Papa Leone XIV a S.Maria Maggiore sulla tomba di Francesco

ಜಗದ್ಗರು XIVನೇ ಲಿಯೋರವರು ರೋಮ್‌ನ ಒಸ್ಟಿಯಾದ ಧರ್ಮ ಕೇಂದ್ರಕ್ಕೆ ಮೊದಲ ಧರ್ಮಾಧೀಕಾರಿಗಳ ಭೇಟಿ

ನಗರದ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ಒಸ್ಟಿಯಾ ಲಿಡೊದ ಸಂತ ಮರಿಯಾ ರೆಜಿನಾ ಪಾಚಿಸ್ ರೋಮನ್ ಧರ್ಮ ಕೇಂದ್ರಕ್ಕೆ, ಜಗದ್ಗುರು XIVನೇ ಲಿಯೋರವರ ಮೊದಲ ಧರ್ಮಾಧಿಕಾರಿಗಳ ಭೇಟಿಯನ್ನು ಸ್ವೀಕರಿಸಲಿರುವ ಧರ್ಮ ಕೇಂದ್ರವಾಗಿದೆ. ಇದು ಸ್ಥಳೀಯ ಕಥೋಲಿಕ ಸಮುದಾಯಕ್ಕೆ ವಿಶೇಷ ಕ್ಷಣವಾಗಲಿದೆ. ಜಗದ್ಗರುಗಳು ಫೆಬ್ರವರಿ 15, ಭಾನುವಾರ, ಆ ಧರ್ಮ ಕೇಂದ್ರಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ.

ವ್ಯಾಟಿಕನ್ ವರದಿ

 

ಕಥೋಲಿಕ ಪ್ರೇಷಿತರ ಸಂಘದ ಪಲ್ಲೊಟ್ಟಿನ್ ಯಾಜಕರಿಗೆ ಒಪ್ಪಿಸಲಾದ ಈ ಧರ್ಮ ಕೇಂದ್ರ ರೋಮ್ ನಗರದ ದಕ್ಷಿಣ–ಪಶ್ಚಿಮ ಭಾಗದ ಸಮುದ್ರ ತೀರದಲ್ಲಿರುವ ಒಸ್ಟಿಯಾ ಲಿಡೊದಲ್ಲಿನ ಪಿಯಾಜ್ಜಾ ಸಾಂತಾ ಮರಿಯಾ ರೆಜಿನಾ ಪಾಚಿಸ್‌ನಲ್ಲಿ ಇದೆ. ಜಗದ್ಗರು XIVನೇ ಲಿಯೋರವರು ಸಂಜೆ 4:00 ಗಂಟೆಗೆ ಆಗಮಿಸಲಿದ್ದಾರೆ. ತಮ್ಮ ಭೇಟಿಯನ್ನು ಅವರು ಮೊದಲು ಧರ್ಮ ಸಭೆಯ ಹಿಂಭಾಗದ ಆವರಣದಲ್ಲಿ ಸೇರಲಿರುವ ಸುಮಾರು 400 ಧರ್ಮೋಪದೇಶ ಮಕ್ಕಳ ಮತ್ತು ಯುವಕರೊಂದಿಗೆ ಭೇಟಿಯಾಗಿ ಆರಂಭಿಸಲಿದ್ದಾರೆ. ನಂತರ ಧರ್ಮ ಕೇಂದ್ರದ ಜಿಮ್ನೇಷಿಯಂನಲ್ಲಿ ಸೇರಲಿರುವ ಇನ್ನೂ 400 ಸಮುದಾಯದ ಸದಸ್ಯರನ್ನು — ವೃದ್ಧರು, ರೋಗಿಗಳು, ಬಡವರು ಮತ್ತು ಧರ್ಮ ಸಭೆಯ ಸ್ಥಳೀಯ ದಾನಧರ್ಮ ಸಂಸ್ಥೆಯಾದ  ಸ್ವಯಂಸೇವಕರನ್ನು ಅವರು ಭೇಟಿಯಾಗಿ ಆಶೀರ್ವದಿಸಲಿದ್ದಾರೆ.

ರೋಮ್ ವಿಕಾರಿಯೇಟ್ ನೀಡಿದ ವಿವರಗಳ ಪ್ರಕಾರ, ಸಂಜೆ 5:00 ಗಂಟೆಗೆ ಜಗದ್ಗುರುಗಳು ಪರಿಶುದ್ಧ ಬಲಿಪೂಜೆಯನ್ನು ಅರ್ಪಿಸುವುದರೊಂದಿಗೆ ಈ ಧರ್ಮಾಧಿಕಾರಿಗಳ ಭೇಟಿ ಶಿಖರಕ್ಕೇರುವುದು. ಅವರೊಂದಿಗೆ ಕಾರ್ಡಿನಲ್ ವಿಕಾರ್ ಬಾಲ್ಡೊ ರೇಯ್ನಾ; ರೋಮ್ ಧರ್ಮಪ್ರಾಂತ್ಯದ ದಕ್ಷಿಣ ವಲಯದ ಬಿಷಪ್ ಮತ್ತು ಉಪ-ರೀಜೆಂಟ್ ರೆನಾಟೋ ತರಾಂಟೆಲ್ಲಿ ಬಚ್ಚಾರಿ; ಹಾಗೂ ಧರ್ಮ ಕೇಂದ್ರದ ಯಾಜಕರಾದ ಫಾ. ಜಿಯೋವನ್ನಿ ವಿನ್ಚೆನ್ಸೊ ಪತನೇ ಸಂಯುಕ್ತವಾಗಿ ಬಲಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಸ್ಟಿಯಾದ ಇತರ ಧರ್ಮ ಕೇಂದ್ರದ ಯಾಜಕರು, ಇಟಲಿಯ ಗಾರ್ದಿಯಾ ದಿ ಫಿನಾಂಝಾ ಸಂಸ್ಥೆಯ ಚಾಪ್ಲೇನ್ ಮತ್ತು ಸ್ಥಳೀಯ ಯಾಜಕರುಗಳು ಹಾಜರಿರಲಿದ್ದಾರೆ. ಬಲಿ ಪೂಜೆಯ ಆಚರಣೆಯ ನಂತರ, ಜಗದ್ಗುರು ಧರ್ಮ ಕೇಂದ್ರದ ಧರ್ಮಾಧಿಕಾರಿಗಳ ಕೌನ್ಸಿಲ್ ಸದಸ್ಯರನ್ನು ಭೇಟಿಯಾಗಿ, ಹೊರಾಂಗಣದಲ್ಲಿ ದೊಡ್ಡ ಪರದೆ ಮೂಲಕ ಬಲಿಪೂಜೆಯನ್ನು ಅನುಸರಿಸಿದ ಭಕ್ತರನ್ನು ಸ್ವಾಗತಿಸಲಿದ್ದಾರೆ.

ಫಾ. ಪತನೇರವರು ಈ ಆಯ್ಕೆಯ ಪ್ರತೀಕಾತ್ಮಕ ಮಹತ್ವವನ್ನು ಉಲ್ಲೇಖಿಸಿದರು. ಈ ಧರ್ಮ ಕೇಂದ್ರದ ಶಾಂತಿಯ ರಾಣಿ ಮರಿಯಮ್ಮನವರಿಗೆ ಸಮರ್ಪಿತವಾಗಿದ್ದು, ಜಗದ್ಗುರು XIVನೇ ಲಿಯೋರವರು ತಮ್ಮ ಪೋಪ್‌ಪದದ ಆರಂಭದಿಂದಲೇ ಒತ್ತಿ ಹೇಳುತ್ತಿರುವ ನಿರಾಯುಧ ಮತ್ತು ನಿರಾಯುಧಗೊಳಿಸುವ ಶಾಂತಿ ಎಂಬ ಸಂದೇಶದೊಂದಿಗೆ ಇದು ಗಾಢವಾಗಿ ಹೋಲುತ್ತದೆ. ಒಸ್ಟಿಯಾ ರೋಮ್ ಧರ್ಮಪ್ರಾಂತ್ಯದ ಭಾಗವಾಗಿದ್ದರೂ ತನ್ನದೇ ಆದ ಪಾಲಕ ಸಂತನಾದ ಸಂತ ಆಗಸ್ತಿನ್ ರವರನ್ನು ಹೊಂದಿದೆ; ಆಗಸ್ತಿನಿಯನ್ ಆದ ಜಗದ್ಗುರು XIVನೇ ಲಿಯೋರವರು ಇದು ವಿಶೇಷ ಅರ್ಥ ಹೊಂದಿದೆ ಎಂದರು

ಜಗದ್ಗರುಗಳ ಭೇಟಿ ಘೋಷಣೆಯು ಧರ್ಮ ಕೇಂದ್ರದ ಸಮುದಾಯದಲ್ಲಿ ಅಪಾರ ಉತ್ಸಾಹವನ್ನು ಹುಟ್ಟಿಸಿದೆ. ಸಮಾನತೆಯನ್ನು ಖಾತ್ರಿಪಡಿಸಲು ಪ್ರವೇಶ ಪಾಸ್‌ಗಳನ್ನು ಲಾಟರಿ ಮೂಲಕ ವಿತರಿಸಲಾಯಿತು. ಈ ಭೇಟಿಯನ್ನು ಭಕ್ತರು ಮಹಾ ಗೌರವವಾಗಿಯೂ, ಪುನರುಜ್ಜೀವನದ ಹಾಗೂ ಆತ್ಮೀಯ ಸಿದ್ಧತೆಯ ಅವಕಾಶವಾಗಿಯೂ ಕಾಣುತ್ತಿದ್ದಾರೆ. ಹಾಸ್ಯಭರಿತವಾಗಿ ಫಾ. ಪತನೇ ಹೇಳುವಂತೆ, ಈ ಭೇಟಿ ಧರ್ಮ ಸಭೆಯ ಮತ್ತು ಸುತ್ತಮುತ್ತಲನ್ನು ಸ್ವಚ್ಛಗೊಳಿಸಿ ಸುಧಾರಿಸಲು ಒಳ್ಳೆಯ ಅವಕಾಶವನ್ನೂ ನೀಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಸಮುದಾಯವು ಈ ಭೇಟಿಯನ್ನು ಧರ್ಮಾಧ್ಯಕ್ಷರ ಸಮೀಪತೆಯ ಸಂಕೇತವಾಗಿ ನೋಡುತ್ತಿದೆ. “ಅವರು ಜಗದ್ಗುರುಗಳಾಗಿದ್ದಾರೆ,” ಎಂದು ಫಾ. ಪತನೇರವರು ಹೇಳುತ್ತಾರೆ, ಆದರೆ ನಮಗಾಗಿ ಅವರು ಮೊದಲನೆಯದಾಗಿ ನಮ್ಮ ಬಿಷಪ್ — ತನ್ನ ಧರ್ಮ ಸಭೆಗೆ ಭೇಟಿ ನೀಡುವ ಕುರಿಗಾಹಿಗಳಾಗಿದ್ದಾರೆ ಎಂದರು‌.

12 ಫೆಬ್ರವರಿ 2026, 17:18