನೋವಿನ ಪರಿಣಾಮಗಳು ಮತ್ತು ಸಂಭವಿಸಿದ ಹಾನಿಯ ಕುರಿತು ವಿಶೇಷ ಗಮನ ಹರಿಸಲಾಯಿತು.

ಕೊನೆಯಲ್ಲಿ, ಪ್ರಕಟಣೆ ತಿಳಿಸಿದಂತೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ಕುರಿತೂ ಚರ್ಚೆ ನಡೆಯಿತು. ವಿಶೇಷವಾಗಿ ಪೋಚು೯ಗೀಸ್ ಭಾಷಾಭಾಷಿ ರಾಷ್ಟ್ರಗಳ ಕುರಿತು ಗಮನ ಸೆಳೆಯಲಾಗಿದ್ದು, ವಿಶ್ವದಲ್ಲಿ ಶಾಂತಿಗೆ ಬೆಂಬಲವಾಗಿ ನಿರಂತರ ಬದ್ಧತೆಯ ಅಗತ್ಯತೆಯನ್ನು ಒತ್ತಿ ಹೇಳಲಾಯಿತು.

02 ಫೆಬ್ರವರಿ 2026, 16:47