ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಇಟಾಲಿಯನ್ ಕಾನೂನು ಜಾರಿ ಸಂಸ್ಥೆಯಾದ ಕ್ಯಾರಬಿನಿಯೇರಿಯನ್ನು ಭೇಟಿಯಾಗುತ್ತಾರೆ ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಇಟಾಲಿಯನ್ ಕಾನೂನು ಜಾರಿ ಸಂಸ್ಥೆಯಾದ ಕ್ಯಾರಬಿನಿಯೇರಿಯನ್ನು ಭೇಟಿಯಾಗುತ್ತಾರೆ  (@Vatican Media)

ಜಗದ್ಗುರು ಲಿಯೋ: ನಾವು ಕ್ರೈಸ್ತ ಸಂದೇಶದ ಮೂಲಭೂತ ಸಾರವನ್ನು ಮರುಶೋಧಿಸಬೇಕು

ಇಟಲಿಯ ಕಾನೂನು ಜಾರಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಜಗದ್ಗುರು ಲಿಯೋರವರು ತಮ್ಮ ಕರ್ತವ್ಯಗಳನ್ನು ನೇರವಾದ ಮನಸ್ಸಿನೊಂದಿಗೆ ನೆರವೇರಿಸುವ ಮಹತ್ವವನ್ನು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ಇಟಲಿಯ ಕಾನೂನು ಜಾರಿಗೆ ಸಂಬಂಧಿಸಿದ ಸಂಸ್ಥೆಯಾದ  ಅಧಿಕಾರಿಗಳನ್ನು ಸ್ವಾಗತಿಸಿದ , ರೋಮ್ ಮಹಾನಗರ ಮತ್ತು ಪ್ರಾಂತ್ಯದಾದ್ಯಂತ ಭದ್ರತೆ ಹಾಗೂ ಶಿಸ್ತನ್ನು ಕಾಪಾಡುವ ಸೇವೆಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಜೂಬಿಲಿ ವರ್ಷವು ತುಂಬಾ ಕಷ್ಟಕರವಾಗಿದ್ದರೂ, ರೋಮ್‌ನಲ್ಲಿ ವಾಸಿಸುವ ಎಲ್ಲರಿಗೂ ಯಾತ್ರಿಕರ ಸಾಕ್ಷ್ಯವು ಆತ್ಮೀಯ ಬಲ ಮತ್ತು ಉತ್ತೇಜನ ನೀಡಿದುದಾಗಿ ಅವರು ಹೇಳಿದರು.

ನಂತರ ಜಗದ್ಗುರುಗಳು ಪ್ರಾಚೀನ ಕ್ರೈಸ್ತ ಧರ್ಮದ ಆರಂಭಿಕ ದಿನಗಳನ್ನು ನೆನಪಿಸಿದರು. ಯೇಸುವಿನ ಸುವಾರ್ತೆ ಸೇನೆ ಸೇರಿದಂತೆ ವಿವಿಧ ಪರಿಸರಗಳಲ್ಲಿ ಹರಡಿತು. ಅದು ಪ್ರೀತಿ, ಕರುಣೆ ಮತ್ತು ಕ್ಷಮೆಯ ದೇವರ ಬಗ್ಗೆ ಹೊಸ ಬದುಕಿನ ಮಾರ್ಗವನ್ನು ನೀಡಿದುದಾಗಿ ಹಾಗೂ ಎಲ್ಲಾ ಜನರನ್ನು ಸಾಮಾಜಿಕ-ಜಾತಿ ಭೇದಗಳಾಚೆಗೆ ಒಗ್ಗೂಡಿಸಿದ ಸಹೋದರತ್ವವನ್ನು ರೂಪಿಸಿದುದಾಗಿ ಅವರು ವಿವರಿಸಿದರು.

ಕ್ಯಾರಬಿನಿಯೇರಿ ಸಂಸ್ಥೆಯು ಕ್ರಮ, ಆದೇಶ ಮತ್ತು ವಿಧೇಯತೆಯ ಅರ್ಥವನ್ನು ಚೆನ್ನಾಗಿ ಅರಿತಿದೆ ಎಂದು ಜಗದ್ಗುರುಗಳು ಹೇಳಿದರು. ಅದೇ ರೀತಿಯಲ್ಲಿ ಸುವಾರ್ತೆ ಶತಮಾನಗಳ ಕಾಲ ನಾಗರಿಕತೆಯ ರಚನೆ, ಮೌಲ್ಯಗಳು ಮತ್ತು ಚಿಂತನೆಯ ಮೇಲೆ ಆಳವಾದ ಪ್ರಭಾವ ಬೀರಿದರೂ, ಅದು ಹಿಂಸಾತ್ಮಕ ಕ್ರಾಂತಿಯ ಮೂಲಕ ಅಲ್ಲ, ಆದರೆ ಮನಸ್ಸಿನ ಪರಿವರ್ತನೆ ಮತ್ತು ಹೃದಯದ ಬದಲಾವಣೆಯ ಮೂಲಕ ಶಾಂತಿಯುತವಾಗಿ ನಡೆಯಿತು ಎಂದು ಅವರು ಹೇಳಿದರು.

ಈ ಸುವಾರ್ತೆಯು ದೇವರ ಮತ್ತು ಮಾನವನ ಕುರಿತು ಹೊಸ ಅರಿವನ್ನು ತಂದಿತು ಜೀವನದ ಪವಿತ್ರತೆ ಮತ್ತು ಪ್ರತಿಯೊಬ್ಬ ಮಾನವನ ಗೌರವದ ಮೇಲೆ ಸಂಪೂರ್ಣ ಗೌರವ, ಮತ್ತು ದೇವರಿಗೆ ಮಾತ್ರ ಸಲ್ಲುವ ಆರಾಧನೆ ಎಂಬ ಅರಿವು. ಇದೇ ಸಂಗತಿಗಳು ಇಂದಿನ ಜಗತ್ತಿನಲ್ಲಿಯೂ ಸಂಭವಿಸಬೇಕು ಎಂದು ಜಗದ್ಗುರುಗಳು ಪ್ರಶ್ನಿಸಿ,  ಮತ್ತು ಧರ್ಮ ಸಭೆಯ ಬೋಧನೆಗಳು ಇದನ್ನು ದೃಢಪಡಿಸುತ್ತವೆ ಎಂದು ಹೇಳಿದರು.

ಅದಕ್ಕಾಗಿ ಎಲ್ಲರೂ ಕ್ರೈಸ್ತ ಸಂದೇಶದ ಮೂಲಭೂತ ಸಾರವನ್ನು ಮತ್ತು ಪ್ರಾರಂಭಿಕ ಧರ್ಮ ಸಭೆಯ ಆತ್ಮವನ್ನು ಮರುಶೋಧಿಸಿ, ಇಂದಿನ ಸಂಕೀರ್ಣ ಜಗತ್ತಿನಲ್ಲಿ ಅದನ್ನು ಜೀವಂತಗೊಳಿಸಬೇಕೆಂದು ಜಗದ್ಗುರುಗಳು ಕರೆ ನೀಡಿದರು. ಅವರು  ಅವರ ಹೀಬ್ರಿಯರಿಗೆ ಬರೆದ ಪತ್ರದ ಮಾತುಗಳನ್ನು ನೆನಪಿಸಿದರು: ಯೇಸು ಕ್ರಿಸ್ತನು ನಿನ್ನೆ, ಇಂದು ಮತ್ತು ಸದಾಕಾಲ ಒಂದೇ ಆಗಿದ್ದಾರೆ ಎಂದು ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ಜಗದ್ಗುರುಗಳು ಕ್ಯಾರಬಿನಿಯೇರಿ  ಸದಸ್ಯರಿಗೆ, ವಿಶೇಷವಾಗಿ ವ್ಯಾಟಿಕನ್ ಮತ್ತು  ನಗರದಲ್ಲಿ ನೀಡುತ್ತಿರುವ ಸೇವೆಗೆ ಧನ್ಯವಾದಗಳನ್ನು ಹೇಳಿದರು. ಅವರು ಸದಾ ನೇರವಾದ ಮನಸ್ಸಿನಿಂದ ಕರ್ತವ್ಯವನ್ನು ನೆರವೇರಿಸಬೇಕೆಂದು ಪ್ರೋತ್ಸಾಹಿಸಿದರು ಮತ್ತು ಅವರನ್ನು ದೇವಮಾತೆಯಾದ  ವೀರ್ಗೋ ಫಿಡೆಲಿಸ್ ರವರ ರಕ್ಷಣೆಗೆ ಒಪ್ಪಿಸಿದರು. ಅವರ ಕುಟುಂಬಗಳು ಮತ್ತು ಸೇವೆಯ ಮೇಲೆಯೂ ಆಶೀರ್ವಾದವನ್ನು ನೀಡಿದರು.

13 ಫೆಬ್ರವರಿ 2026, 17:38