Il Papa a Piazza San Pietro, l'udienza generale torna all'aperto

ಜಗದ್ಗರುಗಳ ಸಾಮೂಹಿಕ ಭೇಟಿಯಲ್ಲಿ: ಧರ್ಮ ಸಭೆ ಎಂಬುದು ಗ್ರಹಿಸಬಹುದಾದ ರಹಸ್ಯವಾಗಿದೆ

ತಮ್ಮ ವಾರದ ಸಾಮಾನ್ಯ ಸಭೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ದ್ವಿತೀಯ ಮಹಾಸಭೆಯ ಡೋಗ್ಮಾಟಿಕ್ ಸಂವಿಧಾನ ಲುಮೆನ್ ಜೆಂಟಿಯಮ್ ಕುರಿತು ಮನನ ಮಾಡಿದರು. ಧರ್ಮ ಸಭೆ ಗ್ರಹಿಸಬಹುದಾದ ರಹಸ್ಯವಾಗಿದೆ ಎಂದು ಅವರು ಒತ್ತಿಹೇಳಿ, ವಿಭಜಿತ ಮಾನವಕುಲದ ಮಧ್ಯದಲ್ಲಿ ಧರ್ಮ ಸಭೆಯು ಹೊಂದಾಣಿಕೆಯ ಮತ್ತು ಸಮನ್ವಯದ ಚಿಹ್ನೆಯಾಗಿದ್ದುಕೊಂಡಿದೆ ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ತಮ್ಮ ವಾರದ ಬುಧವಾರದ ಸಾಮಾನ್ಯ ಸಭೆಯಲ್ಲಿ, ವಿಭೂತಿ ಬುಧವಾರದಂದು, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ದ್ವಿತೀಯ ಮಹಾಸಭೆಯ ಕುರಿತು ತಮ್ಮ ಉಪದೇಶಮಾಲೆಯನ್ನು ಮುಂದುವರಿಸಿದರು. ಈ ಬಾರಿ ಅವರು ಧರ್ಮ ಸಭೆಯ ಕುರಿತು ಇರುವ ಡೋಗ್ಮಾಟಿಕ್ ಸಂವಿಧಾನ  ಲುಮೆನ್ ಜೆಂಟಿಯಮ್  ಮೇಲೆ ಗಮನಹರಿಸಿದರು. ಕಳೆದ ವಾರಗಳಲ್ಲಿ ಅವರು ದೈವಿಕ ಪ್ರಕಟಣೆ ಕುರಿತು ಇರುವ ದೈ ವರ್ಬಮ್ ಕುರಿತು ಮನನ ಮಾಡಿದ್ದರು.

ಜಗದ್ಗರುಗಳು ವಿವರಿಸಿದಂತೆ, ದೇವರು ತನ್ನ ರಕ್ಷಣಾ ಯೋಜನೆಯ ಪ್ರೇಮಮಯ ರಹಸ್ಯವನ್ನು ತನ್ನ ಪುತ್ರ ಯೇಸು ಕ್ರಿಸ್ತನ ಮೂಲಕ ಮಾನವಕುಲಕ್ಕೆ ಪ್ರಕಟಿಸಿದ್ದಾನೆ. ಈ ದೈವಿಕ ರಹಸ್ಯದ ಬೆಳಕಿನಲ್ಲಿ ಮಾತ್ರ ಧರ್ಮ ಸಭೆಯ ಮೂಲ ಮತ್ತು ಗುರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ವ್ಯಾಟಿಕನ್ ದ್ವಿತೀಯ ಮಹಾಸಭೆ ಧರ್ಮ ಸಭೆಯನ್ನು ವಿವರಿಸುವಾಗ ಅದರ ಮೂಲವನ್ನು ಸ್ಪಷ್ಟಪಡಿಸಲು “ರಹಸ್ಯ” ಎಂಬ ಪದವನ್ನು ಆಯ್ಕೆಮಾಡಿತು. 1964ರ ನವೆಂಬರ್ 21ರಂದು ಅನುಮೋದಿಸಲಾದ ಲುಮೆನ್ ಜೆಂಟಿಯಮ್ ನಲ್ಲಿ ಸಂತ ಪೌಲನ ಪತ್ರಿಕೆಗಳಿಂದ ಈ ಪದವನ್ನು ತೆಗೆದುಕೊಳ್ಳಲಾಗಿದೆ. “ರಹಸ್ಯ” ಎಂದರೆ ಅರ್ಥಗರ್ಭಿತ ಅಥವಾ ಅಸ್ಪಷ್ಟ ವಿಷಯವಲ್ಲ ಬದಲಾಗಿ, ಹಿಂದೆ ಅಡಗಿದ್ದ ಸತ್ಯ ಈಗ ಪ್ರಕಟವಾಗಿರುವುದನ್ನು ಸೂಚಿಸುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ಈ ರಹಸ್ಯವು ದೇವರ ಯೋಜನೆಯನ್ನು ಸೂಚಿಸುತ್ತದೆ ಯೇಸು ಕ್ರಿಸ್ತನ ಶಿಲುಬೆಯ ತ್ಯಾಗ ಮತ್ತು ಪುನರುತ್ಥಾನದ ಮೂಲಕ ಎಲ್ಲಾ ಜನರನ್ನು ಒಂದಾಗಿಸುವ ಯೋಜನೆ. ಪವಿತ್ರಾತ್ಮನ ಶಕ್ತಿಯಿಂದ ಕ್ರಿಸ್ತನ ಕಾರ್ಯವು ಮಾನವ ಸಮಾಜದ ವಿಭಜನೆಗಳನ್ನು ಮೀರಿ ಏಕತೆಯನ್ನು ಸಾಧಿಸುತ್ತದೆ ಎಂದು ಅವರು ಹೇಳಿದರು.

ಜಗದ್ಗರುಗಳ ಅಭಿಪ್ರಾಯಪಟ್ಟಂತೆ, ಮಾನವಕುಲ ವಿಭಜನೆಯ ಸ್ಥಿತಿಯಲ್ಲಿ ಬದುಕುತ್ತಿದೆ. ಆದರೂ ಕ್ರಿಸ್ತನ ಪ್ರೇಮವು ಜನರನ್ನು ಒಂದಾಗಿಸುತ್ತದೆ. ಸುವಾರ್ತೆಯ ಘೋಷಣೆಯನ್ನು ನಂಬಿ ಆರಾಧನೆಗಾಗಿ ಸೇರಿಕೊಳ್ಳುವ ಸಮುದಾಯವು ಕ್ರಿಸ್ತನ ಪ್ರೇಮದಿಂದ ಆಕರ್ಷಿತವಾಗುತ್ತದೆ. ಇದೇ ಕಾರಣಕ್ಕೆ "ಎಕ್ಕ್ಲೇಸಿಯಾ” (ಸಭೆಗೆ ಕರೆಯಲ್ಪಟ್ಟವರು) ಎಂಬ ಪದವನ್ನು ಬಳಸಲಾಗುತ್ತದೆ.

ಹೀಗಾಗಿ ಧರ್ಮ ಸಭೆಯು‌ “ಗ್ರಹಿಸಬಹುದಾದ ರಹಸ್ಯ” ಎಂದು ಜಗದ್ಗುರುಗಳು ಒತ್ತಿಹೇಳಿದರು. ಧರ್ಮ ಸಭೆ ರಕ್ಷಣೆಯ ಯೋಜನೆಯ ಚಿಹ್ನೆಯೂ ಸಾಧನವೂ ಆಗಿದೆ ಶಿಲುಬೆಯ ಮೂಲಕ ಸ್ಥಾಪಿತವಾದ ಏಕತೆಯನ್ನು ವಿಶ್ವದ ಮುಂದೆ ಗೋಚರಿಸುವ ಚಿಹ್ನೆಯಾಗಿ ತೋರಿಸುವುದಲ್ಲದೆ, ದೇವರು ಮಾನವರನ್ನು ತನ್ನೊಂದಿಗೆ ಮತ್ತು ಪರಸ್ಪರ ಒಂದಾಗಿಸುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ.

ಕೊನೆಯಲ್ಲಿ, ವಿಭಜನೆಗಳಿಂದ ಗುರುತುಗೊಂಡಿರುವ ಈ ಲೋಕದಲ್ಲಿ ಧರ್ಮ ಸಭೆಯ ಪವಿತ್ರೀಕರಣ ಮತ್ತು ಹೊಂದಾಣಿಕೆಯ ಗುರಿಯನ್ನು ಮುಂದುವರಿಸಲು ದೇವರು ಮಾರ್ಗದರ್ಶನ ಮಾಡಲಿ ಎಂದು ಪ್ರಾರ್ಥಿಸೋಣ ಎಂದು ಜಗದ್ಗುರುಗಳು ಕರೆ ನೀಡಿದರು.

18 ಫೆಬ್ರವರಿ 2026, 16:59