ಜಗದ್ಗುರು ಲಿಯೋರವರು ಅಲ್ಬೇನಿಯಾ ಗಣರಾಜ್ಯದ ಪ್ರಧಾನಮಂತ್ರಿಯನ್ನು ಅಹ್ವಾನಿಸಿದರು ಜಗದ್ಗುರು ಲಿಯೋರವರು ಅಲ್ಬೇನಿಯಾ ಗಣರಾಜ್ಯದ ಪ್ರಧಾನಮಂತ್ರಿಯನ್ನು ಅಹ್ವಾನಿಸಿದರು  (ANSA)

ಜಗದ್ಗುರು ಲಿಯೋರವರು ಅಲ್ಬೇನಿಯಾ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರು

ಜಗದ್ಗುರು XIVನೇ ಲಿಯೋರವರು ಗುರುವಾರ ವ್ಯಾಟಿಕನ್‌ನಲ್ಲಿ ಅಲ್ಬೇನಿಯಾ ಗಣರಾಜ್ಯದ ಪ್ರಧಾನಮಂತ್ರಿ ಎಡಿ ರಾಮಾರವರನ್ನು ಸ್ವೀಕರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಅಲ್ಬೇನಿಯಾ ಗಣರಾಜ್ಯದ ಪ್ರಧಾನಮಂತ್ರಿ ಎಡಿ ರಾಮಾರವರನ್ನು ಸ್ವೀಕರಿಸಿದರು.

ಅನಂತರ ಪ್ರಧಾನಮಂತ್ರಿಯವರು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ಮತ್ತು ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳಿಗಾಗಿ ಇರುವ ಉಪ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಗರ್ ರವರನ್ನು ರಾಜ್ಯ ಕಾರ್ಯಾಲಯದಲ್ಲಿ ಭೇಟಿಯಾದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯಿಂದ ಬಿಡುಗಡೆಯಾದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯಾಲಯದಲ್ಲಿ ನಡೆದ ಸಂಭಾಷಣೆಗಳು ಸ್ನೇಹಪೂರ್ಣವಾಗಿದ್ದವು. ಅವುಗಳಲ್ಲಿ ಧರ್ಮ ಸಭೆಯ ಸಮುದಾಯ ಮತ್ತು ನಾಗರಿಕ ಸಮಾಜದ ನಡುವಿನ ಸಂಬಂಧಗಳಿಗೆ ಸಂಬಂಧಿಸಿದ ಸಾಮಾನ್ಯ ಆಸಕ್ತಿಯ ವಿಷಯಗಳು ಚರ್ಚಿಸಲ್ಪಟ್ಟವು ಎಂದು ತಿಳಿಸಲಾಗಿದೆ.

ಇದಲ್ಲದೆ, ವ್ಯಾಟಿಕನ್ ಪ್ರಕಟಣೆ ಮುಂದುವರೆಸಿ ಹೇಳುವಂತೆ, ಪ್ರಾದೇಶಿಕ ವಿಷಯಗಳ ಮೇಲೂ ಗಮನ ಹರಿಸಲಾಯಿತು. ಅದರಲ್ಲಿ ಪಶ್ಚಿಮ ಬಾಲ್ಕನ್ ದೇಶಗಳ ಪರಿಸ್ಥಿತಿ ಮತ್ತು ಯುರೋಪಿಯನ್ ಯೂನಿಯನ್‌ಗೆ ಸಂಪೂರ್ಣ ಏಕೀಕರಣದತ್ತ ಅಲ್ಬೇನಿಯಾದ ಪ್ರಯಾಣ ಕೂಡ ಸೇರಿವೆ.

05 ಫೆಬ್ರವರಿ 2026, 14:46